ಸದಾಶಿವ ವರದಿ ಹಾಗೂ ಒಳ ಮಿಸಲಾತಿ ವಿರೋಧಿಸಿ ಲಕ್ಷ್ಮೇಶ್ವರದಿಂದ ಪಾದಯಾತ್ರೆ.

 

ಡಿ.27 ರಂದು ಲಕ್ಷ್ಮೇಶ್ವರದಿಂದ ಪಾದಯಾತ್ರೆ ಮೂಲಕ ಶಿಗ್ಗಾಂವನ ಮುಖ್ಯಮಂತ್ರಿ ಮನೆ ಮುಂದೆ ಡಿ.28 ಕ್ಕೆ ಧರಣಿ ಸತ್ಯಾಗ್ರಹ.

ಲಕ್ಷ್ಮೇಶ್ವರ: ಸದಾಶಿವ ವರದಿ ವಿರೋಧ ಸಮುದಾಯಗಳ ಸ್ವಾಮಿಜಿಗಳು ಮತ್ತು ಸಮಾಜದ ಮುಖಂಡರ ನೇತೃತ್ವದಲ್ಲಿ ಶಿಗ್ಗಾವ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು. ಡಿ 27 ರಂದು ಲಕ್ಷೇಶ್ವರದಿಂದ ಬೃಹತ್ ಪಾದಯಾತ್ರೆ ಮೂಲಕ ಸವಣೂರ ಮಾರ್ಗವಾಗಿ ಶಿಗ್ಗಾವಿಗೆ ತಲುಪಿ ಡಿ. 28 ರಂದು ಶಿಗ್ಗಾವಿಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆ ಹತ್ತಿರ ಬೃಹತ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಉದ್ದೇಶಿಸಿ ಮಾತನಾಡಿದ ಬಂಜಾರ ಸಮಾಜದ ತಾಲೂಕ ಅಧ್ಯಕ್ಷ ಶಿವಣ್ಣ ಲಮಾಣಿ ಚಳಿಗಾಲದ ಅಧಿವೇಶನದಲ್ಲಿ ಸದಾಶಿವ ವರದಿಯನ್ನು ಅನುಷ್ಠಾನ ಮಾಡಲು ಸರ್ಕಾರ ತಯಾರಿಯಾಗಿದ್ದು, ಸದಾಶಿವ ಆಯೋಗದ ವರದಿ ಮತ್ತು ಒಳ ಮಿಸಲಾತಿ ವಿರೋಧಿಸಿ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶವನ್ನು ನೀಡಲು ಬೃಹತ್ ಪಾದಯಾತ್ರೆಯ ಮೂಲಕ ಶಿಗ್ಗಾವದಲ್ಲಿ ದೊಡ್ಡ ಸಮಾವೇಶ ಮಾಡುವುದರ ಮೂಲಕ ಸದಾಶಿವ ಆಯೋಗವನ್ನು ತಿರಸ್ಕರಿಸಲುಒತ್ತಾಯಿಸುವದು ಅನಿವಾರ್ಯವಾಗಿದೆ. ಹಾಗಾಗಿ ಸದಾಶಿವ ವರದಿ ವಿರೋಧ ಸಮುದಾಯಗಳಾದ ಲಂಬಾಣಿ, ಭೋವಿ,ವಡ್ಡರ, ಕೊರಚ, ಕೊರಮ, ದಾಸರು, ಚೆನ್ನದಾಸರು ಸೇರಿದಂತೆ ಸದಾಶಿವ ವಿರೋಧಿ ಸಮುದಾಯಳ ಸ್ವಾಮಿಜಿಗಳು ಮತ್ತು ಸಮಾಜದ ಮುಖಂಡರು ಸಭೆಗೆ ಭಾಗಿಯಾಗಿ ಸಭೆಯನ್ನು ಯಶಸ್ವಿಗೊಳಿಸಲಿದ್ದಾರೆ.ಲಕ್ಷ್ಮೇಶ್ವರ ಪಟ್ಟಣದಿಂದ ಪ್ರಾರಂಭ ಆಗುವ ಪಾದಯಾತ್ರೆಯಲ್ಲಿ 40 ಶ್ರೀ ಗಳ ನೇತೃತ್ವದಲ್ಲಿ, 10000 ಜನರು ಭಾಗವಹಿಸುತ್ತಾರೆ. ಅದಲ್ಲದೇ ವಿವಿಧ ಜಿಲ್ಲೆಗಳಿಂದ ಡಿ.28 ರಂದು ಶಿಗ್ಗಾಂವನಲ್ಲಿ ನಡೆಯುವ ಧರಣಿ ಸತ್ಯಾಗ್ರಹದಲ್ಲಿ 50 ಸಾವಿರ ಜನರಿಗಿಂತ ಹೆಚ್ಚಿಗೆ ಸೇರಿ ನಮ್ಮ ಹಕ್ಕಿನ ಹೋರಾಟಕ್ಕಾಗಿ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ವಿಚಾರ

Sun Dec 25 , 2022
  ಧಾರವಾಡದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿಕೆನೋಡೋಣ ಏನಾಗುತ್ತದೆ ಅಂತಾಯಾವ ರೀತಿ ಪರಿಣಾಮ ಆಗಬಹುದು ನೋಡುತ್ತೇವೆಪಕ್ಷದ ನಾಯಕರ ಜೊತೆ ಮಾತನಾಡುತ್ತೇವೆಕೆಜೆಪಿಯಂತೆ ಪರಿಣಾಮ ಆಗಬಹುದೆಂಬ ವಿಚಾರಅದರಿಂದ ಏನಾಗಬಹುದು ಅಂತಾ ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇವೆಅದಕ್ಕೆ ನಮ್ಮ ಪಕ್ಷ ಏನು ತಿರ್ಮಾನ ಕೈಗೊಳ್ಳುತ್ತಾರೆ ನೋಡೋಣನಮ್ಮ ಜೊತೆ ರೆಡ್ಡಿ ಮತ್ತು ಯಾರೂ ಮಾತನಾಡಿಲ್ಲಇತ್ತೀಚೆಗೆ ರೆಡ್ಡಿ ವೈಯಕ್ತಿಕ ಸಂಪರ್ಕದಲ್ಲಿ ಇರಲಿಲ್ಲಹೀಗಾಗಿ ಪಕ್ಷ ಸ್ಥಾಪನೆ ಮುನ್ಸೂಚನೆ ನಮಗೆ ಗೊತ್ತಿಲ ರೆಡ್ಡಿ ಪಕ್ಷ ಬಿಜೆಪಿ ಬಿ ಟೀಮ್ ಎಂಬ […]

Advertisement

Wordpress Social Share Plugin powered by Ultimatelysocial