ಷಾಪಿಂಗ್‌ ಮಾಡುತ್ತಿದ್ದ 27 ಮಂದಿ ಸಜೀವ ದಹನ- ಹಲವರ ಸ್ಥಿತಿ ಚಿಂತಾಜನಕ

ಮಾಲ್‌ಗೆ ಬೆಂಕಿ: ಷಾಪಿಂಗ್‌ ಮಾಡುತ್ತಿದ್ದ 27 ಮಂದಿ ಸಜೀವ ದಹನ- ಹಲವರ ಸ್ಥಿತಿ ಚಿಂತಾಜನಕ

ಒಸಾಕ: ಷಾಪಿಂಗ್‌ ಮಾಲ್‌ಗೆ ಬೆಂಕಿ ಬಿದ್ದಿದ್ದು, 27 ಮಂದಿ ಸಜೀವ ದಹನಗೊಂಡಿರುವ ಭೀಕರ ಘಟನೆ ಪಶ್ಚಿಮ ಜಪಾನ್‌ನ ಒಸಾಕಾದಲ್ಲಿನಲ್ಲಿ ನಡೆದಿದೆ.

ಕಿಟಾಶಿಂಚಿಯ ಶಾಪಿಂಗ್ ಮತ್ತು ಮನರಂಜನಾ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ನಾಲ್ಕನೆಯ ಅಂತಸ್ತಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.

ಎಲ್ಲೆಡೆ ದಟ್ಟ ಹೊಗೆಯಾಡುತ್ತಿದ್ದು, ಬೆಂಕಿ ಬೆಂಕಿ ಎಂದು ಕೂಗಿದರು. ಇದರಿಂದ ಅನೇಕ ಮಂದಿ ಹೃದಯಾಘಾತದಿಂದಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನು ಕೆಲವರು ತಪ್ಪಿಸಿಕೊಳ್ಳುವ ಭರದಲ್ಲಿ ದಹಿಸಿ ಹೋಗಿದ್ದಾರೆ.

ಹೆಚ್ಚಿನ ಮಂದಿ ಹೃದಯಾಘಾತದಿಂದಲೇ ಮೃತಪಟ್ಟಿದ್ದಾರೆ ಎಂದು ಒಸಾಕಾ ನಗರದ ಅಗ್ನಿಶಾಮಕ ಇಲಾಖೆಯ ಅಧಿಕಾರಿ ಅಕಿರಾ ಕಿಶಿಮೊಟೊ ತಿಳಿಸಿದ್ದಾರೆ. ಹಲವರ ಸ್ಥಿತಿ ಚಿಂತಾಜನಕವಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಈ ಕಟ್ಟಡದಲ್ಲಿ ಕ್ಲಿನಿಕ್ ಇತ್ತು. ಜತೆಗೆ ಹಲವಾರು ಪುಸ್ತಕದ ಮಳಿಗೆಗಳು ಇದ್ದವು. ಎಲ್ಲವೂ ಹೊತ್ತಿ ಉರಿದಿದೆ. ಪ್ರಾಥಮಿಕ ತನಿಖೆಯಲ್ಲಿ ಬೆಂಕಿಗೆ ನಿಖರ ಕಾರಣ ತಿಳಿದುಬಂದಿಲ್ಲ. 70 ಅಗ್ನಿಶಾಮಕ ದಳದ ತಂಡಗಳು ಬೆಂಕಿ ನಂದಿಸಲು ಹರಸಹಾಸ ಪಡುತ್ತಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

'ಪುಷ್ಪ' ಸಿನಿಮಾ ನೋಡಿದವರು ಹೀಗೆ ಹೇಳುತ್ತಿದ್ದಾರೆ

Fri Dec 17 , 2021
ಬಹುನಿರೀಕ್ಷಿತ ‘ಪುಷ್ಪ’ ಸಿನಿಮಾ ಬಿಡುಗಡೆ ಆಗಿದ್ದು, ಬೆಂಗಳೂರು ಸೇರಿದಂತೆ ಹಲವು ಕಡೆ ಬೆಳ್ಳಂಬೆಳಗ್ಗೆ 5 ಗಂಟೆಗೆ ಶೋ ಪ್ರದರ್ಶನ ಮಾಡಲಾಗಿದೆ. ಈಗಾಗಲೇ ಸಾವಿರಾರು ಮಂದಿ ‘ಪುಷ್ಪ’ ಸಿನಿಮಾದ ಮೊದಲ ಶೋ ನೋಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.   ಟ್ವಿಟ್ಟರ್, ಫೇಸ್‌ಬುಕ್‌, ಇನ್‌ಸ್ಟಾಗ್ರಾಂಗಳಲ್ಲಿ ‘ಪುಷ್ಪ’ ಸಿನಿಮಾದ ಚುಟುಕು ವಿಮರ್ಶೆಗಳು ಈಗಾಗಲೇ ಹರಿದಾಡುತ್ತಿದ್ದು, ಸಿನಿಮಾದ ಬಗ್ಗೆ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗಿವೆ. ಗುಂಡರಾಘವ ಎಂಬುವರು ಟ್ವೀಟ್ ಮಾಡಿದ್ದು, ”ಅಲ್ಲು ಅರ್ಜುನ್ ಅಪ್ಪಟ ಅಭಿಮಾನಿಯಾಗಿ […]

Advertisement

Wordpress Social Share Plugin powered by Ultimatelysocial