ರಾಜಮೌಳಿ-ಮಹೇಶ್ ಬಾಬು ಸಿನಿಮಾಕ್ಕೆ ತೆಲುಗಿನ ಸ್ಟಾರ್ ನಟ ವಿಲನ್;

ಕೆಲವು ನಿರ್ದೇಶಕರ ನಿಮಾಗಳು ಘೋಷಣೆ ಆದಾಗಿನಿಂದಲೂ ನಿರೀಕ್ಷೆ ಹುಟ್ಟಿಸಿರುತ್ತವೆ. ಅಂಥಹಾ ಕೆಲವೇ ನಿರ್ದೇಶಕರಲ್ಲಿ ಒಬ್ಬರು ರಾಜಮೌಳಿ.

ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಸಿನಿಮಾ ಬಿಡುಗಡೆಗೆ ತಯಾರಾಗಿದ್ದು ದೇಶದ ಸಿನಿ ಪ್ರೇಮಿಗಳು ಸಿನಿಮಾ ನೋಡಲು ಕಾತರರಾಗಿದ್ದಾರೆ.

ಈಗಾಗಲೇ ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಮಾರ್ಚ್ 18 ಅಥವಾ ಏಪ್ರಿಲ್ 28ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.

‘ಆರ್‌ಆರ್‌ಆರ್’ ಸಿನಿಮಾ ಚಿತ್ರೀಕರಣ ನಡೆವಾಗಲೇ ರಾಜಮೌಳಿ ತಮ್ಮ ಮುಂದಿನ ಸಿನಿಮಾ ಸಹ ಘೋಷಿಸಿದ್ದು, ಈ ಸಿನಿಮಾ ಬಗ್ಗೆಯೂ ಈಗಿನಿಂದಲೇ ನಿರೀಕ್ಷೆ ಆರಂಭಗೊಂಡಿದೆ. ರಾಜಮೌಳಿ ಇದೇ ಮೊದಲ ಬಾರಿಗೆ ಸ್ಟಾರ್ ನಟ ಮಹೇಶ್ ಬಾಬು ಅವರೊಟ್ಟಿಗೆ ಕೆಲಸ ಮಾಡಲಿದ್ದಾರೆ. ಈ ಸಿನಿಮಾದ ಮತ್ತೊಂದು ವಿಶೇಷತೆಯೆಂದರೆ ಈ ಸಿನಿಮಾದಲ್ಲಿ ತೆಲುಗಿನ ಸ್ಟಾರ್ ನಟರೊಬ್ಬರು ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಾಜಮೌಳಿ-ಮಹೇಶ್ ಬಾಬು ಸಿನಿಮಾದಲ್ಲಿ ಗೋಪಿಚಂದ್ ವಿಲನ್!
ಮಹೇಶ್ ಬಾಬು-ರಾಜಮೌಳಿಯ ಆಕ್ಷನ್ ಸಿನಿಮಾದಲ್ಲಿ ನಾಯಕ ನಟನಾಗಿ ಗುರುತಿಸಿಕೊಂಡಿರುವ ಗೋಪಿಚಂದ್ ವಿಲನ್ ಆಗಲಿದ್ದಾರೆ. ಆಂಧ್ರದ ಮಾಸ್ ಆಕ್ಷನ್ ಹೀರೋಗಳಲ್ಲಿ ಒಬ್ಬರಾಗಿರುವ ಗೋಪಿಚಂದ್ ಪಕ್ಕಾ ಪೈಸಾ ವಸೂಲ್ ಎಂದೇ ಖ್ಯಾತರು. ಆದರೆ ರಾಜಮೌಳಿ-ಮಹೇಶ್ ಬಾಬು ಸಿನಿಮಾದಲ್ಲಿ ಗೋಪಿಚಂದ್ ವಿಲನ್ ಪಾತ್ರದಲ್ಲಿ ಮಿಂಚಲಿದ್ದಾರೆ.

ವಿಲನ್ ಪಾತ್ರಗಳು ಹೊಸದೇನೂ ಅಲ್ಲ

ಗೋಪಿಚಂದ್‌ಗೆ ವಿಲನ್ ಪಾತ್ರಗಳು ಹೊಸದೇನೂ ಅಲ್ಲ. ಅವರು ಸಿನಿಮಾ ರಂಗ ಪ್ರವೇಶಿಸಿದ್ದು ಹೀರೋ ಆಗಿಯೇ ಆದರು. ಆರಂಭದಲ್ಲಿ ಅವರಿಗೆ ಹೆಸರು ಮಾಡಿಕೊಟ್ಟಿದ್ದು ವಿಲನ್ ಪಾತ್ರಗಳೇ. 2001ರಲ್ಲಿ ಬಿಡಗುಡೆ ಆದ ‘ತೊಲಿ ವಲುಪು’ ಸಿನಿಮಾದಲ್ಲಿ ನಾಯಕ ನಟನಾಗಿ ಗೋಪಿಚಂದ್ ನಟನೆ ಆರಂಭಿಸಿದರು. 2002ರಲ್ಲಿ ಬಿಡುಗಡೆ ಆದ ‘ಜಯಂ’ ಸಿನಿಮಾದಲ್ಲಿ ನಿರ್ವಹಿಸಿದ ಖಳನ ಪಾತ್ರ ಗೋಪಿಚಂದ್‌ಗೆ ದೊಡ್ಡ ಹೆಸರು ತಂದುಕೊಟ್ಟಿತು. ಆ ಬಳಿಕ ಮಹೇಶ್ ಬಾಬು ನಟನೆಯ ‘ನಿಜಂ’ ಸಿನಿಮಾದಲ್ಲಿಯೂ ಗೋಪಿಚಂದ್ ವಿಲನ್ ಪಾತ್ರದಲ್ಲಿ ನಟಿಸಿದರು. ಬಳಿಕ ‘ವರ್ಷಂ’ ಸಿನಿಮಾದಲ್ಲಿಯೂ ವಿಲನ್ ಆದರು. ಈ ಮೂರು ಸಿನಿಮಾಗಳಲ್ಲಿ ಗೋಪಿಚಂದ್ ನಟನೆ ಅದ್ಭುತವಾಗಿತ್ತು.

ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ

‘ವರ್ಷಂ’ ಸಿನಿಮಾ ಬಳಿಕ ‘ಯಜ್ಜಂ’ ಸಿನಿಮಾ ಮೂಲಕ ನಾಯಕ ನಟರಾದ ಗೋಪಿಚಂದ್ ಅಂದಿನಿಂದ ಈಗಿನವರೆಗೆ ನಾಯಕ ನಟನ ಪಾತ್ರಗಳಲ್ಲಿಯೇ ನಟಿಸುತ್ತಾ ಬಂದಿದ್ದಾರೆ. ‘ಆಂಧ್ರುಡು’, ‘ಒಕ್ಕಡುನ್ನಾಡು’, ‘ರಣಂ’, ‘ಲಕ್ಷ್ಯಂ’, ‘ಶೌರ್ಯಂ’, ‘ಗೋಲಿಮಾರ್’, ‘ವಾಂಟೆಡ್’, ‘ಸಾಹಸಂ’, ‘ಲೌಕ್ಯಂ’ ಇನ್ನೂ ಕೆಲವು ಹಿಟ್ ಸಿನಿಮಾಗಳನ್ನು ಗೋಪಿಚಂದ್ ನೀಡಿದ್ದಾರೆ. ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಗೋಪಿಚಂದ್‌ಗೆ ದೊಡ್ಡ ಹಿಟ್ ದೊರಕಿಲ್ಲ. ಹಾಗಾಗಿ ಅವರು ಖಳನಟನ ಪಾತ್ರಗಳತ್ತ ಹೊರಳುತ್ತಿದ್ದಾರೆಯೇ ಎಂಬ ಅನುಮಾನವೂ ಎದ್ದಿದೆ.

ಹೀರೋಗಳು ವಿಲನ್‌ಗಳಾಗುತ್ತಿದ್ದಾರೆ

ತೆಲುಗಿನಲ್ಲಿ ಈಗ ಹಿರಿಯ ಹೀರೋಗಳು ವಿಲನ್‌ ಪಾತ್ರಗಳತ್ತ ಹೊರಳುತ್ತಿದ್ದಾರೆ. ಮೊದಲಿಗೆ ಜಗಪತಿ ಬಾಬು ವಿಲನ್ ಪಾತ್ರಗಳಲ್ಲಿ ನಟಿಸಿದರು. ಬಳಿಕ ನಟ ಶ್ರೀಕಾಂತ್ ಅದೇ ಹಾದಿ ಹಿಡಿದರು. ಬಳಿಕ ಹಾಸ್ಯ ನಟ ಸುನಿಲ್ ಸಹ ವಿಲನ್ ಪಾತ್ರಗಳಲ್ಲಿ ನಟಿಸಲು ಆರಂಭಿಸಿದರು. ಇದೀಗ ಗೋಪಿಚಂದ್ ಸಹ ವಿಲನ್ ಪಾತ್ರಗಳತ್ತ ಹೊರಳಿದ್ದಾರೆ. ರಾಜಮೌಳಿ ಸಿನಿಮಾದಲ್ಲಿ ಗೋಪಿಚಂದ್ ನಟಿಸಿದ್ದೇ ಆದಲ್ಲಿ ಮಹೇಶ್ ಬಾಬು ಜೊತೆಗೆ ಇದು ಅವರ ಎರಡನೇ ಸಿನಿಮಾ ಆಗಿರಲಿದೆ. ಮಹೇಶ್ ಬಾಬು ನಾಯಕ ನಟನಾಗಿ ನಟಿಸಿದ್ದ ‘ನಿಜಂ’ ಸಿನಿಮಾದಲ್ಲಿ ಗೋಪಿಚಂದ್ ವಿಲನ್ ಆಗಿದ್ದರು. ಇದೇ ಸಿನಿಮಾದಲ್ಲಿ ಕನ್ನಡತಿ ರಕ್ಷಿತಾ ನಾಯಕಿಯಾಗಿ ನಟಿಸಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Marital life Advice Just for Wife - Keep the Ignite Alive

Mon Jan 24 , 2022
There are many pieces of marriage guidance for wife that can help you retain the ignite alive in your marriage. If you think like your romance is showing signs of damage, it may be time to find help right from an independent specialist. Many partnerships are wrecked by affairs, and […]

Advertisement

Wordpress Social Share Plugin powered by Ultimatelysocial