23 ವರ್ಷಕ್ಕೆ ಕೋಟ್ಯಾಧಿಪತಿಯಾದ ಶುಭ್ಮನ್.

 

 

 

ಟೀಂ ಇಂಡಿಯಾ ಕ್ರಿಕೆಟಿಗ ಶುಭ್ಮನ್ ಗಿಲ್ ದ್ವಿಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಬುಧವಾರ ಹೈದರಾಬಾದ್‌ನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದರು.

ಬಲಗೈ ಬ್ಯಾಟ್ಸ್‌ಮನ್ ಕೇವಲ 149 ಎಸೆತಗಳಲ್ಲಿ 208 ರನ್ ಸಿಡಿಸಿ 200ರ ಗಡಿ ದಾಟಿದ್ದರು.

Indian Cricketers Menu: ಕೊಹ್ಲಿ ಸೇರಿ ಟೀಂ ಇಂಡಿಯಾ ಆಟಗಾರರು ಸೇವಿಸುವ ಆಹಾರ ಏನು ಗೊತ್ತಾ? ವಿಡಿಯೋದಲ್ಲಿ ಬಹಿರಂಗ

ಇನ್ನಿಂಗ್ಸ್‌ನಲ್ಲಿ 23 ವರ್ಷದ ಆಟಗಾರನ ಸ್ಟ್ರೈಕ್ ರೇಟ್ 139.60 ಆಗಿತ್ತು. ಅವರು ಇತ್ತೀಚೆಗೆ ಡಿಸೆಂಬರ್ 2022 ರಲ್ಲಿ ಬಾಂಗ್ಲಾದೇಶದ ವಿರುದ್ಧ 210 ರನ್ ಗಳಿಸಿದ್ದ ಇಶಾನ್ ಕಿಶನ್ ಅವರನ್ನು ಹಿಂದಿಕ್ಕಿದ್ದಾರೆ. ಗಿಲ್ 2018 ರ ICC U19 ವಿಶ್ವಕಪ್‌ನಲ್ಲಿ 104.50 ರ ಸರಾಸರಿಯಲ್ಲಿ 418 ರನ್‌ ಬಾರಿಸಿದ ಖ್ಯಾತಿ ಹೊಂದಿದ್ದಾರೆ.

ಇನ್ನು ಈ 23 ವರ್ಷ ಹರೆಯದ ಸ್ಟಾರ್ ಆಟಗಾರನ ವಾರ್ಷಿಕ ಆದಾಯ ಎಷ್ಟು ಎಂದು ನಿಮಗೆ ತಿಳಿದಿದೆಯೇ? ವರದಿಗಳ ಪ್ರಕಾರ ಗಿಲ್ ಅವರ ನಿವ್ವಳ ಮೌಲ್ಯ ಸುಮಾರು 31 ಕೋಟಿ ಎಂದು ಅಂದಾಜಿಸಲಾಗಿದೆ. ರೇಂಜ್ ರೋವರ್ ಎಸ್‌ಯುವಿ ಮತ್ತು ಮಹೀಂದ್ರ ಥಾರ್ ವಾಹನಗಳನ್ನು ಸಹ ಹೊಂದಿದ್ದಾರೆ. ಐಪಿಎಲ್ 2022 ರ ಹರಾಜಿನ ಮುನ್ನ ಡ್ರಾಫ್ಟ್‌ನಲ್ಲಿ ಗಿಲ್ ಅವರನ್ನು ಗುಜರಾತ್ ಟೈಟಾನ್ಸ್ 8 ಕೋಟಿ ರೂ.ಗೆ ಆಯ್ಕೆ ಮಾಡಿತ್ತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಕಡಣಿಯಿಂದ ಶ್ರೀಶೈಲಕ್ಕೆ ಪಾದಯಾತ್ರೆ.

Sun Jan 22 , 2023
ತಾಲ್ಲೂಕಿನ ಕಡಣಿ ಗ್ರಾಮದಿಂದ ಶ್ರೀಶೈಲಕ್ಕೆ ಪಾದಯಾತ್ರೆ ಕೈಗೊಳ್ಳಲಾಗಿದೆ. ಗ್ರಾಮದ ಶಂಕಣ್ಣ ಬಾಳಿ, ಲಕ್ಷ್ಮೀಪುತ್ರ ಪಟ್ಟಣ್, ಸಿದ್ದಾರಾಮ ಕರಿಕಲ್, ಪೀರಪ್ಪ ಕೊಳ್ಳಿ, ಹಣಮಂತ ಪೂಜಾರಿ, ಮಲ್ಲಣ್ಣ ಆಲಗೂಡ, ಈರಯ್ಯ ಹಿರೇಮಠ, ಬಸವರಾಜ ಪಾಟೀಲ, ಶರಣಸಪ್ಪ ಸಂಕ್ರೋಡಗಿ, ಕಲ್ಯಾಣಿ, ಮಲ್ಲಿಕಾರ್ಜುನ ಪಾಟೀಲ, ಶಿವಶಂಕರ ಶಿವರಾಯಗೋಳ, ಶರಣಪ್ಪ ವಡ್ಡರ್, ರವಿ ಗಿರೆಪ್ಪಗೋಳ, ಪ್ರಕಾಶ ಅತನೂರ, ಶ್ರೀದೇವಿ ಕರಿಕಲ್, ಚಂದಮ್ಮ ಚಿಣಮಗೇರಿ, ರ್ಯಾವಮ್ಮ ಭೈರಡಗಿ, ಸುರೇಖಾ ಕಡತಾ ಸೇರಿದಂತೆ ಸುಮಾರು 50 ಜನರು ಇಂದಿನಿಂದ ಪಾದಯಾತ್ರೆ […]

Advertisement

Wordpress Social Share Plugin powered by Ultimatelysocial