ಶಶಿಕಲಾ ರವಿಶಂಕರ್ ಅದ್ಭುತ ಕ್ರಿಯಾಶೀಲ ವ್ಯಕ್ತಿ.

ನಮ್ಮೆಲ್ಲರ ಆತ್ಮೀಯರಾದ ಶಶಿಕಲಾ ರವಿಶಂಕರ್ ಅದ್ಭುತ ಕ್ರಿಯಾಶೀಲ ವ್ಯಕ್ತಿ.
ಜನವರಿ 1 ಶಶಿಕಲಾ ಅವರ ಜನ್ಮದಿನ. ಕನ್ನಡ ಎಂ.ಎ. ಓದಿರುವ ಅವರು ಹಿರಿಯೂರಿನವರು.
ಶಶಿಕಲಾ ಅವರು ಸಮಾಜ ಸೇವಕಿ. ಬರಹದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಗಳಿಸಿದವರು. ರೈಫಲ್ ಶೂಟಿಂಗ್ನಲ್ಲಿ ರಾಷ್ಟ್ರಯ ಮಟ್ಟದ ಸಾಧನೆ ಮಾಡಿದರು. ಜೇಸೀಸ್ ವಲಯದಲ್ಲಿ ಹಲವು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದವರು. ಇಂಡಿಯನ್ ರೆಡ್ ಕ್ರಾಸ್ ವಲಯ ನಿರ್ದೇಶಕಿಯಾಗಿ ಕೆಲಸ ಮಾಡಿದವರು. ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಚಿತ್ರದುರ್ಗ ಜಿಲ್ಲಾ ಮಟ್ಟದ ಸಹ ಆಯುಕ್ತರು, ಉಡುವಳ್ಳಿ ಜೆಎನ್ವಿ ನವೋದಯ ಶಾಲೆ ನಿರ್ದೇಶಕಿ, ಹಿರಿಯೂರಿನ ಬ್ರಷ್ಕಿಂಗ್ ವಿದ್ಯಾಸಂಸ್ಥೆಯ ಸಲಹಾ ಸಮಿತಿ ಚೇರ್ಮನ್, ನೀಡ್ಸ್ ಎನ್ಜಿಓ ರಾಣಿಬೆನ್ನೂರು ಉಪಾಧ್ಯಕ್ಷೆ, ಹಿರಿಯೂರಿನ ಗಂಗಾ ಸೆಂಟ್ರಲ್ ಶಾಲೆ ನಿರ್ದೇಶಕಿ, ಹಿರಿಯೂರಿನ ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಹೀಗೆ ಅನೇಕ ಜವಾಬ್ದಾರಿ ಹೊರುತ್ತ ಅಪಾರ ಕೆಲಸ ಮಾಡುತ್ತ ಬಂದವರು.
ಶಶಿಕಲಾ ಅನೇಕರಿಗೆ ಬದುಕಿಗೆ ಮಾರ್ಗದರ್ಶನ ನೀಡುತ್ತ ಬೆಳಕಾದವರು. ಅನೇಕ ಗೌರವಗಳು ಶಶಿಕಲಾ ಅವರನ್ನರಸಿ ಬಂದಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಸುಂಧರಾ ಫಿಲಿಯೋಜಾ ಹಿರಿಯ ಇತಿಹಾಸಜ್ಞೆ

Tue Jan 3 , 2023
ಹಿರಿಯರಾದ ಡಾ. ವಸುಂಧರಾ ಫಿಲಿಯೋಜಾ ಹಿರಿಯ ಇತಿಹಾಸಜ್ಞೆ ಮತ್ತು ಸಂಶೋಧಕಿ.‍ ಇವರು ಅಕೆಡೆಮಿಕ್ ವಲಯದಿಂದ ಹೊರಗಿದ್ದು, ಸ್ವತಂತ್ರವಾಗಿ ಸಂಶೋಧನೆಗಳನ್ನು ನಡೆಸಿ, ತಮ್ಮದೇ ಛಾಪನ್ನು ಮೂಡಿಸಿದವರು. ಫ್ರಾನ್ಸ್ ದೇಶದಲ್ಲಿ ವ್ಯಾಪಕವಾದ ಸಂಸ್ಕೃತ ಬೆಳವಣಿಗೆಗೆ ಅಪಾರ ಕೆಲಸ ಮಾಡುತ್ತ ಬಂದಿದ್ದಾರೆ. ವಸುಂಧರಾ 1940ರ ಜನವರಿ 1ರಂದು ಜನಿಸಿದರು. ತಂದೆ ಪಂಡಿತ ಚನ್ನಬಸಪ್ಪ ಯಲ್ಲಪ್ಪ ಕವಲಿ ಅವರಿಗೆ ಏಳು ಜನ ಮಕ್ಕಳು. ಆ ಮಕ್ಕಳ ಮಾಲೆಯಲ್ಲಿ ಇವರು ಐದನೆಯವರು. ಅದನ್ನೇ ಎನ್ಕೆಯವರು ಸಂಗೀತದಲ್ಲಿಯ ಪಂಚಮ […]

Advertisement

Wordpress Social Share Plugin powered by Ultimatelysocial