ವಿಶ್ವ ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ವೆಚ್ಚದಲ್ಲಿ ನಿರ್ಮಾಣಗೊಂಡಿದೆ.

ವಿಶ್ವ ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ವೆಚ್ಚದಲ್ಲಿ ನಿರ್ಮಾಣಗೊಂಡಿದೆ ಎಂದು ಹೇಳಲಾಗಿರುವ ‘ಅವತಾರ್ – ದ ವೇ ಆಫ್ ವಾಟರ್’ ಸಿನಿಮಾ ಡಿಸೆಂಬರ್ 16ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ. ಹಾಲಿವುಡ್ ನ ಈ ಸಿನಿಮಾ ಬರೋಬ್ಬರಿ 3,351 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ ಎಂದು ಚಿತ್ರರಂಗದ ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ.ಭಾರತವೂ ಸೇರಿದಂತೆ ವಿಶ್ವದ 3000ಕ್ಕೂ ಅಧಿಕ ಪರದೆಗಳಲ್ಲಿ ಈ ಚಿತ್ರ ತೆರೆ ಕಾಣಲಿದ್ದು, ಕನ್ನಡದಲ್ಲಿಯೂ ಇದನ್ನು ವೀಕ್ಷಿಸಲು ಸಾಧ್ಯವಾಗಲಿದೆ. ಈ ಚಿತ್ರ ಈಗಾಗಲೇ ಬಿಡುಗಡೆಗೊಂಡು ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ಗಳಿಕೆ ಮಾಡಿದ್ದ ‘ಅವತಾರ್’ ನ ಮುಂದುವರೆದ ಸರಣಿಯಾಗಿದೆ.ಭಾರತದಲ್ಲಿ ಈ ಚಿತ್ರವನ್ನು ಟ್ವೆಂಟಿಯತ್ ಸೆಂಚುರಿ ಸ್ಟುಡಿಯೋಸ್ ಹಂಚಿಕೆ ಮಾಡುತ್ತಿದ್ದು, ಈಗಾಗಲೇ ಟಿಕೆಟ್ ಗಳ ಮುಂಗಡ ಬುಕ್ಕಿಂಗ್ ನಿಂದ ಎಂಟು ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತ ಸಂಗ್ರಹಿಸಿದೆ. ಚಿತ್ರದ 2.4 ಲಕ್ಷ ಟಿಕೆಟ್ ಗಳು ಮಾರಾಟವಾಗಿವೆ ಎಂದು ಮೂಲಗಳು ತಿಳಿಸಿವೆ. ಇಷ್ಟೊಂದು ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಎಷ್ಟು ಗಳಿಕೆ ಮಾಡಬಹುದು ಎಂಬ ಕುತೂಹಲ ಈಗ ಎಲ್ಲರಲ್ಲೂ ಮನೆ ಮಾಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ಸ್ವಪಕ್ಷೀಯ MLA ವಿರುದ್ಧವೇ ಮಾಜಿ MLC ಅಸಮಾಧಾನ.

Wed Dec 14 , 2022
ಚುನಾವಣೆ ಹತ್ತಿರವಾಗುತ್ತಿದ್ದಂತೆ ನಾಯಕರ ನಡುವಿನ ವೈಮನಸ್ಯ ಬಹಿರಂಗವಾಗಲು ಆರಂಭಿಸಿದೆ. ಜೆಡಿಎಸ್‌ ಭದ್ರಕೋಟೆ ಅಂತಲೇ ಕರೆಸಿಕೊಳ್ಳುವ ಮಂಡ್ಯದಲ್ಲಿ ದಳಪತಿಗಳ ಒಗ್ಗಟ್ಟಿನಿ ಕೊರತೆ ಎದ್ದು ಕಾಣ್ತಿದೆ. ನಾಗಮಂಗಲದಲ್ಲಿ ಜೆಡಿಎಸ್ ಮಾಜಿ ವಿಧಾನಪರಿಷತ್ ಸದಸ್ಯ ಅಪ್ಪಾಜಿ ಗೌಡರ ಅಸಮಾಧಾನ ಸ್ಪೋಟಗೊಂಡಿದ್ದು, ಸ್ವಪಕ್ಷೀಯ ಶಾಸಕ ಸುರೇಶ್ ಗೌಡ ವಿರುದ್ಧ ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದ್ದಾರೆ.ಪಂಚರತ್ನ ಕಾರ್ಯಕ್ರಮ ಹಿನ್ನೆಲೆ ನಾಗಮಂಗಲದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಸಾವಿರಾರು ಕಾರ್ಯಕರ್ತರು ಸೇರಿದ್ದ ಕಾರ್ಯಕ್ರಮದಲ್ಲಿ ಮಾಜಿ ಎಂಎಲ್‌ಸಿ ಅಪ್ಪಾಜಿ ಗೌಡ ಅಸಮಾಧಾನ ವ್ಯಕ್ತಪಡಿಸಿದರು. […]

Advertisement

Wordpress Social Share Plugin powered by Ultimatelysocial