2 ಪವರ್‌ ಸೆಂಟರ್‌ ವಿರುದ್ಧ ದಿಕ್ಕಿಗೆ ಮುಖ ಮಾಡಿ ನಿಂತಿದೆ: ಕನಕಪುರ ಬಂಡೆ ಪುಡಿಯಾಗುವುದು ನಿಶ್ಚಿತವೇ?

ಬೆಂಗಳೂರು: ಕಾಂಗ್ರೆಸ್ ಪಕ್ಷ ಯಾವಾಗಲೂ ಸಾಮೂಹಿಕ ನಾಯಕತ್ವದಲ್ಲಿಯೇ ನಂಬಿಕೆ ಇರಿಸಿದೆ. ಹೀಗಾಗಿ, ಮುಂದಿನ ವಿಧಾನಸಭಾ ಚುನಾವಣೆಯನ್ನೂ ಸಾಮೂಹಿಕ ನಾಯಕತ್ವದಲ್ಲಿಯೇ ಎದುರಿಸಲಾಗುತ್ತದೆ’ ಎಂದಿರುವ ಸಿದ್ದರಾಮಯ್ಯ ಅವರ ಮಾತಿಗೆ ರಾಜ್ಯ ಬಿಜೆಪಿ ಪ್ರತಿಕ್ರಿಯಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ‘ಪರಿಷತ್‌ ಚುನಾವಣೆಯಲ್ಲಿ ಹಿಂದಿನದ್ದಕಿಂತ ಕೆಲವು ಸ್ಥಾನ ಕಳೆದುಕೊಂಡರೂ ರಾಜ್ಯವನ್ನೇ ಗೆದ್ದ ಸಂಭ್ರಮ ತೋರಿಸಿದ ಕಾಂಗ್ರೆಸ್ ಪರಿಸ್ಥಿತಿ ಈಗ ಅಯೋಮಯವಾಗಿದೆ. ಎರಡು ಪವರ್‌ ಸೆಂಟರ್‌ ವಿರುದ್ಧ ದಿಕ್ಕಿಗೆ ಮುಖ ಮಾಡಿ ನಿಂತಿದೆ. ನಾಯಕತ್ವದ ಕುರಿತು ಶೀತಲ ಸಮರ ಆರಂಭವಾಗಿದೆ’ ಎಂದು ಹೇಳಿದೆ.

‘ಕನಕಪುರ ಬಂಡೆ ಪುಡಿಯಾಗುವುದು ನಿಶ್ಚಿತವೇ? ಡಿಕೆಶಿಯ ವೇಗವನ್ನು ಸಿದ್ದರಾಮಯ್ಯಗೆ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಡಿಕೆಶಿ ಅವರು ತಾನು ಸಿಎಂ ಆಗುವ ಕನಸಿಗೆ ಪೂರಕವಾಗಿ ತಮ್ಮ ನಿಷ್ಠಾವಂತರ ಪಡೆ ಕಟ್ಟುತ್ತಿದ್ದಾರೆ. ಇದು ತನಗೆ ಮಗ್ಗುಲ ಮುಳ್ಳಾಗಬಹುದು ಎಂಬ ಭಯದಿಂದ ಸಿದ್ದರಾಮಯ್ಯ ತನ್ನ ಆಪ್ತರ ಮೂಲಕ ಡಿಕೆಶಿ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ’ ಎಂದು ಆರೋಪಿಸಿರುವ ಬಿಜೆಪಿ, ಗೆಲ್ಲುವವರ್ಯಾರು? ಎಂದು ಪ್ರಶ್ನಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ದೇಶವನ್ನು ಉದ್ದೇಶಿಸಿ ಪ್ರಧಾನಿ ಭಾಷಣ: ಮುಂದಿನ ದಿನಗಳ ಮುನ್ಸೂಚನೆ

Mon Dec 27 , 2021
ಸುಮಾರು ಐದು ವರ್ಷಗಳ ಹಿಂದೆ ರಾತ್ರಿ ಎಂಟು ಗಂಟೆಗೆ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿದ್ದರು, ಅದು ಯಾವ ಕಾರಣಕ್ಕಾಗಿ ಎನ್ನುವುದು ಗೊತ್ತಿರುವ ವಿಚಾರ. ಅಲ್ಲಿಂದ, ಮುಂದೆ ರಾಷ್ಟ್ರವನ್ನು ಅವರು ಮಾತನಾಡುತ್ತಾರೆಂದರೆ, ಸಾರ್ವಜನಿಕರ ಗಮನ ವಿಶೇಷವಾಗಿ ಅದರ ಮೇಲೆ ನೆಟ್ಟುತ್ತಿತ್ತು. ಮಾರ್ಚ್ 24, 2021ಕ್ಕೆ ಪ್ರಧಾನಿ ಮತ್ತೆ ಭಾಷಣವನ್ನು ಮಾಡಿ ಲಾಕ್ಡೌನ್ ಘೋಷಣೆ ಮಾಡಿದ್ದರು. ಇದಾದ ನಂತರ, ಅವರ ಪ್ರತೀ ಭಾಷಣಕ್ಕೆ ಜನರಿಂದ ಸಕಾರಾತ್ಮಕ/ನಕಾರಾತ್ಮಕವಾಗಿಯೋ ಉತ್ತಮ ಸ್ಪಂದನೆಯಂತೂ ಸಿಗುತ್ತಿತ್ತು. […]

Advertisement

Wordpress Social Share Plugin powered by Ultimatelysocial