ದಕ್ಷಿಣ ಕನ್ನಡದಲ್ಲಿ ಶೇ 81ರಷ್ಟು ಕಡತ ವಿಲೇವಾರಿ: ಸಚಿವ ಸುನೀಲ್ ಕುಮಾರ್

 

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆ.19ರಿಂದ ಕೈಗೆತ್ತಿಕೊಂಡಿರುವ ಕಡತ ವಿಲೇವಾರಿ ಅಭಿಯಾನದಲ್ಲಿ ಈವರೆಗೆ ಶೇ 81ರಷ್ಟು ಕಡತಗಳ ವಿಲೇವಾರಿ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್ ಹೇಳಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಟ್ಟು 85,384 ಕಡತಗಳಲ್ಲಿ ಈವರೆಗೆ 68,952 ಕಡತಗಳನ್ನು ವಿಲೇವಾರಿ ಮಾಡಲಾಗಿದೆ.

ಪಿಂಚಣಿ ಮತ್ತಿತರ ಸೌಲಭ್ಯಗಳಿಗೆ ಸಂಬಂಧಿಸಿ 1,700 ಅರ್ಜಿಗಳು ವಿಲೇವಾರಿಯಾಗಿವೆ. ಜಿಲ್ಲಾ ಮಟ್ಟದ 85 ಅಧಿಕಾರಿಗಳು, ತಾಲ್ಲೂಕು ಮಟ್ಟದ 128 ಅಧಿಕಾರಿಗಳು, 1,500ರಷ್ಟು ಸಿಬ್ಬಂದಿ, ರಜಾ ದಿನಗಳಲ್ಲೂ ಕಾರ್ಯನಿರ್ವಹಿಸಿ, ಅಭಿಯಾನ ಯಶಸ್ಸಿಗೆ ಸಹಕರಿಸಿದ್ದಾರೆ’ ಎಂದರು.

‘ಆಡಳಿತಕ್ಕೆ ಹೊಸ ವೇಗ ನೀಡಬೇಕು, ಕೋವಿಡ್ ಸಂದರ್ಭದಲ್ಲಿ ಬಾಕಿಯಾಗಿದ್ದ ಕಡತಗಳು ಶೀಘ್ರ ವಿಲೇವಾರಿ ಆಗಬೇಕು, ಎಲ್ಲ ಕಡತಗಳ ಹಿಂದೆ ಜನರ ಜೀವನ ಇರುತ್ತದೆ. ಕಡತ ವಿಲೇವಾರಿ ವಿಳಂಬದಿಂದ ಜನರಿಗೆ ಸಮಸ್ಯೆ ಆಗಬಾರದು ಎಂದು ಈ ಅಭಿಯಾನ ನಡೆಸಲಾಗುತ್ತಿದೆ. ಫೆ.28ಕ್ಕೆ ಅಭಿಯಾನ ಕೊನೆಗೊಳ್ಳಲಿದ್ದು, ವಿಶೇಷ ಪ್ರಕರಣ ಹೊರತುಪಡಿಸಿ, ಉಳಿದ ಎಲ್ಲ ಕಡತಗಳನ್ನು ವಿಲೇವಾರಿ ಮಾಡಲು ಸೂಚಿಸಲಾಗಿದೆ’ ಎಂದು ಹೇಳಿದರು.

400 ಕೆ.ವಿ ವಿದ್ಯುತ್ ಸ್ಟೇಷನ್: ಹೆಚ್ಚುತ್ತಿರುವ ವಿದ್ಯುತ್ ಬಳಕೆ, ಸರಬರಾಜು ಮತ್ತು ಗುಣಮಟ್ಟದಲ್ಲಿ ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಉದ್ದೇಶದಿಂ ಮಂಗಳೂರಿನಲ್ಲಿ 400 ಕೆ.ವಿ ವಿದ್ಯುತ್ ಸ್ಟೇಷನ್ ಆರಂಭಿಸಲು, ಜಾಗ ಗುರುತಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಇಂಧನ ಸಚಿವರೂ ಆಗಿರುವ ಸುನೀಲ್ ಕುಮಾರ್ ತಿಳಿಸಿದರು.

ರಾಣಿ ಅಬ್ಬಕ್ಕ ಹೆಸರು ಪ್ರಸ್ತಾವ: ನಗರದ ಲೇಡಿಗೋಶನ್ ಸರ್ಕಾರಿ ಆಸ್ಪತ್ರೆಗೆ ರಾಣಿ ಅಬ್ಬಕ್ಕ ಹೆಸರಿಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಸ್ವಾತಂತ್ರ ಅಮೃತ ಮಹೋತ್ಸವದ ಸಂದರ್ಭದಲ್ಲಿ ಈ ಮರುನಾಮಕರಣ ಪ್ರಸ್ತುತವಾಗಿದೆ. ಅಲ್ಲದೇ, ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿರುವ ರಾಣಿ ಅಬ್ಬಕ್ಕನ ಬಗ್ಗೆ ಹೊಸ ತಲೆಮಾರಿನ ಮಕ್ಕಳಿಗೆ ಪ್ರಜ್ಞೆ ಮೂಡಿಸಿದಂತಾಗುತ್ತದೆ ಎಂದು ಹೇಳಿದರು.

ಸಂಸದ ನಳಿನ್‌ಕುಮಾರ್ ಕಟೀಲ್, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಇದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ʼನೀಟ್‌ ಪಿಜಿ ಕೌನ್ಸೆಲಿಂಗ್ ರೌಂಡ್ 2 ವರದಿʼ ಸಲ್ಲಿಕೆ ಅವಧಿ ವಿಸ್ತರಣೆ |NEET PG Counselling 2021|

Sat Feb 26 , 2022
  ನವದೆಹಲಿ : ವೈದ್ಯಕೀಯ ಸಲಹಾ ಸಮಿತಿ (MCC) ಪಿಜಿ ಕೌನ್ಸೆಲಿಂಗ್ʼನ ರೌಂಡ್ 2ರ ವರದಿ ಮಾಡುವ ಸಮಯವನ್ನ ಫೆಬ್ರವರಿ 27ರ ಮಧ್ಯಾಹ್ನ 3 ಗಂಟೆಯವರೆಗೆ ವಿಸ್ತರಿಸಲಾಗಿದೆ ಎಂದು ಘೋಷಿಸಿದೆ. ಈ ಕುರಿತು ನೋಟಿಸ್ ಬಿಡುಗಡೆ ಮಾಡಿದ ಎಂಸಿಸಿ, ‘ಇದು ಪಿಜಿ ಕೌನ್ಸೆಲಿಂಗ್ 2021ರ ರೌಂಡ್-2 ರಲ್ಲಿ ಭಾಗವಹಿಸುವ ಎಲ್ಲಾ ಕಾಲೇಜುಗಳು/ ವಿಶ್ವವಿದ್ಯಾಲಯಗಳು/ ಸಂಸ್ಥೆಗಳು ಮತ್ತು ಅಭ್ಯರ್ಥಿಗಳಿಗೆ ಮಾಹಿತಿಗಾಗಿ ಮತ್ತು ಕೆಲವು ಕಾಲೇಜುಗಳು ರೌಂಡ್-2ರಲ್ಲಿ ಅಭ್ಯರ್ಥಿಗಳ ಆಫ್ ಲೈನ್ ಪ್ರವೇಶವನ್ನ […]

Advertisement

Wordpress Social Share Plugin powered by Ultimatelysocial