ಸೆನ್ಸಾರ್ ಅಸ್ತು ಎಂದ ವೈಶಂಪಾಯನ ತೀರ…

ಸ್ವರಸಂಗಮ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ಆರ್. ಸುರೇಶಬಾಬು
ನಿರ್ಮಿಸಿ, ಮಲೆನಾಡ ಸುಪ್ರಸಿದ್ಧ ರಂಗಕರ್ಮಿ ರಮೇಶಬೇಗಾರ್ ನಿರ್ದೇಶಿಸಿರುವ
“ವೈಶಂಪಾಯನ ತೀರ…” ಸಿನಿಮಾದ ಸೆನ್ಸಾರ್ ಇತ್ತೀಚಿಗೆ ನಡೆದು ಯಾವುದೇ
ಕಟ್ಸ್ ಮತ್ತು ಮ್ಯೂಟ್ಸ್ ಇಲ್ಲದೆ ಎಲ್ಲರೂ ನೋಡಬಹುದಾದ ಸಿನಿಮಾ ಎಂದಿದೆ.
ಪ್ರಸಿದ್ಧ ಸಾಹಿತಿ ಮಹಾಬಲಮೂರ್ತಿ ಕೊಡ್ಲೆಕೆರೆ ಅವರ ಸಣ್ಣಕತೆಯನ್ನು
ಆಧರಿಸಿರುವ ಈ ಸಿನಿಮಾದಲ್ಲಿ ಯಕ್ಷಗಾನದ ಹಿನ್ನೆಲೆಯಲ್ಲಿ ಪ್ರಕೃತಿ ಮತ್ತು
ಪುರುಷನ ಸಂಬಂಧವನ್ನು ವಿಭಿನ್ನವಾದ ಕುತೂಹಲಕರ ಧಾಟಿಯಲ್ಲಿ
ನಿರೂಪಿಸಲಾಗಿದೆ. ಸಂಪೂರ್ಣವಾಗಿ ಮಲೆನಾಡ ಭಾಷೆ, ಜನಜೀವನ ಮತ್ತು
ಸಾಂಸ್ಕೃತಿಕ ಹಿನ್ನೆಲೆಯನ್ನು ಈ ಚಿತ್ರದಲ್ಲಿ ಬಳಸಿಕೊಂಡಿದ್ದು ಶೃಂಗೇರಿ ಪರಿಸರದ
ಹತ್ತಾರು ರಂಗಕಲಾವಿದರು ಹಿರಿತೆರೆಗೆ ಬಣ್ಣ ಹಚ್ಚಿದ್ದಾರೆ.

ಪ್ರಮೋದ್ ಶೆಟ್ಟಿಯವರು ಪ್ರಮುಖ ಪಾತ್ರದಲ್ಲಿರುವ ಈ ಚಿತ್ರದ ನಾಯಕಿ
ವೈಜಯಂತಿ ಅಡಿಗ. ಉಳಿದಂತೆ ರವೀಶ್ ಹೆಗಡೆ, ಪ್ರಸನ್ನ ಶೆಟ್ಟಿಗಾರ್,
ರಮೇಶ್‌ಭಟ್, ಬಾಬು ಹಿರಣ್ಣಯ್ಯ, ರಮೇಶ್ ಪಂಡಿತ್, ಗುರುರಾಜ
ಹೊಸಕೋಟೆ, ಶೃಂಗೇರಿ ರಾಮಣ್ಣ, ರವಿಕುಮಾರ್ ಮೊದಲಾದವರು ವಿಭಿನ್ನ
ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಶ್ವವಿಖ್ಯಾತಿಯ ರಂಗಭೂಮಿ ಹಾಸ್ಯ
ಕಲಾವಿದರಾದ ಕುಂದಾಪುರದ ಕುಳ್ಳಪ್ಪು ಸಹೋದರರಾದ ಸತೀಶ್‌ಪೈ ಮತ್ತು
ಸಂತೋಷ್‌ಪೈ ಇದೇ ಮೊದಲ ಬಾರಿ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು
ವಿಶೇಷವಾಗಿದೆ. ಶ್ರೀನಿಧಿ ಕೊಪ್ಪ – ಹಿನ್ನೆಲೆ ಸಂಗೀತ, ಶಶಿರ-ಛಾಯಾಗ್ರಹಣ,
ಅವಿನಾಶ್-ಸಂಕಲನ ಈ ಚಿತ್ರಕ್ಕಿದೆ.

ಜನವರಿ ತಿಂಗಳ ಮೊದಲ ವಾರದಲ್ಲಿ ರಾಜ್ಯಾದ್ಯಂತ ಚಿತ್ರ ತೆರೆ ಕಾಣಲಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬಂದ್ ಗೆ ಕರೆ ಕೊಟ್ಟಿರುವ NSUI ಹಾಗೂ ಯೂತ್ ಕಾಂಗ್ರೇಸ್.

Sat Dec 17 , 2022
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ,ಪಟ್ಟಣದ ಹೃದಯ ಭಾಗವಾಗಿರುವ ಇಂದಿರಾಭವನ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ,ಫಲಿತಾಂಶ ವಿಳಂಬ, ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ವಿತರಣೆ, ವಿದ್ಯಾರ್ಥಿ ವೇತನ ವಿಳಂಬವೆಂದು ಆಕ್ರೋಶ,ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳ ಮೆರವಣಿಗೆ,ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ಹೊರ ಹಾಕುತ್ತಿರುವ ವಿದ್ಯಾರ್ಥಿಗಳು,ವಿದ್ಯಾರ್ಥಿಗಳು ತರಗತಿಗಳು ಬಿಟ್ಟು ಬೀದಿಗೆ ಬಂದು ಸರ್ಕಾರದ ವಿರುದ್ಧ ಆಕ್ರೋಶ,ರಾಜ್ಯ ಸರ್ಕಾರಕ್ಕೆ ದಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ ವಿದ್ಯಾರ್ಥಿಗಳು,ತ್ವರಿತಗತಿಯಲ್ಲಿ […]

Advertisement

Wordpress Social Share Plugin powered by Ultimatelysocial