ನಾನು ಬಿಜೆಪಿ ಕಾರ್ಯಕರ್ತ!

ಕುಖ್ಯಾತ ಕ್ರಿಮಿನಲ್‌, ರಾಜಕಾರಣಿಗಳು, ಅಧಿಕಾರಿಗಳ ಅಪ್ತ ಸಖನೆಂದು ಗುರುತಿಸಿಕೊಂಡಿರುವ ಮೈಸೂರಿನ ಕೆ.ಎಸ್‌. ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿ (Santro Ravi Case) ತಾನೇ ಸ್ವತಃ ಈ ವಿಚಾರಗಳನ್ನು ಒಪ್ಪಿಕೊಂಡಿದ್ದಾನೆ.

ತಾನೊಬ್ಬ ಬಿಜೆಪಿ ಕಾರ್ಯಕರ್ತ, ಪೊಲೀಸ್‌ ಅಧಿಕಾರಿಗಳು ಮತ್ತು ಸರ್ಕಾರಿ ನೌಕರರ ವರ್ಗಾವಣೆ ಮಾಡಿಸಿದ್ದು ನಿಜ. ವೇಶ್ಯಾವಾಟಿಕೆ ದಂಧೆಯ ಆರೋಪವಿರುವುದು ನಿಜ ಎಂದೆಲ್ಲ ಲಿಖಿತವಾಗಿ ಒಪ್ಪಿಕೊಂಡಿದ್ದಾನೆ. ೨೦೨೨ರ ಜನವರಿ ೨೨ರಂದು ಪ್ರಕರಣವೊಂದು ದಾಖಲಾದಾಗ ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ಸ್ವತಃ ಸ್ಯಾಂಟ್ರೋ ರವಿಯೇ ಮುಚ್ಚಳಿಕೆ ಬರೆದುಕೊಟ್ಟಿದ್ದಾನೆ. ಅದರಲ್ಲಿ ಆತನ ಎಲ್ಲ ಕರಾಳ ಕೃತ್ಯಗಳ ವಿವರ ಇದೆ. ಆದರೆ, ಪೊಲೀಸರು ಇದೆಲ್ಲವನ್ನೂ ಬರೆದಿಟ್ಟುಕೊಂಡು ಸುಮ್ಮನಿದ್ದರು. ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ!

ಅದು ರಾಜರಾಜೇಶ್ವರಿ ನಗರದ ನಿವಾಸಿಯಾಗಿರುವ ಜಗದೀಶ್‌ ಎಂಬವರು ನೀಡಿದ ಒಂದು ದೂರು. ಗಟ್ಟಿಗೆರೆ ನಿವಾಸಿಯಾಗಿರುವ ಅವರು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರಿಗೆ ಸ್ಯಾಂಟ್ರೋ ರವಿಯ ಖತರ್ನಾಕ್‌ ಕೃತ್ಯಗಳ ಬಗ್ಗೆ ದೂರು ನೀಡಿದ್ದರು. ರಾಜರಾಜೇಶ್ವರಿ ನಗರದ ಬಾಲಕೃಷ್ಣ ರಂಗ ಮಂದಿರದ ಮುಂಭಾಗದಲ್ಲಿ ವಾಸ ಮಾಡುತ್ತಿರುವ ಮಂಜುನಾಥ್‌ ಎಂಬಾತ ತಾನು ರಾಜಕೀಯ ಮುಖಂಡರ ಜತೆ ಸಂಬಂಧ ಹೊಂದಿದ್ದೇನೆ, ನನ್ನ ಹೆಂಡತಿ ಹೈಕೋರ್ಟ್‌ ಲಾಯರ್‌, ಸರಕಾರಿ ನೌಕರರನ್ನು ಯಾವುದೇ ಜಾಗಕ್ಕೆ ಬೇಕಾದರೂ ವರ್ಗಾವಣೆ ಮಾಡಿಕೊಡುತ್ತೇನೆ ಎಂದು ಜನರನ್ನು ನಂಬಿಸಿ ಹಣ ಪಡೆಯುತ್ತಿದ್ದಾನೆ. ಇದರ ಬಗ್ಗೆ ಗಮನ ಹರಿಸಿ ಜನರಿಗೆ ವಂಚನೆ ಆಗುವುದನ್ನು ತಡೆಯಬೇಕು ಎಂದು ಮನವಿ ಮಾಡಿದ್ದರು.

ಇದಕ್ಕೆ ಪ್ರತಿಯಾಗಿ ರಾಜರಾಜೇಶ್ವರಿ ಠಾಣೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಲೋಹಿತ್‌ ಅವರು ಮಂಜುನಾಥನನ್ನು ಕರೆಸಿಕೊಂಡು ಒಂದು ಮುಚ್ಚಳಿಕೆ ಬರೆಸಿಕೊಳ್ಳುತ್ತಾರೆ. ಅದರಲ್ಲಿ ಮಂಜುನಾಥ ಅಲಿಯಾಸ್‌ ಸ್ಯಾಂಟ್ರೋ ರವಿಯ ಸಮಸ್ತ ಜಾತಕವೇ ಇದೆ. ಆತ ಮಾಡಿರುವ ಎಲ್ಲ ಕುಕೃತ್ಯಗಳ ವಿವರವಿದೆ, ಹುಟ್ಟಿನಿಂದ ಇದುವರೆಗಿನ ವಿದ್ಯಾಭ್ಯಾಸ, ವಂಚನೆಗಳ ಪೂರ್ತಿ ವಿವರ ಇದೆ. ಇದೆಲ್ಲವನ್ನೂ ಮುಚ್ಚಳಿಕೆ ಬರೆಸಿಕೊಂಡು ಪೊಲೀಸರು ಆತನನ್ನು ತಣ್ಣಗೆ ಬಿಟ್ಟು ಕಳುಹಿಸಿದ್ದಾರೆ!

ಅವನು ಹೇಳಿದ ಪ್ರಮುಖ ಅಂಶಗಳು
೧. ನಾನು ಮೈಸೂರಿನಲ್ಲಿ ವಾಸವಾಗಿದ್ದಾಗ ೨೦೦೫ರಲ್ಲಿ ಇಲವಾಲ ಪೊಲೀಸ್‌ ಠಾಣೆಯಲ್ಲಿ ನನ್ನ ವಿರುದ್ಧ ವೇಶ್ಯಾವಾಟಿಕೆ ದಂಧೆಯ ದೂರು ದಾಖಲಾಗಿತ್ತು. ಅದರ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
೨. ನಾನು ೨-೩ ವರ್ಷಗಳಿಂದ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಬಿಜೆಪಿ ಪಕ್ಷದ ಸಂಸದರು, ಶಾಸಕರು, ರಾಜಕೀಯ ವ್ಯಕ್ತಿಗಳು ಪರಿಚಯ ಆಗಿರುತ್ತಾರೆ.
೩. ನಾನು ರಾಜಕೀಯ ಸಂಬಂಧಗಳನ್ನು ಬಳಸಿಕೊಂಡು ರಾಜ್ಯ ಗುಪ್ತವಾರ್ತೆಯಲ್ಲಿ ಇನ್ಸ್‌ಪೆಕ್ಟರ್‌ ಆಗಿದ್ದ ಜೆ.ಕೆ. ಸುಬ್ರಹ್ಮಣ್ಯ ಅವರನ್ನು ಚನ್ನರಾಯ ಪಟ್ಟಣ ಸರ್ಕಲ್‌ಗೆ, ಹಲಸೂರಿನಲ್ಲಿ ಇನ್ಸ್‌ಪೆಕ್ಟರ್‌ ಆಗಿದ್ದ ರವಿ ಅವರನ್ನು ಮಳವಳ್ಳಿ ಠಾಣೆಗೆ ವರ್ಗಾವಣೆ ಮಾಡಿಸಿದ್ದೇನೆ. ಇವರು ನಾನು ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿರುವಾಗ ಪರಿಚಯ ಆದವರು.

೪. ಗೃಹ ಸಚಿವರ ಆಪ್ತ ಸಹಾಯಕ, ಸ್ನೇಹಿತರ ಮೂಲಕವೂ ವರ್ಗಾವಣೆಗೆ ನೆರವು ಸಿಕ್ಕಿದೆ. ಡಿಜಿ ಮತ್ತು ಐಜಿಪಿ ಕಚೇರಿ ಅಧಿಕಾರಿಗಳಿಂದಲೂ ಸಾಥ್ ಸಿಕ್ಕಿದೆ ಎಂದು ಹೇಳಿರುವ ರವಿ ತಾನು ಕರೆ ಮಾಡಿದ್ದ ಮೊಬೈಲ್ ನಂಬರ್, ಚಾಟ್ ಸಹಿತ ಎಲ್ಲವನ್ನೂ ಒಪ್ಪಿಕೊಂಡಿದ್ದಾನೆ.

ಇಷ್ಟೆಲ್ಲ ಗಂಭೀರ ಹೇಳಿಕೆಗಳಿದ್ದರೂ ಪೊಲೀಸರು ಮಾತ್ರ ಅವನ್ನು ಸುಮ್ಮನೆ ಬಿಟ್ಟು ಕಳುಹಿಸಿದ್ದಾರೆ. ಈಗ ಅವನೆಲ್ಲಿ, ಅವನೆಲ್ಲಿ ಎಂದು ಹುಡುಕುವ ನಾಟಕ ಮಾಡುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚೊಚ್ಚಲ ಪ್ರಯತ್ನದಲ್ಲಿ ವಿಫಲವಾದ ಬ್ರಿಟನ್

Wed Jan 11 , 2023
  ಲಂಡನ್,ಜ.10: ತನ್ನ ದೇಶದ ಉಡಾವಣಾ ಕೇಂದ್ರದಿಂದಲೇ ಭೂಕಕ್ಷೆಗೆ ಚೊಚ್ಚಲ ರಾಕೆಟ್ ಉಡಾವಣೆಗೊಳಿಸುವ ಬ್ರಿಟನ್‌ನ ಚೊಚ್ಚಲ ಪ್ರಯತ್ನ ಮಂಗಳವಾರ ವಿಫಲಗೊಂಡಿದೆ. ರಾಕೆಟ್ ತನ್ನ ಗುರಿಯನ್ನು ತಲುಪಲು ಸನ್ನಿಹಿತವಾಗಿರುವಾಗಲೇ ತಾಂತ್ರಿಕ ದೋಷದಿಂದಾಗಿ ಉಡಾವಣೆ ವಿಫಲವಾಗಿದೆಯೆಂದು ಬ್ರಿಟಿಶ್ ವಿಜ್ಞಾನಿಗಳು ತಿಳಿಸಿದ್ದಾರೆ. 70 ಅಡಿ ವಿಸ್ತೀರ್ಣದ ರಾಕೆಟ್ ಅನ್ನು ಹೊತ್ತು ವರ್ಜಿನ್ ಆರ್ಬಿಟ್ ಬೋಯಿಂಗ್ 747 ವೈಮಾನಿಕ ನೌಕೆಯು ನೈಋತ್ಯ ಇಂಗ್ಲೆಂಡ್‌ನ ಕಾರ್ನ್‌ವೆಲ್ ಅಂತರಿಕ್ಷ ಉಡಾವಣಾ ಕೇಂದ್ರದಿಂದ ಸ್ಥಳೀಯ ಕಾಲಮಾನ ರಾತ್ರಿ 11.02 ನಿಮಿಷಕ್ಕೆ […]

Advertisement

Wordpress Social Share Plugin powered by Ultimatelysocial