ಸಿದ್ದು ಮಾನವೊಲಿಕೆಗೆ ಬಗ್ಗುತ್ತಾರಾ ಇಬ್ರಾಹಿಂ,

ಬೆಂಗಳೂರು: ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಅವರನ್ನು ಪಕ್ಷ ತೊರೆಯದಂತೆ ಮನವೊಲಿಕೆ ಮಾಡಲು ಸಿದ್ದರಾಮಯ್ಯ ಯತ್ನಿಸುತ್ತಿದ್ದಾರೆ. ಇಂದು ಸಿದ್ದರಾಮಯ್ಯ ಸೂಚನೆ ಮೇರೆಗೆ ಎಚ್.ಸಿ.ಮಹದೇವಪ್ಪ ಅವರು ಇಬ್ರಾಹಿಂ ಜೊತೆ ಸಂಧಾನ ಮಾತುಕತೆ ನಡೆಸಿದರು.

ವಿಧಾನ ಪರಿಷತ್‌ ವಿಪಕ್ಷ ನಾಯಕನ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ಮುನಿಸಿಕೊಂಡಿರುವ ಇಬ್ರಾಹಿಂ ಕಾಂಗ್ರೆಸ್‌ ತೊರೆಯಲು ನಿರ್ಧರಿಸಿದ್ದು, ಶೀಘ್ರವೇ ಕಾಂಗ್ರೆಸ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಜೆಡಿಎಸ್‌ ಸೇರಲು ನಿರ್ಧರಿಸಿದ್ದಾರೆ.

 

ಸಿ.ಎಂ.ಇಬ್ರಾಹಿಂರನ್ನು ಭೇಟಿ ಮಾಡಿದ ಮಹದೇವಪ್ಪ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯನವರ ಸಂದೇಶವನ್ನು ತಲುಪಿಸಿದ್ದಾರೆ. ಹೈಕಮಾಂಡ್ ಜತೆಯೂ ಈ ಕುರಿತು ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.

ಮಹದೇವಪ್ಪ ಭೇಟಿ ವೇಳೆ ಫೆ.10 ರಂದು ತಮ್ಮ ನಿಲುವು ತಿಳಿಸುತ್ತೇನೆ ಎಂದು ಇಬ್ರಾಹಿಂ ಹೇಳಿದ್ದಾರೆಂದು ವರದಿ ತಿಳಿಸಿದೆ.

ನಾನೇ ಇಬ್ರಾಹಿಂ ಮನೆಗೆ ಹೋಗಿ ಮಾತನಾಡುತ್ತೇನೆ. ಅವರು ಕಾಂಗ್ರೆಸ್ ನಲ್ಲೆ ಇರಬೇಕು ಎಂಬುದು ನಮ್ಮ ಆಶಯ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇತ್ತೀಚೆಗೆ ಇಬ್ರಾಹಿಂ ಅವರ ಜತೆ ಮಾಜಿ ಸಚಿವ ಎಚ್‌.ಸಿ. ಮಹಾದೇವಪ್ಪ ದೂರವಾಣಿ ಮೂಲಕ ಸುಮಾರು ಅರ್ಧಗಂಟೆ ಚರ್ಚೆ ನಡೆಸಿದ ಸಂದರ್ಭದಲ್ಲಿ ಇಬ್ರಾಹಿಂ ತಮಗೆ ಆಗಿರುವ ಅನ್ಯಾಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಸೂಚನೆಯಂತೆ ಇಬ್ರಾಹಿಂ ಜತೆ ಮಾತನಾಡಿದ್ದೇನೆ. ಅವರಿಗೆ ಪಕ್ಷ ತಮ್ಮನ್ನು ನಡೆಸಿಕೊಂಡಿರುವ ಬಗ್ಗೆ ಬೇಸರವಿದೆ. ಶೀಘ್ರವೇ ಅವರನ್ನು ಭೇಟಿ ಮಾಡಿ ಮತ್ತೆ ಮಾತನಾಡುತ್ತೇನೆ ಎಂದು ಹೇಳಿದ್ದರು. ಅದರಂತೆ ಇಂದು ಭೇಟಿಯಾಗಿದ್ದಾರೆ.

ರವಿವಾರ ಜಮೀರ್‌ ಅಹ್ಮದ್‌ ಖಾನ್ ಅವರೂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಅನಂತರ ಖಾಸಗಿ ಕಾರ್ಯಕ್ರಮದಲ್ಲಿ ಇಬ್ರಾಹಿಂ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಒಟ್ಟಾರೆಯಾಗಿ ಸಿ.ಎಂ. ಇಬ್ರಾಹಿಂ ಅವರನ್ನು ಕಾಂಗ್ರೆಸ್ ನಲ್ಲಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಎಲ್ಲಾ ಪ್ರಯತ್ನ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೋವಿಡ್-19 ಕಾರಣದಿಂದಾಗಿ ಈ ಪಬ್ 1,229 ವರ್ಷಗಳಲ್ಲಿ ಮೊದಲ ಬಾರಿಗೆ ಮುಚ್ಚಲ್ಪಟ್ಟಿದೆ; 793 AD ನಲ್ಲಿ ಸೇವೆಗಳನ್ನು ಪ್ರಾರಂಭಿಸಿದರು

Mon Feb 7 , 2022
  ಬ್ರಿಟನ್‌ನಲ್ಲಿ ಅತ್ಯಂತ ಹಳೆಯ ಪಬ್ ಎಂದು ನಂಬಲಾದ ಪಬ್ ಅನ್ನು 1,229 ವರ್ಷಗಳಲ್ಲಿ ಮೊದಲ ಬಾರಿಗೆ ಮುಚ್ಚಲು ಒತ್ತಾಯಿಸಲಾಗಿದೆ. ಕ್ರಿ.ಶ.739 ರಲ್ಲಿ ‘ಯೇ ಓಲ್ಡೆ ಫೈಟಿಂಗ್ ಕಾಕ್ಸ್’ ಕಾರ್ಯಾಚರಣೆಯನ್ನು ಆರಂಭಿಸಿತು ಎಂದು ಹೇಳಲಾಗುತ್ತದೆ. ದುರದೃಷ್ಟವಶಾತ್, ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಇದು UK ಯಲ್ಲಿ ಸಾವಿರಾರು ಇತರ ರೆಸ್ಟೋರೆಂಟ್‌ಗಳು ಮತ್ತು ಪಬ್‌ಗಳಂತೆಯೇ ಅದೇ ಅದೃಷ್ಟವನ್ನು ಅನುಭವಿಸಿತು. ವರದಿಗಳ ಪ್ರಕಾರ, ಪಬ್ ಭಾರೀ ನಷ್ಟವನ್ನು ಅನುಭವಿಸಿತು ಮತ್ತು ತೆರೆದಿರಲು ಎಲ್ಲವನ್ನೂ ಪ್ರಯತ್ನಿಸಿದರೂ […]

Advertisement

Wordpress Social Share Plugin powered by Ultimatelysocial