ಆಗಸ್ಟ್ 5 ರಿಂದ 15 ರವರೆಗೂ ನಡೆಯಲಿದೆ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ.

ಡಾ||ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅವರ ವಿಷಯಾಧಾರಿತ ವಿಶೇಷ ಫಲಪುಷ್ಪ ಪ್ರದರ್ಶನಕ್ಕೆ ಡಾ|ರಾಜ್ ಕುಟುಂಬದವರಿಂದ ಸೂಕ್ತ ಸಲಹೆ.ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ಲಾಲ್ ಬಾಗ್ ನಲ್ಲಿ ಆಗಸ್ಟ್ 5 ರಿಂದ 15 ರವರೆಗೂ ನಡೆಯಲಿದೆ.

ಈ ಬಾರಿ ಕರ್ನಾಟಕ ರತ್ನ ಡಾ. ರಾಜಕುಮಾರ್ ಹಾಗೂ ಡಾ. ಪುನೀತ್ ರಾಜಕುಮಾರ್ ರವರ ವಿಷಯಾಧಾರಿತ ವಿಶೇಷ ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.

ಆಗಸ್ಟ್ 5ರಂದು ಫಲಪುಷ್ಪ ಪ್ರದರ್ಶನವು ಉದ್ಘಾಟನೆಗೊಳ್ಳಲಿದ್ದು ಖ್ಯಾತ ಚಿತ್ರನಟರಾದ, ಡಾ.ಶಿವರಾಜಕುಮಾರ್ ರಾಘವೇಂದ್ರ ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ರವರ ಧರ್ಮಪತ್ನಿ ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ರವರನ್ನು ಇಂದು ಫಲಪುಷ್ಪ ಪ್ರದರ್ಶನಕ್ಕೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಲು ಕರ್ನಾಟಕ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘದ ವತಿಯಿಂದ ಆತ್ಮೀಯವಾಗಿ ವಿನಂತಿಸಲಾಯಿತು

ಈ ಸಂದರ್ಭದಲ್ಲಿ ಉದ್ಯಾನ ಕಲಾಸಂಘದ ಉಪಾಧ್ಯಕ್ಷರಾದ ಶ್ರೀ ವಾಸುದೇವ್. ತೋಟಗಾರಿಕೆ ಜಂಟಿ ನಿರ್ದೇಶಕರಾದ ಡಾ. ಎಂ ಜಗದೀಶ್ ಹಾಗೂ ಲಾಲ್ ಬಾಗ್ ತೋಟಗಾರಿಕೆ ಉಪನಿರ್ದೇಶಕರಾದ ಶ್ರೀಮತಿ ಜಿ ಕುಸುಮ ಹಾಗೂ ದಿನಿ ಸಿನಿ ಕ್ರಿಯೇಷನ್ಸ್ ನ ದಿನೇಶ್ ರವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಜುಲೈ 29 ಕ್ಕೆ ತೆರೆಗೆ ಬರಲಿದೆ ವಿಭಿನ್ನ ಕಥೆಯ "ರಕ್ಕಂ".

Thu Jul 21 , 2022
ನಮ್ಮ ಹೈಕ್ಳು ಚಿತ್ರ ಲಾಂಛನದಲ್ಲಿ ಸ್ನೇಹಲತ ಅವರು ನಿರ್ಮಿಸಿರುವ ” ರಕ್ಕಂ” ಚಿತ್ರ ಜುಲೈ 29 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕೆ.ಸೆಂದಿಲ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಮ್ಮ ತಂಡದಲ್ಲಿ ಹೆಚ್ಚಿನವರಿಗೆ ಇದು ಮೊದಲ ಚಿತ್ರವಿರಬಹುದು, ಆದರೆ ಎಲ್ಲರಿಗೂ ರಂಗಭೂಮಿ, ಕಿರುತೆರೆಯಲ್ಲಿ ಹಲವು ವರ್ಷಗಳ ಅನುಭವವಿದೆ‌. ನಾನು ಮೂಲತಃ ರಂಗಭೂಮಿ ಕಲಾವಿದ. ಎನ್ ಎಸ್ ಡಿ ಯಲ್ಲಿ ತರಬೇತಿ ಪಡೆದುಕೊಂಡಿದ್ದೇನೆ. ಪುನೀತ್ ರಾಜ್‍ಕುಮಾರ್ ಅವರು ನಡೆಸಿಕೊಡುತ್ತಿದ್ದ “ಕನ್ನಡದ ಕೋಟ್ಯಾಧಿಪತಿ” ಸೇರಿದಂತೆ ಅನೇಕ […]

Advertisement

Wordpress Social Share Plugin powered by Ultimatelysocial