ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ಎಲ್ಲಿಯೂ ದಾಳಿ ಆಗಿಲ್ಲ:

ನರೇಂದ್ರ ಮೋದಿ ಸರ್ಕಾರ  ಎಂಟು ವರ್ಷಗಳು ಕಳೆದಿದೆ. ಮೋದಿಯವರು 12 ವರ್ಷ ಗುಜರಾತ್ ಸಿಎಂ ಆಗಿ, 8 ವರ್ಷ ದೇಶದ ಪ್ರಧಾನಿಯಾಗಿ 20 ಆಡಳಿತ ನಡೆಸಿದ್ದಾರೆ. ಗುಜರಾತ್ ಮಾದರಿಯಲ್ಲಿ  ದೇಶ ಅಭಿವೃದ್ಧಿ ಕೂಡ ಮಾಡೋ ಬಗ್ಗೆ ಕೆಲಸ ಮಾಡಿದ್ದಾರೆ.
ಅಭಿವೃದ್ಧಿ ಆಗಬೇಕು, ವಿಕಾಸ ಆಗಬೇಕು ಅಂತ. ವಿದೇಶದಲ್ಲಿ ಭಾರತಕ್ಕೆ ಗೌರವ ಸಿಗಬೇಕು. ದೇಶದ ಗಡಿಗಳಲ್ಲಿ ಭದ್ರತೆ   ಸಿಗಬೇಕು, ಸೈನಿಕನಿಗೆ   ಬಲ ಸಿಗಬೇಕು ಎಂಬ ವಿಚಾರಗಳನ್ನಿಟ್ಟು ಜನರ ಮುಂದೆ ಬಂದು ಮತ ಕೇಳಿದರ. ಇದುವರೆಗೂ ಒಂದು ಕಪ್ಪು ಚುಕ್ಕೆ ಇಲ್ಲದೆ, ಭ್ರಷ್ಟಾಚಾರ ರಹಿತ ಸರ್ಕಾರ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಡಿ ಹೊಗಳಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ ಮನಮೋಹನ್ ಸಿಂಗ್  ಅವರು ಪ್ರಧಾನಿಯಾಗಿದ್ದಾಗ ಕರೆದು ಮಾತನಾಡಿಸೋ ಕೆಲಸ ಮಾಡ್ತಿರಲಿಲ್ಲ. ಇದು ನಮಗೆ ಬೇಸರ ತರಿಸಿತ್ತು. ಮನಮೋಹನ್ ಸಿಂಗ್ ಒಂದು ಪಕ್ಷ ಅಲ್ಲದೆ, ದೇಶದ ಪ್ರಧಾನಿಯಾಗಿ ರೆಪ್ರೆಸೆಂಟ್ ಮಾಡ್ರಿದ್ರು. ಆದ್ರೀಗ ಒಂದು ಗೌರವ ದೊರೆತಿದೆ, ಭಾರತವನ್ನ ಗುರುತಿಸುತ್ತಿದ್ದಾರೆ. ಇದೆಲ್ಲದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ  ಹೇಳಿದರು.
ಅಲ್ಪಸಂಖ್ಯಾತರ ಮೇಲೆ ಎಲ್ಲಿ ದಾಳಿ ಆಗಿಲ್ಲ
ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ಎಲ್ಲಿಯೂ ದಾಳಿ ಆಗಿಲ್ಲ. ಅಲ್ಪ ಸ್ವಲ್ಪ ಜಾತಿಯ ಸಂಘರ್ಷ ಅಷ್ಟೇ ನಡೆದಿದೆ ಅಷ್ಟೇ.ಇಂತಹ ಘಟನೆಗಳಿಗೆ ಭಾರತ ಸರ್ಕಾರ ಎಲ್ಲಿಯೂ ಕುಮ್ಮಕ್ಕೂ ಕೊಟ್ಟಿಲ್ಲ ಈ ದೇಶದಲ್ಲಿ ಶಾಂತಿ ಕಾಪಾಡೋದು ಅಷ್ಟೇ ಸರ್ಕಾರದ ಕರ್ತವ್ಯ. ಹಿಜಾಬ್ ಕೋಮು ಗಲಭೆ ಅಲ್ಲ. ಆದರೆ ಕಾನೂನು ಸುವ್ಯವಸ್ಥೆ ಹಾಳು ಮಾಡುವ ಪ್ರಯತ್ನ ಇದಾಗಿದೆ. ಎಸ್ ಡಿಪಿಐ ಹಾಗೂ ಪಿಎಸ್‌ಐ ಸಂಘಟನೆ ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಮಾಡಿರುವ ಷಡ್ಯಂತ್ರ ಎಂದು ಆರೋಪಿಸಿದರು.
ಸಮವಸ್ತ್ರದ ಬಗ್ಗೆ ನ್ಯಾಯಾಲಯ ಆದೇಶ ಇದೆ. ಈ ಆದೇಶವನ್ನು ಎಲ್ಲರು ಪಾಲನೆ ಮಾಡಬೇಕು. ಆದೇಶ ಪಾಲನೆ ಮಾಡವದರ ವಿರುದ್ದ ಸೂಕ್ತ ಕ್ರಮ ಆಗಬೇಕು ಎಂದು ಆಗ್ರಹಿಸಿದರು.
ತ್ರಿವರ್ಣ ಧ್ವಜಕ್ಕೆ ಹೆಚ್ಚು ಗೌರವ
ಉಕ್ರೇನ್-ರಷ್ಯಾ ಯುದ್ಧದಲ್ಲಿ 20 ಸಾವಿರ ಜನರನ್ನ ಸುರಕ್ಷಿತವಾಗಿ ಕರೆತಂದ್ರು. ಏಕ‌ಕಾಲದಲ್ಲಿ ಎರಡೂ ದೇಶದ ಪ್ರಧಾನಿಗಳ ಜೊತೆ ಮಾತನಾಡಿದ್ರೆ ಅದು ಮೋದಿ. ನೆರೆಯ ದೇಶಗಳ ಜೊತೆ ವ್ಯವಹಾರ ಮಾಡುವ, ಸಂಕಷ್ಟದಲ್ಲಿದ್ದಾಗ ಸಹಾಯ ಮಾಡೋ‌ ಧೈರ್ಯ ಬಂದಿದೆ. ಇದು ದೇಶದ ತ್ರಿವರ್ಣ ಧ್ವಜಕ್ಕೆ ಹೆಚ್ಚು ಗೌರವ ದೊರೆತಿದೆ.
ಭಾರತ ಬಾಂಗ್ಲಾದೇಶದ ಗಡಿ‌ ಯಾವುದು ಅಂತ ಗೊತ್ತಿರಲಿಲ್ಲ. ಈಗ ದೇಶದ ಗಡಿಗೆ ಬೇಲಿ ಹಾಕುವ ಕೆಲಸ ಆಗಿದೆ. ಗಡಿಯಲ್ಲಿರೋ ಎರಡೂ ದೇಶದ ಪ್ರಜೆಗಳು ಸುರಕ್ಷಿತವಾಗಿರಲು ಕ್ರಮ ತೆಗೆದುಕೊಳ್ಳಲಾಗಿದೆ. ಬಹಳ ಉದ್ದನೆಯ ಗಡಿ ನಮ್ಮದು. ಪಾಕಿಸ್ತಾನ ಕುತಂತ್ರ ಮಾಡುತ್ತಿದೆ.
ಗಡಿಯಲ್ಲಿ ಫೆನ್ಸಿಂಗ್ ಹಾಕುವ ನಿರ್ಧಾರ
ಭಯೋತ್ಪಾದನೆಗೆ ಸಹಾಯ ಮಾಡೋದು, ಹೆಣ್ಣುಮಕ್ಕಳ ಮಾನವ ಸಾಗಾಣಿಕೆ ಮಾಡೋದು, ಡ್ರಗ್ಸ್ ಕಳಿಸೋ ಕೃತ್ಯ ಮಾಡ್ತಿದೆ. ಅಕ್ರಮವಾಗಿ ಶಸ್ತ್ರಾಸ್ತ್ರ ಕಳಿಸೋ ಕೆಲಸ ಪಾಕಿಸ್ತಾನ ಮಾಡ್ತಿದೆ. ಇದೆಲ್ಲವನ್ನೂ ನಿಲ್ಲಸಬೇಕಾದ್ರೆ ಗಡಿಯಲ್ಲಿ ಫೆನಿಸಿಂಗ್ ಹಾಕಬೇಕಿದೆ. ಹೀಗಾಗಿ ಗಡಿಯಲ್ಲಿ ಫೆನ್ಸಿಂಗ್ ಹಾಕುವ ದಿಟ್ಟ ನಿರ್ಧಾರ ತೆಗೆದುಕೊಳ್ಳಲಾಗ್ತಿದೆ.
ನೈಟ್ ವಿಷನ್ ಕ್ಯಾಮೆರಾ
ಭೂ ಸೇನೆ, ವಾಯುಸೇನೆ, ನೌಕಾಪಡೆಗೆ ಬೇಕಿರೋ ಎಲ್ಲಾ ಶಸ್ತ್ರಾಸ್ತ್ರ ಪೂರೈಸೋ ಕೆಲಸ ಮೋದಿ ಸರ್ಕಾರ ಮಾಡಿದೆ. ಪೋಕ್ರಾನ್‌ ನಲ್ಲಿ ಅಣು ಪರೀಕ್ಷೆ ಮಾಡಿದಾಗ ನಮ್ಮನ್ಮ ಬ್ಯಾನ್ ಮಾಡುವ ಕೆಲಸ ಆಯ್ತು. ಅಂದೇ ಭಾರತ ಸ್ವಾವಲಂಬಿ ಆಗಬೇಕು ಅಂತ ಅಬ್ದುಲ್ ಕಲಾಂ ಕರೆ ನೀಡಿದ್ರು. ನೈಟ್ ವಿಷನ್ ಗ್ಲಾಸ್ ಇರಲಿಲ್ಲ. ಬಡ ರಾಷ್ಟ್ರಗಳಲ್ಲಿ ಇದ್ದದ್ದು ನಮ್ಮಲ್ಲಿ ಯಾಕೆ ಇಲ್ಲ ಅಂತ.ಮೇಕ್ ಇನ್ ಇಂಡಿಯಾ ಮೂಲಕ ನೈಟ್ ವಿಷನ್ ಕ್ಯಾಮೆರಾ ತಯಾರಿಸೋ ಕೆಲಸ ಆಗ್ತಿದೆ.
ಸೈನಿಕರಿಗೆ ಅಧಿಕಾರ
ಪಾಕಿಸ್ತಾನದ ಗಡಿಯಲ್ಲಿ ಭಯೋತ್ಪಾದಕರು ಗುಂಡು ಹೊಡೆದ್ರೆ, ವಾಪಸ್ ಗುಂಡು ಹೊಡೆಯಲು ಯುಪಿಎ ಅವಧಿಯಲ್ಲಿ ಸ್ವಾತಂತ್ರ್ಯ ಇರಲಿಲ್ಲ. ದೆಹಲಿಗೆ ಕರೆ ಮಾಡಿ ಅನುಮತಿ ಪಡೆದು ಗುಂಡು ಹಾರಿಸೋದ್ರಲ್ಲಿ, ನಮ್ಮ ಸೈನಿಕರು ಸಾಯ್ತಿದ್ರು. ಆದ್ರೀಗ ನೇರವಾಗಿ ಗುಂಡು ಹೊಡೆಯೋ ಅಧಿಕಾರ ಸೈನಿಕರಿಗೆ ಮೋದಿ ಸರ್ಕಾರ ನೀಡಿದೆ. ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್‌ ಬಣ್ಣ ಬಡಿದಾಟದಲ್ಲಿ ಸಂಧಾನ ಸೂತ್ರ

Fri Jun 3 , 2022
ಸಿದ್ದರಾಮಯ್ಯ ಡಿಕೆ ಶಿವಕುಮಾರ್ ನಡುವೆ ಸಂಧಾನ ಒಟ್ಟಾಗಿ ಚುನಾವಣೆಗೆ ಹೋಗಲು ನಾಯಕರ ಸಮ್ಮತಿ ಮುಂದಿನ ಸಿಎಂ ಆಯ್ಕೆ ಬಗ್ಗೆಯೂ ಸಂಧಾನ ಸೂತ್ರ ಅಧಿಕಾರ ಹಿಡಿದರೆ 50: 50 ಅನುಪಾತದಲ್ಲಿ ಹಂಚಿಕೆ ಅಷ್ಟಕ್ಕೂ ಸಮನ್ವಯ ಸೂತ್ರ ಮುಂದಿಟ್ಟಿದ್ದು ಯಾರು? ಹಳೇ ಮೈಸೂರು ನಾಯಕರಿಂದ ಸಿದ್ದು- ಡಿಕೆಶಿ ಸಂಧಾನ ಸಿದ್ದರಾಮಯ್ಯ- ಡಿಕೆಶಿ ನಡುವೆ ಸಮನ್ವಯ ಸೂತ್ರ 2023 ರ ಸಾರ್ವತ್ರಿಕ ಚುನಾವಣೆ ಹತ್ತಿರವಾಗ್ತಾ ಇದೆ ರಾಜ್ಯದಲ್ಲಿ ಕಾಂಗ್ರೆಸ್ ಗೆ ಪೂರಕ ವಾತಾವರಣ ಇದೆ […]

Advertisement

Wordpress Social Share Plugin powered by Ultimatelysocial