ಕೆಜಿಎಫ್ ಚಾಪ್ಟರ್​ ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿ

 

ಕೊನೆಗೂ ಕೆಜಿಎಫ್ ಚಾಪ್ಟರ್ 2 ಚಿತ್ರದ ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಇದೇ ತಿಂಗಳ 27ರಂದು ಚಿತ್ರ ನಿರ್ಮಾಣದ ಸಂಸ್ಥೆ ಹೊಂಬಾಳೆ ಯೂಟ್ಯೂಬ್ ಚಾನೆಲ್​ನಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರದ ಟ್ರೇಲರ್ ಬಿಡುಗಡೆ ಆಗಲಿದೆ.
ರಾಕಿಂಗ್ ಸ್ಟಾರ್​ ಯಶ್ ನಾಯಕನಾಗಿ ನಟಿಸಿರುವ ಈ ಚಿತ್ರದ ಮೊದಲ ಭಾಗ ಈಗಾಗಲೇ ಹೊಸ ಇತಿಹಾಸವನ್ನೇ ಬರೆದಿದೆ. ಇದೀಗ ಅದರ ಮುಂದುವರಿದ ಭಾಗದ ಮೇಲಿನ ಕುತೂಹಲಕ್ಕೂ ದಿನಗಣನೆ ಶುರುವಾಗಿದ್ದು, ಏ. 14ರಂದು ವಿಶ್ವದಾದ್ಯಂತ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ.
ಎಲ್ಲ ಅಂದುಕೊಂಡಂತೆ ಆಗಿದ್ದರೆ, ಕಳೆದ ವರ್ಷವೇ ಈ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಬಿಡುಗಡೆಯನ್ನು ಮುಂದೂಡಲ್ಪಟ್ಟಿತ್ತು. ಇದೀಗ ಅದೆಲ್ಲದಕ್ಕೂ ಉತ್ತರ ಎಂಬಂತೆ ಸಿನಿಮಾ ಕಳೆದ ಸಲ ಘೋಷಿಸಿದ ದಿನದಂದೇ ತೆರೆಗೆ ಬರುತ್ತಿದೆ. ಹೊಂಬಾಳೆ ಸಿನಿಮಾ ಸಂಸ್ಥೆಯ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ಎರಡನೇ ಭಾಗದಲ್ಲಿ ಸಂಜಯ್ ದತ್, ರವೀನಾ ಟಂಡನ್ ಸೇರಿ ಸ್ಟಾರ್ ಕಲಾವಿದರ ದಂಡೇ ಇದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಾಲು ಮಹೇಂದ್ರ

Fri Mar 4 , 2022
ಬಾಲು ಮಹೇಂದ್ರ ‘ಕೋಕಿಲ’ ಕನ್ನಡ ಚಲನಚಿತ್ರವೂ ಸೇರಿದಂತೆ ಅನೇಕ ಪ್ರಖ್ಯಾತ ಚಲನಚಿತ್ರಗಳ ನಿರ್ದೇಶನಕ್ಕೆ ಮತ್ತು ಶ್ರೇಷ್ಠ ಛಾಯಾಗ್ರಹಣಕ್ಕೆ ಹೆಸರಾಗಿದ್ದವರು ಬಾಲು ಮಹೇಂದ್ರ. ಅವರು ಈ ಲೋಕವನ್ನಗಲಿದ ದಿನ ಫೆಬ್ರವರಿ 13, 2014. 1939ರ ಮೇ 20ರಂದು ಶ್ರೀಲಂಕಾದಲ್ಲಿ ಜನಿಸಿದ ಬಾಲು ಮಹೇಂದ್ರ ಅವರು, ಚಲನಚಿತ್ರ ಛಾಯಾಗ್ರಾಹಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ನಂತರ ಚಲನಚಿತ್ರ ನಿರ್ದೇಶಕರಾಗಿ ಮುಂಚೂಣಿಗೆ ಬಂದ ಅವರು, ಪ್ರಶಸ್ತಿ ಪುರಸ್ಕೃತ ಚಿತ್ರಗಳಾದ ‘ಮೂನ್ಡ್ರಾಮ್ ಪಿರೈ’ (ಇದೇ ಚಿತ್ರ […]

Advertisement

Wordpress Social Share Plugin powered by Ultimatelysocial