‘ಶಾಲಾ-ಕಾಲೇಜು ವಿದ್ಯಾರ್ಥಿ’ಗಳಿಗೆ ಗುಡ್ ನ್ಯೂಸ್: ‘ಬಿಎಂಟಿಸಿ ಬಸ್ ಪಾಸ್’ ನ.30ರವರೆಗೆ ವಿಸ್ತರಣೆ….!!!!

ಬೆಂಗಳೂರು: ಶಾಲಾ-ಕಾಲೇಜು ವಿದ್ಯಾರ್ಥಿಗಳು  2021-22ನೇ ಸಾಲಿನ ಶಾಲಾ, ಕಾಲೇಜಿನ ಶುಲ್ಕ ರಸೀದಿ ಅಥವಾ ಗುರುತಿನ ಚೀಟಿಯೊಂದಿಗೆ ದಿನಾಂಕ 30-11-2021ರವರೆಗೆ ಬಿಎಂಟಿಸಿ ಬಸ್ಸಿನಲ್ಲಿ ( BMTC Bus ) ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿದೆ.

ಈ ಕುರಿತಂತೆ ಬಿಎಂಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಸರ್ಕಾರದ ನಿರ್ದೇಶನದಂತೆ 2021-22ನೇ ಶೈಕ್ಷಣಿಕ ಸಾಲಿನ ಶಾಲಾ-ಕಾಲೇಜುಗಳು ಪ್ರಾರಂಭ ಮಾಡಿದ್ದು, ಸಂಸ್ಥೆಯು ಸದರಿ ವಿದ್ಯಾರ್ಥಿಗಳ ( Student Bus Pass ) ಹಿತವನ್ನು ಗಮನದಲ್ಲಿಟ್ಟುಕೊಂಡು, ಸಂಸ್ಥೆಯ ಸಾಮಾನ್ಯ ಸೇವೆಗಳನ್ನು 1 ರಿಂದ 10ನೇ ತರಗತಿ, ಪಿಯುಸಿ (11+12), ಐಟಿಐ, ಡಿಪ್ಲೋಮಾ, ವೃತ್ತಿಪರ, ಪದವಿ, ಸ್ನಾತಕೋತ್ತರ, ತಾಂತ್ರಿಕ ಮತ್ತು ವೈದ್ಯಕೀಯ ಕಾಲೇಜು, ಸಂಜೆ ಕಾಲೇಜು ಹಾಗೂ ಪಿಹೆಚ್.ಡಿ ವಿದ್ಯಾರ್ಥಿಗಳು ಪ್ರಯಾಣಿಸಲು ಶಾಲಾ, ಕಾಲೇಜು ಶುಲ್ಕ ರಸೀದಿ ಅಥವಾ ಗುರುತಿನ ಚೀಟಿಯೊಂದಿಗೆ ದಿನಾಂಕ 30-11-2021ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಾ. ವೀರೇಂದ್ರ ಹೆಗ್ಗಡೆಯವರಿಗೆ (54ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ)

Sun Oct 24 , 2021
ಶ್ರೀ ಕ್ಷೇತ್ರ ಧರ್ಮಸ್ಥಳ ಪವಿತ್ರ ಯಾತ್ರಾಸ್ಥಳವಿಂದು ಧಾರ್ಮಿಕ ಚೌಕಟ್ಟಿನ ಪರಿಧಿ ಮೀರಿ ಧರ್ಮದ ಪರಿಕಲ್ಪನೆಯನ್ನು ಮಾನವ ಧರ್ಮಕ್ಕೆ ವಿಸ್ತರಿಸುವ ಮೂಲಕ ಅನನ್ಯ ಸೇವಾ ದೀಕ್ಷೆಗಳಿಂದ ಜಗದ್ವಿಖ್ಯಾತವಾಗಿ ಬೆಳೆದಿದೆ ಎಂದಾದರೆ ಅದು ಧರ್ಮ ಸಾಮ್ರಾಜ್ಯದ ಸರ್ವಶಕ್ತ ಧರ್ಮತೇಜ ನಮ್ಮ ಪೂಜ್ಯ ಖಾವಂದರಿಂದ. ಧಾರ್ಮಿಕ ಕ್ಷೇತ್ರವೊಂದು ಭಕ್ತಿ ಆಲಯವಾಗಿ ಮಾತ್ರ ಬೆಳಗದೆ, ಸಕಲಕೋಟಿ ಜೀವರಾಶಿಗಳ ಆಶಯಕ್ಕೆ ಬದ್ಧವಾಗಿ, ಅಣು ಅಣುಗಳಲ್ಲೂ ದಾನ ಧರ್ಮದ ಚಿಂತನೆ ಮೊಳಗಿ ‘ಸರ್ವೆ ಜನಾಃ ಸುಖೀನೋ ಭವಂತು’ಎಂಬ ಜಗದೋದ್ಧಾರಕನ […]

Advertisement

Wordpress Social Share Plugin powered by Ultimatelysocial