ಚೊಚ್ಚಲ ಪ್ರಯತ್ನದಲ್ಲಿ ವಿಫಲವಾದ ಬ್ರಿಟನ್

 

ಲಂಡನ್,ಜ.10: ತನ್ನ ದೇಶದ ಉಡಾವಣಾ ಕೇಂದ್ರದಿಂದಲೇ ಭೂಕಕ್ಷೆಗೆ ಚೊಚ್ಚಲ ರಾಕೆಟ್ ಉಡಾವಣೆಗೊಳಿಸುವ ಬ್ರಿಟನ್‌ನ ಚೊಚ್ಚಲ ಪ್ರಯತ್ನ ಮಂಗಳವಾರ ವಿಫಲಗೊಂಡಿದೆ. ರಾಕೆಟ್ ತನ್ನ ಗುರಿಯನ್ನು ತಲುಪಲು ಸನ್ನಿಹಿತವಾಗಿರುವಾಗಲೇ ತಾಂತ್ರಿಕ ದೋಷದಿಂದಾಗಿ ಉಡಾವಣೆ ವಿಫಲವಾಗಿದೆಯೆಂದು ಬ್ರಿಟಿಶ್ ವಿಜ್ಞಾನಿಗಳು ತಿಳಿಸಿದ್ದಾರೆ.

70 ಅಡಿ ವಿಸ್ತೀರ್ಣದ ರಾಕೆಟ್ ಅನ್ನು ಹೊತ್ತು ವರ್ಜಿನ್ ಆರ್ಬಿಟ್ ಬೋಯಿಂಗ್ 747 ವೈಮಾನಿಕ ನೌಕೆಯು ನೈಋತ್ಯ ಇಂಗ್ಲೆಂಡ್‌ನ ಕಾರ್ನ್‌ವೆಲ್ ಅಂತರಿಕ್ಷ ಉಡಾವಣಾ ಕೇಂದ್ರದಿಂದ ಸ್ಥಳೀಯ ಕಾಲಮಾನ ರಾತ್ರಿ 11.02 ನಿಮಿಷಕ್ಕೆ ಉಡಾವಣೆಗೊಂಡಿತ್ತು.

ಅಟ್ಲಾಂಟಿಕ್ ಸಮುದ್ರದಿಂದ 35 ಸಾವಿರ ಅಡಿ ಎತ್ತರದಲ್ಲಿ ವೈಮಾನಿಕ ನೌಕೆಯಿಂದ ಯೋಜಿತವಾದ ರೀತಿಯಲ್ಲಿ ಬೇರ್ಪಟ್ಟಿತ್ತು. ಆದರೆ ರಾಕೆಟ್ ಇನ್ನೇನು ಕಕ್ಷೆಯನ್ನು ಪ್ರವೇಶಿಸಿ, ತಾನು ಹೊತ್ತೊಯ್ಯುತ್ತಿರುವ 9 ಉಪಗ್ರಹಗಳನ್ನು ಬಿಡುಗಡೆಗೊಳಿಸಲಿರುವಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದೆ ” ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ರಾಕೆಟನ್ನು ಹೊತ್ತೊಯ್ದಿದ್ದ ವೈಮಾನಿಕ ನೌಕೆಯು ಕೊರ್ನ್‌ವಾಲ್ ಬಾಹ್ಯಾಕಾಶ ಉಡಾವಣಾ ಕೇಂದ್ರಕ್ಕೆ ವಾಪಸಾಗಿದೆ ಎಂದು ಮೂಲಗಳು ತಿಳಿಸಿ

ಬ್ರಿಟನ್ ನೆಲದಲ್ಲಿ ರಾಕೆಟ್ ಉಡಾವಣೆ ನಡೆದಿರುವುದು ಇದೇ ಮೊದಲ ಸಲವಾಗಿದೆ. ಈ ಮೊದಲು ಬ್ರಿಟನ್ ನಿರ್ಮಿಸಿದ ಉಪಗ್ರಹಗಳನ್ನು ವಿದೇಶಿ ಬಾಹ್ಯಾಕಾಶ ಉಡಾವಣಾ ಕೇಂದ್ರಗಳ ಮೂಲಕ ಉಡಾವಣೆಗೊಳಿಸಿ ಭೂಕಕ್ಷೆಗೆ ಕಳುಹಿಸಲಾಗಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗವಹಿಸಲಿದ್ದಾರೆ.

Wed Jan 11 , 2023
  ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಜನವರಿ 12 ರ ಮಧ್ಯಾಹ್ನದಂದು ಹುಬ್ಬಳ್ಳಿಗೆ ಆಗಮಿಸುತ್ತಿದ್ದು, ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಜನವರಿ 19ರಂದು ನಾರಾಯಣಪುರಕ್ಕೆ ಆಗಮಿಸಿ ಎನ್ ಎಲ್ ಬಿಸಿ ಆಧುನೀಕರಣ ಯೋಜನೆ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಅವರು ಸೋಮವಾರ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಏಳು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ದೇಶದ 28 ರಾಜ್ಯಗಳಿಂದ ಹಾಗೂ 8 ಕೇಂದ್ರೀಯ ಪ್ರಾಂತ್ಯದಿಂದ […]

Advertisement

Wordpress Social Share Plugin powered by Ultimatelysocial