ಶರಣ್ ಕನ್ನಡ ಚಲನಚಿತ್ರ ರಂಗದ ಲವಲವಿಕೆಯ ಕಲಾವಿರಲ್ಲೊಬ್ಬರು.

ಶರಣ್ ಕನ್ನಡ ಚಲನಚಿತ್ರ ರಂಗದ ಲವಲವಿಕೆಯ ಕಲಾವಿರಲ್ಲೊಬ್ಬರು. ಹಾಸ್ಯನಟರಾಗಿ ಬಂದ ಶರಣ್ ತಾವೇ ಚಿತ್ರ ನಿರ್ಮಿಸುವುದರ ಮೂಲಕ ತಮಗಿಷ್ಟವಾದ ಪಾತ್ರಗಳ ಚಿತ್ರ ನಿರ್ಮಿಸಿ ಗೆದ್ದವರು. ಹಿನ್ನೆಲೆ ಗಾಯಕರಾಗಿಯೂ ಹೆಸರಾದವರು.
ಶರಣ್ 1972ರ ಫೆಬ್ರವರಿ 6ರಂದು ಗುಲ್ಬರ್ಗಾದಲ್ಲಿ ಜನಿಸಿದರು. ಶರಣ್ ತಂದೆ ತಾಯಿ ಆಗಿನ ಪ್ರಸಿದ್ಧ ಗುಬ್ಬಿ ನಾಟಕ ಕಂಪನಿಯಲ್ಲಿದ್ದರು. ಪ್ರಖ್ಯಾತ ನಟಿ ಶ್ರುತಿ ಶರಣ್ ಅವರ ಸಹೋದರಿ.ಚಿತ್ರರಂಗಕ್ಕೆ ಬರುವ ಮುನ್ನ ಗಾಯನದಲ್ಲಿ ಆಸಕ್ತಿ ಹೊಂದಿದ್ದ ಶರಣ್ ಒಂದು ವಾದ್ಯಗೋಷ್ಠಿಯ ತಂಡದಲ್ಲಿ ಗಾಯಕರಾಗಿದ್ದರು. ತಮ್ಮದೇ ಆದ ಒಂದು ಭಕ್ತಿ ಗೀತೆಗಳ ಅಲ್ಬಮ್‌ ಕೂಡ ಹೊರತಂದಿದ್ದರು. ಹಾಗೆಯೇ ಕಿರುತೆರೆಯ ಧಾರವಾಹಿಗಳ ಶೀರ್ಷಿಕೆ ಗೀತೆಗಳನ್ನೂ ಹಾಡುತ್ತಾ ಧಾರಾವಾಹಿಗಳಲ್ಲಿ ನಟಿಸತೊಡಗಿದರು.ಮುಂದೆ ಶರಣ್ 1996ರಲ್ಲಿ ತೆರೆಕಂಡ ಸಿದ್ಧಲಿಂಗಯ್ಯನವರ ‘ಪ್ರೇಮ ಪ್ರೇಮ ಪ್ರೇಮ’ ಚಿತ್ರದ ಮೂಲಕ ಹಾಸ್ಯನಟರಾಗಿ ಚಿತ್ರರಂಗಕ್ಕೆ ಬಂದರು. ಹೀಗೆ ಬಹುಕಾಲದಿಂದ ಚಿತ್ರರಂಗದಲ್ಲಿ ಸಾಗಿರುವ ಶರಣ್ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಕರ್ಪೂರದಾ ಗೊಂಬೆ, ಫ್ರೆಂಡ್ಸ್, ಮೊನಾಲಿಸಾ, ಜೊತೆ ಜೊತೆಯಲಿ, ಪಲ್ಲಕ್ಕಿ, ಮಳೆಯಲಿ ಜೊತೆಯಲಿ ಮುಂತಾದವು ಇವರ ಚಿತ್ರಗಳಲ್ಲಿ ಸೇರಿವೆ.ಶರಣ್ 2012ರಲ್ಲಿ ತಮ್ಮ ನೂರನೇ ಚಿತ್ರವಾದ ‘ರ್ಯಾಂಬೋ’ ಅನ್ನು ತಾವೇ ನಿರ್ಮಿಸಿ ನಾಯಕ ನಟನ ಪಾತ್ರವಹಿಸಿ ಜನಮೆಚ್ಚುಗೆಗಳೊಂದಿಗೆ ಗೆದ್ದರು. ಮುಂದೆ ಬಂದ ‘ವಿಕ್ಟರಿ’,’ಅಧ್ಯಕ್ಷ’, ‘ರಾಜರಾಜೇಂದ್ರ’, ಮುಂತಾದ ಚಿತ್ರಗಳು ಒಂದರ ಮೇಲೊಂದರಂತೆ ಯಶಸ್ಸು ಗಳಿಸಿದವು. ‘ಜೈ ಲಲಿತಾ’ ಎಂಬ ಚಿತ್ರದಲ್ಲಿ ಅವರು ಲೀಲಾಜಾಲವಾಗಿ ಸ್ತ್ರೀಪಾತ್ರವನ್ನೂ ನಿರ್ವಹಿಸಿ ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರರಾದರು. ‘ಬುಲ್ಲೆಟ್ ಬಸ್ಯ’ ಚಿತ್ರದಲ್ಲಿ ಅವರ ದ್ವಿಪಾತ್ರಾಭಿನಯ ಕೂಡಾ ಮೆಚ್ಚುಗೆಗೆ ಪಾತ್ರವಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಧಾರವಾಡ ಕೃಷಿ ವಿವಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ.

Mon Feb 6 , 2023
ಧಾರವಾಡ: ಧಾರವಾಡ ಕೃಷಿ ವಿವಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ಸಾವನ್ನಪ್ಪಿರುವ ಕಾರಣ ಒಂದು ಕಡೆ ನಿಗೂಢವಾದರೆ ಆತ್ಮಹತ್ಯೆ ಮಾಡಿಕೊಂಡಿರುವ ರೀತಿ ಇನ್ನೂ ನಿಗೂಢವಾಗಿದೆ. ಆತ ಸಂಪೂರ್ಣ ಬಟ್ಟೆ ಬಿಚ್ಚಿ ನಗ್ನ ಸ್ಥಿತಿಯಲ್ಲಿ ಸಾವಿಗೆ ಶರಣಾಗಿದ್ದಾನೆ. ರೋಹಿತ್ ಸಿ‌ಪಿ‌ ಎಂಬಾತನೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ವಿಜಯ ನಗರ ಜಿಲ್ಲೆಯ ಕೊಟ್ಟೂರ ನಿವಾಸಿಯಾಗಿರುವ ರೋಹಿತ್‌, ಬಿಎಸ್ಸಿ ಕಮ್ಯುನಿಟಿ ಸೈನ್ಸ್ ಕೊನೆಯ ವರ್ಷದಲ್ಲಿ ಓದುತ್ತಿದ್ದ. ಆತ […]

Advertisement

Wordpress Social Share Plugin powered by Ultimatelysocial