ಕತ್ರಿನಾ ಹಾಗೂ ವಿಕ್ಕಿ ಸ್ವಿಮ್ಮಿಂಗ್​ ಪೂಲ್​ನಲ್ಲಿ ಸ್ನಾನ ಮಾಡುತ್ತಿದ್ದಾರೆ.

ವಿಕ್ಕಿ ಶರ್ಟ್​ಲೆಸ್​ ಆಗಿದ್ದಾರೆ. ಕತ್ರಿನಾ ಅವರು ವಿಕ್ಕಿಯನ್ನು ತಬ್ಬಿ ನಿಂತಿದ್ದಾರೆ.ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್  ಕಳೆದ ವರ್ಷ ಹೊಸ ಬದುಕು ಆರಂಭಿಸಿದ್ದಾರೆ.

ಸುಖವಾಗಿ ದಾಂಪತ್ಯ ಜೀವನವನ್ನು ಅವರು ನಡೆಸುತ್ತಿದ್ದಾರೆ. ಕತ್ರಿನಾ ಅವರು ವಿಕ್ಕಿ ಜತೆಗಿನ ಸಾಕಷ್ಟು ಫೋಟೋಗಳನ್ನು ಈ ಮೊದಲು ಹಂಚಿಕೊಂಡಿದ್ದಿದೆ. ಈಗ ಅವರು ಒಂದು ವಿಶೇಷ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ವಿಕ್ಕಿ ಅವರನ್ನು ತಬ್ಬಿ ನಿಂತಿದ್ದಾರೆ ಕತ್ರಿನಾ. ಈ ಫೋಟೋಗೆ ಸೆಲೆಬ್ರಿಟಿಗಳು ನಾನಾ ರೀತಿಯಲ್ಲಿ ಕಮೆಂಟ್ ಹಾಕುತ್ತಿದ್ದಾರೆ.

ಕತ್ರಿನಾ ಹಾಗೂ ವಿಕ್ಕಿ ಡಿಸೆಂಬರ್ ತಿಂಗಳಲ್ಲಿ ರಾಜಸ್ಥಾನದಲ್ಲಿ ಮದುವೆ ಆದರು. ಆ ಬಳಿಕ ಅವರು ಹನಿಮೂನ್​ಗೂ ತೆರಳಿದ್ದರು. ಬಳಿಕ ಇಬ್ಬರೂ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆದರು. ಆಗಾಗ ಸಿನಿಮಾ ಕೆಲಸಗಳಿಂದ ಬಿಡುವು ಮಾಡಿಕೊಂಡು ಇಬ್ಬರೂ ಒಟ್ಟಾಗಿ ಸಮಯ ಕಳೆಯುತ್ತಾರೆ. ವೃತ್ತಿ ಜೀವನದಲ್ಲಿ ಒಬ್ಬರ ಬೆಂಬಲಕ್ಕೆ ಒಬ್ಬರು ನಿಂತಿದ್ದಾರೆ. ಇದರ ಜತೆಗೆ ವಿಶೇಷ ಫೋಟೋಗಳನ್ನು ಇವರು ಹಂಚಿಕೊಳ್ಳುತ್ತಾರೆ.

ಕತ್ರಿನಾ ಹಾಗೂ ವಿಕ್ಕಿ ಸ್ವಿಮ್ಮಿಂಗ್​ ಪೂಲ್​ನಲ್ಲಿ ಸ್ನಾನ ಮಾಡುತ್ತಿದ್ದಾರೆ. ವಿಕ್ಕಿ ಶರ್ಟ್​ಲೆಸ್​ ಆಗಿದ್ದಾರೆ. ಕತ್ರಿನಾ ಅವರು ವಿಕ್ಕಿಯನ್ನು ತಬ್ಬಿ ನಿಂತಿದ್ದಾರೆ. ಇದಕ್ಕೆ ‘ನಾನು ಹಾಗೂ ನನ್ನವನು’ ಎನ್ನುವ ಕ್ಯಾಪ್ಶನ್​ಅನ್ನು ಕತ್ರಿನಾ ನೀಡಿದ್ದಾರೆ. ಇದಕ್ಕೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಕತ್ರಿನಾ ಹಾಗೂ ವಿಕ್ಕಿ ಜೋಡಿಯನ್ನು ಅನೇಕ ಸೆಲಬ್ರಿಟಿಗಳು ಮೆಚ್ಚಿಕೊಂಡಿದ್ದಾರೆ. ವಿಕ್ಕಿಗಿಂತ ಕತ್ರಿನಾ ವಯಸ್ಸಿನಲ್ಲಿ ದೊಡ್ಡವರು. ಆದರೆ, ಇವರ ಪ್ರೀತಿಗೆ ವಯಸ್ಸಿನ ಅಂತರ ಅಡ್ಡಿ ಆಗಿಯೇ ಇಲ್ಲ. ಪ್ರೀತಿ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದ ಇವರು ಮದುವೆ ಆಗುವ ಮೂಲಕ ಎಲ್ಲರಿಗೂ ಸರ್​ಪ್ರೈಸ್ ನೀಡಿದರು. ಈಗ ಇವರು ಹಂಚಿಕೊಂಡ ಫೋಟೋಗೆ, ಸೆಲೆಬ್ರಿಟಿಗಳು ಕೂಡ ಪ್ರತಿಕ್ರಿಯಿಸಿದ್ದಾರೆ. ಹೃತಿಕ್ ರೋಶನ್ ಅವರು ‘ಸೋ ನೈಸ್​’ ಎಂದು ಕಮೆಂಟ್ ಮಾಡಿದ್ದಾರೆ. ‘ಬ್ಯಾಂಗ್​ ಬ್ಯಾಂಗ್​’ ಸಿನಿಮಾದಲ್ಲಿ ಕತ್ರಿನಾ ಹಾಗೂ ಹೃತಿಕ್ ಒಟ್ಟಾಗಿ ನಟಿಸಿದ್ದರು. ಪ್ರಿಯಾಂಕಾ ಚೋಪ್ರಾ ಅವರು ಕಣ್ಣಿನಲ್ಲಿ ಹಾರ್ಟ್ ಇರುವ ಎಮೋಜಿ ಪೋಸ್ಟ್ ಮಾಡಿದ್ದಾರೆ.

ಕತ್ರಿನಾ ಹಾಗೂ ವಿಕ್ಕಿ ಇಬ್ಬರು ತಮ್ಮತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಟೈಗರ್ 3’ ಸಿನಿಮಾದ ಶೂಟಿಂಗ್​ನಲ್ಲಿ ಕತ್ರಿನಾ ಬ್ಯುಸಿ ಇದ್ದಾರೆ. ಈ ಸರಣಿಯ ಎರಡು ಸಿನಿಮಾಗಳು ಹಿಟ್​ ಆಗಿವೆ. ಇನ್ನೂ ಕೆಲ ಚಿತ್ರಗಳು ಅವರ ಕೈಯಲ್ಲಿ ಇವೆ. ‘ಗೋವಿಂದ ನಾಮ್​ ಮೇರಾ’ ಮೊದಲಾದ ಸಿನಿಮಾ ಕೆಲಸಗಳಲ್ಲಿ ವಿಕ್ಕಿ ತೊಡಗಿಕೊಂಡಿದ್ದಾರೆ. ಇಬ್ಬರನ್ನು ಒಟ್ಟಾಗಿ ತೆರೆಮೇಲೆ ನೋಡಲು ಫ್ಯಾನ್ಸ್ ಕಾದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆಎಲ್ ರಾಹುಲ್ ಅನ್ನು ಬಿಟ್ಟು ಹೊಸ ಮನೆಗೆ ಹೋಗುತ್ತಿರುವ ಗರ್ಲ್‌ಫ್ರೆಂಡ್!

Sat May 7 , 2022
  ಕೆಎಲ್ ರಾಹುಲ್ ಹಾಗೂ ನಟಿ ಆತಿಯಾ ಶೆಟ್ಟಿ ಪ್ರೀತಿಯಲ್ಲಿರುವ ವಿಷಯ ಗುಟ್ಟೇನಲ್ಲ. ಇನ್ನೇನು ಕೆಲವೇ ತಿಂಗಳಲ್ಲಿ ಈ ಜೋಡಿ ವಿವಾಹ ಸಹ ಆಗಲಿದ್ದಾರೆ. ಮದುವೆ ಆದ ಬಳಿಕ ಈ ತಾರಾ ದಂಪತಿ ಸೆಟಲ್ ಆಗಲು ಮನೆಯೊಂದನ್ನು ಸಹ ಮುಂಬೈನ ದುಬಾರಿ ಏರಿಯಾದಲ್ಲಿ ಹುಡುಕಿಟ್ಟಿದ್ದಾರೆ ಎಂದು ವರದಿಯಾಗಿತ್ತು. ಇದು ಸತ್ಯವೂ ಹೌದು, ಆದರೆ ಅದರಲ್ಲಿ ಟ್ವಿಸ್ಟ್ ಒಂದು ಎದುರಾಗಿದೆ. ಆತಿಯಾ ಶೆಟ್ಟಿ ಹೊಸ ಮನೆಗೆ ಪ್ರವೇಶಿಸುತ್ತಿರುವುದು ನಿಜವೇ, ಆದರೆ ಕೆ.ಎಲ್.ರಾಹುಲ್ […]

Advertisement

Wordpress Social Share Plugin powered by Ultimatelysocial