ಹೀರೋ ಆಗಿ ಗುರುತಿಸಿಕೊಂಡಿದ್ದ ವ್ಯಕ್ತಿಯೇ ದಂಧೆಯಲ್ಲಿ ಪ್ರಮುಖ ಆರೋಪಿಯಾಗಿದ್ದನೆ.

ಟನೆ ಬಿಟ್ಟು ಹೆಣ್ಣುಮಕ್ಕಳನ್ನು ಬಳಸಿಕೊಂಡು ದಂಧೆ ಶುರು ಮಾಡಿದ ಸ್ಯಾಂಡಲ್​ವುಡ್   ನಟ ಈಗ ಅರೆಸ್ಟ್   ಆಗಿದ್ದಾರೆ. ಲೊಕ್ಯಾಂಟೋ ಆಯಪ್ ನ ಹಿಂದೆ ಬಿದ್ದಂತಹ ನಟ ಈಗ ಕಂಬಿ ಎಣಿಸುತ್ತಿದ್ದಾರೆ. ಹುಡುಗಿಯರ ಫೋಟೋಗಳನ್ನು ಬಳಸಿಕೊಂಡು ನಕಲಿ ಪ್ರೊಫೈಲ್ ಬಳಸಿ ದಂಧೆ ಮಾಡುತ್ತಿದ್ದ ನಟನನ್ನು ಪೊಲೀಸರು   ಬಂಧಿಸಿದ್ದಾರೆ.
ಹೀರೋ ಆಗಿ ಗುರುತಿಸಿಕೊಂಡಿದ್ದ ವ್ಯಕ್ತಿಯೇ ದಂಧೆಯಲ್ಲಿ ಪ್ರಮುಖ ಆರೋಪಿಯಾಗಿದ್ದು ಸಂಜು ಅಲಿಯಾಸ್ ಮಂಜುನಾಥ್ ಅರೆಸ್ಟ್ ಆಗಿದ್ದಾರೆ.

ಹೆಣ್ಣುಮಕ್ಕಳನ್ನು ಬಳಸಿಕೊಂಡು ಸುಲಿಗೆ ಮಾಡುತ್ತಿದ್ದ ಗ್ಯಾಂಗ್ ನ ಪ್ರಮುಖ ಆರೋಪಿ ಸಂಜು ನಟನೆ ಬಿಟ್ಟು ಹೆಣ್ಣುಮಕ್ಕಳ ಫೋಟೊ ಬಳಸಿ ಹಣ ಪೀಕುವ ದಂಧೆಗಿಳಿದಿದ್ದರು. ನಾಯಕ ನಟನಾಗಿ ಗುರುತಿಸಿಕೊಂಡಿದ್ದ ಮಂಜುನಾಥ್ ಕಾಮುಕರ ಅಡ್ಡೆಯಾಗಿರುವ ಲೊಕ್ಯಾಂಟೋ ಆಯಪ್​ನಲ್ಲಿ ಸಕ್ರಿಯರಾಗಿದ್ದರು.

ಈ ಆಯಪ್ ನ್ನು ಬಳಸಿಕೊಂಡು ಸುಲಿಗೆ ಮಾಡ್ತಿದ್ದ ನಾಯಕ‌ ನಟ 2019 ರರಲ್ಲಿ ಬಿಡುಗಡೆಯಾಗಿದ್ದ ನ್ಯೂರಾನ್ ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದರು. ರೀಲ್ ಕಥೆಯ ನಾಯಕನೇ ರಿಯಲ್ ಘಟನೆಯ ಪ್ರಮುಖ ಆರೋಪಿಯಾಗಿದ್ದು ಎಲ್ಲರಿಗೂ ಶಾಕ್ ಕೊಟ್ಟಿದೆ.

ಸೈಕೋಲಾಜಿ ಸಂಬಂಧಪಟ್ಟಂತಹ ಚಿತ್ರದಲ್ಲಿ ನಟಿಸಿದ್ದ ನಾಯಕ ನಟ ಮಂಜುನಾಥ್ ನ್ಯೂರಾನ್ ಎಂಬ ಚಿತ್ರದಲ್ಲಿ ನಟಿಸಿ ಕನ್ನಡ ಪ್ರೇಕ್ಷಕರ ಮನಸು ಗೆದ್ದಿದ್ದರು. ನ್ಯೂರಾನ್ ಎಂಬ ಸೈಕೋಲಾಜಿ ಚಿತ್ರದಲ್ಲಿ ನಾಯಕನಾಗಿದ್ದ ಮಂಜುನಾಥ್ ಯುವ ಎಂಬ ಹೆಸರಿನಲ್ಲಿ ಇಂಟ್ರೊಡ್ಯೂಸ್ ಆಗಿದ್ದರು.

ಯುವ ಎಂದು ಹೆಸರಿಟ್ಟುಕೊಂಡು ಚಿತ್ರರಂಗಕ್ಕೆ ಪ್ರವೇಶ ನೀಡಿದ್ದ ಮಂಜುನಾಥ್ ಅಥವಾ ಸಂಜು ಲೊಕ್ಯಾಂಟೋದಲ್ಲಿ ಹುಡುಗಿಯರ ಫೋಟೋ ಬಳಸಿ ಗ್ರಾಹಕರನ್ನ ಸೆಳೆದು ಸುಲಿಗೆ ಮಾಡುವುದನ್ನೇ ಫುಲ್ ಟೈಂ ಕೆಲಸ ಮಾಡಿಕೊಂಡಿದ್ದರು.

ಅನ್ ಲೈನ್ ಮೂಲಕ ಹಣ ಪೀಕುತ್ತಿದ್ದ ಸಂಜು ಅಂಡ್ ಗ್ಯಾಂಗ್ ಕುರಿತು ಸುದ್ಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಸಂಬಂಧ ತನಿಖೆಗಿಳಿದ ಪೊಲೀಸರು ಚಿತ್ರನಟ ಸೇರಿ ಆರು ಜನರನ್ನ ಬಂಧಿಸಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತೀಯ ಜನತಾ ಪಾರ್ಟಿ ಶಾಹಪುರ್ ಮಂಡಲ ವತಿಯಿಂದ ಪತ್ರಿಕಾಗೋಷ್ಠಿ ನಡೆಸಲಾಯಿತು.

Tue Jan 17 , 2023
ಶಹಾಪುರ ನಗರ ಪ್ರವಾಸಿ ಮಂದಿರದಲ್ಲಿ ನಡೆದ ಭಾರತೀಯ ಜನತಾ ಪಾರ್ಟಿ ಶಾಹಪುರ್ ಮಂಡಲ ವತಿಯಿಂದ ಪತ್ರಿಕಾಗೋಷ್ಠಿ ನಡೆಸಲಾಯಿತು. ದಿನಾಂಕ 19/01/2023 ರಂದು ಆಗಮಿಸಲಿರುವ ಭಾರತದ ಪ್ರಧಾನ ಮಂತ್ರಿಗಳಾದ ವಿಶ್ವ ನಾಯಕ್ ಶೀ ನರೇಂದ್ರ ಮೋದಿಜಿ ಅವರಿಗೆ ಹೃದಯಪೂರ್ವಕ ಆದರೆ ಸ್ವಾಗತ ಎಂದು ಹಾಗೂ ಶಾಹಾಪುರ ಮತಕ್ಷೇತ್ರ ದಿಂದ ಸುಮಾರ ಐವತ್ತು ಸಾವಿರಕ್ಕೂ ಹೆಚ್ಚು ಜನ ಬರುತ್ತಾರೆ. ಎಂದು ಮಾಜಿ ಶಾಸಕರಾದ ಗುರು ಪಾಟೀಲ್ ಶಿರವಾಳ ಹಾಗೂ ಬಿಜೆಪಿ ಯುವ ಮುಖಂಡರು […]

Advertisement

Wordpress Social Share Plugin powered by Ultimatelysocial