2022ರಲ್ಲಿ ಸ್ಯಾಂಡಲ್​ವುಡ್​​ಗೆ ಎಂಟ್ರಿ ಕೊಟ್ಟ ಸ್ಟಾರ್ ಕಿಡ್ಸ್ ಇವರು.

 

ನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎದ್ದಾಗಿದೆ. ಕಾಂತಾರ (Kantara Movie) ಸಿನಿಮಾ ಕನ್ನಡದ ಹೆಮ್ಮೆಯನ್ನ ಹೆಚ್ಚಿಸಿಯೂ ಆಗಿದೆ. ಇದರ ಮಧ್ಯ ಸ್ಯಾಂಡಲ್​​ವುಡ್​​ ಸ್ಟಾರ್​​ ಮಕ್ಕಳು 2022 ರ ಸಾಲಿನಲ್ಲಿ (Sandalwood Star Kids Entry) ಅದೃಷ್ಟ ಪರೀಕ್ಷೆ ಮಾಡಿದ್ದಾರೆ.
ಈ ಮೂಲಕ ಕನ್ನಡ ಇಂಡಸ್ಟ್ರೀಗೂ ಕಾಲಿಟ್ಟಿದ್ದಾರೆ. ಇನ್ನು ಕೆಲವರ ಸಿನಿಮಾ ಈಗಷ್ಟೆ ಸೆಟ್ಟೇರಿದೆ. ಇದಕ್ಕೂ ಹೆಚ್ಚಾಗಿ ಈ ವರ್ಷ ಒಂದೇ ಚಿತ್ರದಲ್ಲಿಯೇ ದಂಡಿಯಾಗಿಯೇ (Guru Shishyaru Cinema) ಸ್ಟಾರ್​​ ಮಕ್ಕಳು ರಂಗ ಪ್ರವೇಶ ಮಾಡಿದ್ದಾರೆ. ಇನ್ನುಳಿದಂತೆ ಬೇರೆ ಬೇರೆ ನಟರ ಮಕ್ಕಳು ಬೇರೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಹಾಗೆ ಈ ವರ್ಷ (Kannada Film Industry) ಸಿನಿಮಾರಂಗಕ್ಕೆ ಕಾಲಿಟ್ಟವರು ಯಾರು? ಕಾಲಿಡ್ತಾರೆ ಅನ್ನೋ ಸುದ್ದಿಯಲ್ಲಿರೋರು ಮತ್ಯಾರು? ಈ ಮಾಹಿತಿ ಇಲ್ಲಿದೆ.
ಒಂದೇ ಚಿತ್ರದಲ್ಲಿ ಕನ್ನಡ ಸ್ಟಾರ್ ಮಕ್ಕಳ ಸಖತ್ ಎಂಟ್ರಿ
ಕನ್ನಡ ಚಿತ್ರರಂಗಕ್ಕೆ 2022 ರಲ್ಲಿ ಕನ್ನಡದ ಸ್ಟಾರ್ ಮಕ್ಕಳು ಪ್ರವೇಶ ಮಾಡಿದ್ದಾರೆ. ಆ ಲೆಕ್ಕದಲ್ಲಿ ದೊಡ್ಡಮಟ್ಟದಲ್ಲಿಯೇ ಒಂದೇ ಚಿತ್ರದಲ್ಲಿ ಕನ್ನಡದ ಹೆಸರಾಂತ ಕಲಾವಿದರು ಮಕ್ಕಳು ಪ್ರವೇಶ ಪಡೆದಿದ್ದಾರೆ. ಆ ಚಿತ್ರದ ಹೆಸರು ಗುರು ಶಿಷ್ಯರು.ಸ್ಯಾಂಡಲ್​ವುಡ್​​ಗೆ ಎಂಟ್ರಿ ಕೊಟ್ಟ ಸ್ಟಾರ್  ಕಿಡ್ಸ್ಈ ಚಿತ್ರ ಒಂದು ರೀತಿ ಕಲಾವಿದರ ಮಕ್ಕಳಿಗೆ ಸಿನಿಮಾ ಪ್ರವೇಶಕ್ಕೆ ವೇದಿಕೆನೆ ಆಗಿತ್ತು. ಇದರಿಂದ ಹಾಸ್ಯ ನಾಯಕ ನಟ ಶರಣ್ ಪುತ್ರ ಹೃದಯ್, ನೆನಪಿರಲಿ ಪ್ರೇಮ್ ಪುತ್ರ ಏಕಾಂತ್, ನವೀನ್ ಕೃಷ್ಣ ಅವರ ಪುತ್ರ ಹರ್ಷಿತ್, ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಈ ಚಿತ್ರದ ಮೂಲಕವೇ ಎಂಟ್ರಿ ಕೊಟ್ಟಿದ್ದಾರೆ.ಸ್ಟಾರ್ಮಕ್ಕಳ ಪ್ರವೇಶಕ್ಕೆ ವೇದಿಕೆಯಾದಗುರು ಶಿಷ್ಯರು ಸಿನಿಮಾ ನಿಜಕ್ಕೂ ವಿಶೇಷ ಸಿನಿಮಾನೇ ಆಗಿದೆ. ಈ ಚಿತ್ರದಲ್ಲಿ ಖೋ ಖೋ ಆಟವೇ ಪ್ರಮುಖವಾಗಿತ್ತು. ಈ ಹಿನ್ನೆಲೆಯಲ್ಲಿ ಆಟಗಾರರಾಗಿಯೆ ಸ್ಟಾರ್ ಮಕ್ಕಳು ಚಿತ್ರರಂಗ ಪ್ರವೇಶಿಸಿದರು. ಆ ಲೆಕ್ಕದಲ್ಲಿ ಹಾಸ್ಯ ನಟ ರವಿಶಂಕರ್ ಗೌಡ ಅವರ ಪುತ್ರ ಸೂರ್ಯ ರವಿಶಂಕರ್ ಕೂಡ ಈ ಚಿತ್ರದ ಮೂಲಕವೇ ಕನ್ನಡಕ್ಕೆ ಕಾಲಿಟ್ಟರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

 

Please follow and like us:

Leave a Reply

Your email address will not be published. Required fields are marked *

Next Post

ಕುಡಿತದ ಚಟವೇ ಹಾಗೆ ....ಮನುಷ್ಯನ ಕೈಯಲ್ಲಿ ಏನು ಬೇಕಾದ್ರೂ ಮಾಡಿಸುತ್ತೆ.

Wed Dec 21 , 2022
ಇಲ್ಲೊಬ್ಬ ಕುಡುಕ ತಂದೆ ಕುಡಿಯಕ್ಕೆ ಮಗ ಹಣ ಕೊಡಲಿಲ್ಲ ಅಂತ ಏನ್ ಮಾಡಿದಾನೆ ಗೊತ್ತಾ ..? ಕುಡಿತಕ್ಕೆ ಹಣ ಕೊಡದ ಮಗನಿಗೆ ಮಚ್ಚಿನೇಟು. ಹೌದು, ಕುಡುಕ ತಂದೆ ವೆಂಕಟರಾಮ್ ರೆಡ್ಡಿ ಕುಡಿಯೋಕೆ ಹಣ ಕೊಡಲಿಲ್ಲ ಅಂತ ಮಗ ಚಂದ್ರಶೇಖರ್ ತಲೆಗೆ ಮಚ್ಚಿನಿಂದ ಹಲ್ಲೆ ಮಾಡಿದಾನೆ. ಇದೆ ತಿಂಗಳ 17ರಂದು ಮಹದೇವಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ. ಕುಡಿತದ ದಾಸನಾಗಿದ್ದ ತಂದೆ ವೆಂಕಟ ರೆಡ್ಡಿ ಕಾಟ ತಾಳಲಾರದೆ ಸ್ವಂತ ಊರು ಬಂಗಾರಪೇಟೆ […]

Advertisement

Wordpress Social Share Plugin powered by Ultimatelysocial