ನ್ಯಾಯಕ್ಕಾಗಿ ಮೋದಿಗೆ ಸಿದ್ದು ಪ್ರಶ್ನೆಗಳ ಸುರಿಮಳೆ.

ಪಿಎಸ್‌ಐ ಹಗರಣ, ಬಿಜೆಪಿ ಸರ್ಕಾರದ ವಿರುದ್ಧದ ಭ್ರಷ್ಟಾಚಾರಗಳ ಆರೋಪಗಳನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿಯವರಿಗೆ ನ್ಯಾಯ ಬೇಕು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಪೋಸ್ಟರ್‌ಗಳನ್ನು ಪ್ರಕಟಿಸಿದ್ದಾರೆ.ಕಲಬುರರ್ಗಿ, ಯಾದಗಿರಿಗೆ ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ಪಾಲ್ಗೊಂಡಿದ್ದ ಮೋದಿಯವರಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಪಿಎಸ್‌ಐ ಹಗರಣದಿಂದ ಸಹಾಯಕರ ನೇಮಕಾತಿ ಹಗರಣ ಸೇರಿ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜೀನಿಯರ್ ನೇಮಕಾತಿ ಹಗರಣದಲ್ಲಿ ವಂಚಿತರಾದ ಅರ್ಹರಿಗೆ ನ್ಯಾಯಕೊಡಿಸಿ ಎಂದು ಪ್ರಶ್ನಿಸಿದ್ದಾರೆ.ಕೋವಿಡ್ ಸಂದರ್ಭದಲ್ಲಿ ಅಗತ್ಯ ಸಲಕರಣೆ ಪೂರೈಕೆ ಮಾಡಿದ್ದ ಗುತ್ತಿಗೆದಾರ ಬಸವರಾಜ ಅಮರಗೋಳ ಅವರಿಗೆ ಬಿಲ್ ಪಾವತಿ ಮಾಡಿಲ್ಲ. ಇದರಿಂದ ಬೇಸತ್ತು ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ಅವರ ಪ್ರಾಣ ಉಳಿಸಿ, ನ್ಯಾಯಕೊಡಬೇಕು ನೀವೇ ಅಲ್ಲವೇ ಎಂದು ಮೋದಿಗೆ ಹೇಳಿದ್ದಾರೆ.ಕೊರೊನಾ ಕಾಲದಲ್ಲಿ ೩೦೦೦ ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ. ಸೋಂಕಿಗೆ ಬಲಿಯಾದ ಸತ್ತವರ ಆತ್ಮಗಳು ನ್ಯಾಯಕ್ಕಾಗಿ ಕಾಯುತ್ತೀವೆ. ನಂದಿನಿ ಹಾಲು ಸಂಸ್ಥೆ ಮೇಲೆ ಗುಜರಾತಿನ ಅಮುಲ್ ಮೇಲೆ ಕಣ್ಣು ಬಿದ್ದಿದೆ. ನಮ್ಮ ರೈತರ ಅನ್ನದ ತಟ್ಟೆಗೆ ಮಣ್ಣು ಹಾಕಬೇಡಿ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.ರಸ್ತೆಗುಂಡಿಗಳಿಗೆ ಸಂಭವಿಸಿದ ಅಪಘಾತದಲ್ಲಿ ಪೋಷಕರನ್ನು ಕಳೆದುಕೊಂಡ ಹತ್ತಾರು ಕುಟುಂಬಗಳ ಮಕ್ಕಳಿಗೆ ಹಾಗೂ ಮಕ್ಕಳನ್ನು ಕಳೆದುಕೊಂಡ ಪೋಷಕರಿಗೆ ನ್ಯಾಯ ಒದಗಿಸಿ. ತಪ್ಪಿಸ್ಥರಿಗೆ ಶಿಕ್ಷೆ ಕೊಡಿಸಿ ಎಂದು ಒತ್ತಾಯಿಸಿದ್ದಾರೆ.ಶೇ. ೪೦ ರಷ್ಟು ಕಮೀಷನ್ ಕೊಟ್ಟಿಲ್ಲ ಎಂದು ಕಾರಣಕ್ಕಾಗಿ ಕಾಮಗಾರಿಯ ಹಣ ನೀಡದೆ, ಬಿಜೆಪಿ ಸತಾಯಿಸಿದೆ. ಈ ಸಾವಿನ ಸರಣಿಯನ್ನು ಕೊನೆಗಾಣಿಸುವರು ಯಾರು ಎಂದು ಪ್ರಶ್ನಿಸಿದ್ದಾರೆ.ಮೆಟ್ರೊ ಪಿಲ್ಲರ್ ಕುಸಿತದಿಂದ ತಾಯಿ, ಮಗು ಸಾವು ಇದಕ್ಕೆ ಯಾರು ಹೊಣೆಗಾರರು ಎಂದು ಸಿದ್ದರಾಮಯ್ಯ ಮೋದಿಗೆ ತಿವಿದಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತೋಟದಲ್ಲಿ ಸಮತಟ್ಟು ಮಾಡುವಾಗ ಕೇಳಿ ಬಂತು ಭಾರಿ ಸದ್ದು.

Mon Jan 30 , 2023
12ನೇ ಶತಮಾನದ ಯಲಮಂಚಿಲಿ ಚಾಲುಕ್ಯರ ಕಾಲದ ಕಲ್ಲಿನ ಕುಂಡಗಳು, ಪಿರಮಿಡ್‌ಗಳು, ಶಿಲಾಶಾಸನಗಳು, ಕಲ್ಲು ಚಪ್ಪಡಿಗಳು ಪತ್ತೆಯಾಗಿವೆ. ಇವುಗಳಷ್ಟೇ ಅಲ್ಲ.. ಪುರಾತನವಾದ ಇಟ್ಟಿಗೆಗಳು, ದೇವಾಲಯದ ಅವಶೇಷಗಳು ಮತ್ತು ಶಿಲಾಶಾಸನಗಳೂ ಆ ಪ್ರದೇಶದಲ್ಲಿ ಕಂಡುಬಂದಿವೆ. ಭೂಮಿ ಅಗೆಯುವಾಗ ಹೊಲ ಅಥವಾ ತೋಟಗಳಲ್ಲಿ ಆಗಾಗ ಐತಿಹಾಸಿಕ ಪಳೆಯುಳಿಕೆಗಳು, ವಸ್ತುಗಳು ಕಂಡುಬರುತ್ತಿರುತ್ತವೆ. ಇಂತಹ ಸುದ್ದಿಗಳು ಜಗತ್ತಿನ ನಾನಾನ ಭಾಗಗಳಲ್ಲಿ ಆಗಾಗ ಕೇಳುತ್ತಿರುತ್ತೇವೆ. ಅಂಥದ್ದೇ ಒಂದು ಅಪರೂಪದ ಘಟನೆ ಆಂಧ್ರ ಪ್ರದೇಶದಲ್ಲಿ   ನಡೆದಿದೆ. ರೈತರು ತಮ್ಮ ಹೊಲಗಳನ್ನು […]

Advertisement

Wordpress Social Share Plugin powered by Ultimatelysocial