ರಾಜ್ಯದ ಆಸಕ್ತ ಜನರಿಗೆ ಸೇವೆ ಸಲ್ಲಿಸುವುದೇ ಜಯ ಕರ್ನಾಟಕದ ಕುಟುಂಬದ ಕಾಯಕ: ರಾಜ್ಯ ಕಾರ್ಯಾಧ್ಯಕ್ಷ ರಾಮಚಂದ್ರಯ್ಯ

ಕೆ ಆರ್ ಪೇಟೆ ತಾಲೂಕು ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಸೋಮಶೇಖರ್ ಮತ್ತು ಪದಾಧಿಕಾರಿಗಳು ನೇತೃತ್ವದಲ್ಲಿ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕೆ ಖಾಸಿಂಖಾನ್ ಸಮುದಾಯ ಭವನ ಪಕ್ಕ ಆವರಣದಲ್ಲಿ ಆಯೋಜಿಸಿ ಕಾರ್ಯಕ್ರಮವನ್ನು ತಾಲೂಕಿನ ಹೆಸರಾಂತ ಸೈ ಡ್ಯಾನ್ಸ್ ಸ್ಕೂಲ್ ಮಕ್ಕಳು,ಸನ್ನಿ ಡ್ಯಾನ್ಸ್ ಸ್ಕೂಲ್ ಹಾಗೂ ಸರ್ಕಾರಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮದ ಮುಖಾಂತರ ಚಾಲನೆ ನೀಡಿ,ಕೊರೋನಾ ವಾರಿಯರ್ಸ್ ಹಾಗೂ ಗಣ್ಯರಿಂದ,ಮತ್ತು ರಾಜ್ಯ ಹಾಗೂ ತಾಲೂಕು ಮಟ್ಟದ ಜಯಕರ್ನಾಟಕ ಕುಟುಂಬದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಂದ ಸುಂದರ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮುಖಾಂತರ ಉದ್ಘಾಟಿಸಿದರು,ಇತ್ತೀಚೆಗೆ ಹಗಲಿಕೆಯದ ದೇಶದ ಸೇನಾ ಮುಖ್ಯಸ್ಥ ಬಿಪಿನ್ ರಾವತ, ಕನ್ನಡ ಚಲನಚಿತ್ರ ಯುವ ನಟ ಪುನೀತ್ ರಾಜಕುಮಾರ್. ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ರವರಿಗೆ ಮೌನಾಚರಣೆ ಆಚರಿಸುವ ಮುಖಾಂತರ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು,

ಜಯಕರ್ನಾಟಕ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ರಾಮಚಂದ್ರಯ್ಯ ಮಾತನಾಡಿ ಹಲವಾರು ಸಂಘಟನೆ ಹೋರಾಟ ಮೂಲಕ ಹೊರಹೊಮ್ಮಿದರೆ ನಮ್ಮ ಜಯ ಕರ್ನಾಟಕ ಸಂಘಟನೆ ಹೋರಾಟವನ್ನು ಮೈಗೂಡಿಸಿಕೊಂಡು ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಅವರ ಮನಸ್ಸಿನಂತೆ ಸೇವಾ ಮನೋಭಾವದಿಂದ ಆಸಕ್ತ ಜನರಿಗೆ ಸೇವೆಸಲ್ಲಿಸುತ್ತಾ ನೊಂದ ಜನರಿಗೆ ಧ್ವನಿಯಾಗುತ್ತ ಬಡಜನರು ಮತ್ತು ಸರ್ಕಾರದ ಮಧ್ಯೆ ಸೇತುವೆಯಂತೆ ನಿಂದು ಯೋಜನೆಗಳನ್ನು ಸಮರ್ಪಕವಾಗಿ ಸಿಗುವಂತೆ ಕಾರ್ಯನಿರ್ವಹಿಸುತ್ತ ಬೆಳೆಯುವ ಸಿರಿ ಮೊಳಕೆ ಎಂಬಂತೆ ರಾಜ್ಯಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ಜಯಕರ್ನಾಟಕ ಕುಟುಂಬ ಸದೃಢವಾಗುತ್ತದೆ ನಾಡು-ನುಡಿ ಜಲಕ್ಕಾಗಿ ಹೋರಾಟದ ಹಾದಿಗಳು ಹಲವು ಅದರಂತೆ ಕೆ ಆರ್ ಪೇಟೆ ನನ್ನ ಕುಟುಂಬ ಇಂಥ ಸುಂದರ ಕಾರ್ಯಕ್ರಮ ರೂಪಿಸುವ ಮುಖಾಂತರ ನಾಡ ದೇವತೆಗೆ ಅರ್ಪಿಸಿರುವುದು ಸಂತೋಷದ ವಿಷಯ ಎಂದು ಸಂತೋಷ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಯೋಗಣ್ಣ ಕೊಡಗು ಜಿಲ್ಲೆ ಪ್ರವಾಹದ ಮುಳುಗಿರುವ ಸಮಯದಲ್ಲಿ ಅಲ್ಲಿನ ಜನರಿಗೆ ಮೂಲಭೂತ ಸೌಕರ್ಯಕ್ಕಾಗಿ ರಾಜ್ಯಾದ್ಯಂತ ಸಹಾಯ ಹಸ್ತ ಪ್ರಾರಂಭಿಸಿದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಸಹಾಯ ಹಸ್ತ ನೀಡಿದ್ದು ಕೆ ಆರ್ ಪೇಟೆ ತಾಲೂಕು ನನ್ನ ಜಯ ಕರ್ನಾಟಕ ಕುಟುಂಬ ತಪ್ಪಾಗಲಾರದು ಅದರಂತೆ ದಿನದಿನಕ್ಕೆ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಸಂಘಟನೆ ಬಲ ವಾಗುತ್ತಿರುವ ನಡುವೆ ಇಂತಹ ಸುಂದರ ಕಾರ್ಯಕ್ರಮವನ್ನು ರೂಪಿಸುವ ಮುಖಾಂತರ ನಾಡ ದೇವತೆಗೆ ಗೌರವಿಸಿ ಕೊರೋನಾ ವಾರಿಯರ್ಸ್ ಗಳಿಗೆ ಪೌರಕಾರ್ಮಿಕರಿಗೆ ಗೌರವಿಸಿರುವುದು ಇರುವುದು ಶ್ಲಾಘನೀಯ ಎಂದು ತಿಳಿಸಿದರು.

ಕೊರೊನಾ ವಾರಿಯರ್ಸ್ ಗಳಾಗಿ ಜೀವಹಂಗು ತೊರೆದು ಕರ್ತವ್ಯ ನಿರ್ವಹಿಸಿದ ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿ ರವಿ.ಡಾ: ಶ್ರೀಕಾಂತ್ ಕೆ ಆರ್ ಪೇಟೆ. ಡಾ ದಿವಾಕರ್.ಡಾ: ಹರ್ಷ ಸರ್ಕಾರಿ ಆಸ್ಪತ್ರೆ ಸಿಂದಘಟ್ಟ. ಡಾ: ಅರವಿಂದ. ಪೌರಕಾರ್ಮಿಕರಿಗೆ. ಕೋವಿಡ್ ನಲ್ಲಿ ಉಚಿತ ಸುಸಂಸ್ಕಾರ ನೆರವೇರಿಸಿದವರಿಗೆ. ದೇಶ ಕಾಯೋಯೋಧರಿಗೆ.ನರ್ಸ್ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಸಾಧಿಸಿರುವ ಗಣ್ಯರಿಗೆ ಗೌರವಿಸುವ ಮೂಲಕ ಕಾರ್ಯಕ್ರಮದ ಅರ್ಥಪೂರ್ಣ ಮೆರಗು ತುಂಬಲಾಯಿತು..

Please follow and like us:

Leave a Reply

Your email address will not be published. Required fields are marked *

Next Post

ಮಾವನನ್ನೇ ಹೊಡೆದು ಕೊಂದ ಸೊಸೆ

Fri Dec 17 , 2021
ಸೊಸೆಯಿಂದ ಹಲ್ಲೆಗೊಳಗಾದ ಹಿರಿಯ ನಾಗರಿಕರೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ರಾಜಸ್ಥಾನದ ಬುಂದಿಯಲ್ಲಿ ಜರುಗಿದೆ. ರಾಮ್ಲಾಲ್ ಮೇಘ್ವಾಲ್ ಎಂಬ 60ರ ಈ ವ್ಯಕ್ತಿಯ ತಲೆ ಮೇಲೆ ಅವರ ಸೊಸೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರಿಂದ, ಆಸ್ಪತ್ರೆಯ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ರಾತ್ರಿ ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಂದಿ ಬಳಿಯ ಅಂತ್ರಾ ಗ್ರಾಮದಲ್ಲಿ ನಡೆದ ಈ ಘಟನೆಯಲ್ಲಿ, ತಮ್ಮ ಮಗ ಮನೆಯಲ್ಲಿ ಇಲ್ಲದ ವೇಳೆ ಸೊಸೆಯೊಂದಿಗೆ ಜಗಳ ನಡೆದು, ಆ ವೇಳೆ, 30 […]

Advertisement

Wordpress Social Share Plugin powered by Ultimatelysocial