ಸರ್‌ ಎಂವಿ ನಿಲ್ದಾಣ ಆಗಲಿದೆ ಇನ್ನಷ್ಟು ಹೈಟೆಕ್‌.

 

ಭಾರತದಲ್ಲೇ ಅತ್ಯಂತ ಸುಸಜ್ಜಿತವಾಗಿ ನಿರ್ಮಾಣವಾಗಿರುವ ಬೈಯಪ್ಪನಹಳ್ಳಿಯ ಸರ್‌ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ ರೈಲು ನಿಲ್ದಾಣದ ಪ್ಲಾಟ್‌ಫಾರಂಗಳಲ್ಲಿ ಎಸ್ಕಲೇಟರ್‌ಗಳು ಹಾಗೂ ಲಿಫ್ಟ್‌ ಅಳವಡಿಸುವ ಮೂಲಕ ಹೈಟೆಕ್‌ ಸ್ಪರ್ಶ ನೀಡಲಾಗುತ್ತಿದೆ.ಸರ್‌ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ ರೈಲು ನಿಲ್ದಾಣದಲ್ಲಿ ಏಳು ಪ್ಲಾಟ್‌ಫಾರಂಗಳಿವೆ. ಪ್ರತಿ ಪ್ಲಾಟ್‌ಫಾರಂಗೂ ಸಂಪರ್ಕಿಸುವ ರೀತಿಯಲ್ಲಿ ಮೂರು ಜೋಡಿ ಲಿಫ್ಟ್‌ಗಳು ಹಾಗೂ ಮೂರು ಜೋಡಿ ಎಸ್ಕಲೇಟರ್‌ಗಳನ್ನು ಅಳವಡಿಸಲಾಗುತ್ತಿದೆ. ಇದರೊಂದಿಗೆ ಪ್ರಯಾಣಿಕರ ಸೇವೆಗೆಂದೇ ಬ್ಯಾಟರಿಚಾಲಿತ (ಎಲೆಕ್ಟ್ರಾನಿಕ್‌) ನಾಲ್ಕು ವಾಹನಗಳನ್ನು ಬಿಡಲಾಗುತ್ತಿದೆ.ಪ್ರವೇಶ ದ್ವಾರದಲ್ಲಿಈಗಾಗಲೇ ಎರಡು ಎಸ್ಕಲೇಟರ್‌ ಹಾಗೂ ಒಂದು ಲಿಫ್ಟ್‌ ಅಳವಡಿಸಲಾಗಿದೆ. ಆದರೆ, 2ನೇ ಪ್ಲಾಟ್‌ಫಾರಂನಿಂದ ಈ ವ್ಯವಸ್ಥೆ ಇರಲಿಲ್ಲ. ಹಾಗಾಗಿ, 3.43 ಕೋಟಿ ರೂ. ವೆಚ್ಚದಲ್ಲಿ ಮೂರು ಜೋಡಿ (6) ಎಸ್ಕಲೇಟರ್‌ ಅಳವಡಿಸಲು ಕಾರ್ಯಾದೇಶ ನೀಡಲಾಗಿದೆ. ಮಾರ್ಚ್ ತಿಂಗಳ ಕೊನೆಯ ವಾರದಲ್ಲಿಎಸ್ಕಲೇಟರ್‌ ಕಾರ್ಯಾಚರಿಸಲಿವೆ. ಎರಡು ಮತ್ತು ಮೂರು ಪ್ಲಾಟ್‌ಫಾರಂ ನಡುವೆ ನಾಲ್ಕು ಮತ್ತು ಐದು, ಆರು ಮತ್ತು ಏಳನೇ ಪ್ಲಾಟ್‌ಫಾರಂ ನಡುವೆ ಒಳಗೆ ಬರಲು, ಹೊರ ಹೋಗುವ ಎರಡು ಕಡೆಗೂ ಎಸ್ಕಲೇಟರ್‌ ಅಳವಡಿಸಲಾಗುತ್ತಿದೆ.
ಇದೇ ಮಾದರಿಯಲ್ಲಿ 80.67 ಲಕ್ಷ ರೂ. ವೆಚ್ಚದಲ್ಲಿ ಮೂರು ಜೋಡಿ (ಆರು) ಲಿಫ್ಟ್‌ಗಳನ್ನು ಅಳವಡಿಸಲು ಈಗಾಗಲೇ ಕಾರ್ಯಾದೇಶ ನೀಡಲಾಗಿದೆ. ಇದು ಕೂಡ ಮಾರ್ಚ್ ತಿಂಗಳಲ್ಲಿ ಕೆಲಸ ಪೂರ್ಣಗೊಂಡು ಕಾರ್ಯಗತಗೊಳ್ಳಲಿದೆ ಎಂದು ನೈರುತ್ಯ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದರು.ನಡೆಯಲಾಗದ ಪ್ರಯಾಣಿಕರಿಗೆ ಹಾಗೂ ಲಗೇಜ್‌ ಇರುವವರನ್ನು ಮುಖ್ಯ ದ್ವಾರದಿಂದ ಪ್ಲಾಟ್‌ಫಾರಂಗಳಿಗೆ ಕರೆದೊಯ್ಯಲು ಈಗಾಗಲೇ ಎಧಿರಧಿಡು ಬ್ಯಾಟರಿಚಾಲಿತ ವಾಹನಗಳನ್ನು ಬಿಡಲಾಗಿದೆ. ಕೆಲವೇ ದಿನಗಳಲ್ಲಿಇನ್ನೂ ಎರಡು ವಾಹನ ಬಿಡಲಾಗುವುದು. ಜಿಎಸ್‌ಟಿ ಸಹಿತ ತಲಾ 15 ರೂ. ಪಾವತಿಸಿ ಇದರ ಸೇವೆ ಪಡೆದುಕೊಳ್ಳಬಹುದು. ಬ್ಯಾಟರಿ ಚಾಲಿತ ವಾಹನಗಳನ್ನು ಮುಂಗಡ ಬುಕ್ಕಿಂಗ್‌ ಮಾಡಿಕೊಳ್ಳುವ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಪ್ರತಿ ಪ್ಲಾಟ್‌ಫಾರಂ, ಪ್ರವೇಶ ದ್ವಾರದ ಎಲ್‌ಇಡಿ ಸ್ಕ್ರೀನ್‌ನಲ್ಲಿ ಬ್ಯಾಟರಿ ವಾಹನ ಸಂಪರ್ಕಿಸುವ, ಬುಕ್ಕಿಂಗ್‌ ಮಾಡುವ ಸಂಖ್ಯೆಯನ್ನು ಪ್ರದರ್ಶಿಸಲಾಗುತ್ತಿದೆ.ಭಾರತದಲ್ಲಿನ ಮೊದಲ ಕೇಂದ್ರೀಕೃತ ಹವಾನಿಯಂತ್ರಿತ ರೈಲ್ವೆ ಟರ್ಮಿನಲ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೈಯಪ್ಪನಹಳ್ಳಿಯ ಸರ್‌ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ ರೈಲು ನಿಲ್ದಾಣ ಎಲ್ಲ ರೀತಿಯಲ್ಲೂಸುಸಜ್ಜಿತವಾಗಿದೆ. ಆದರೆ, ರೈಲು ನಿಲ್ದಾಣಕ್ಕೆ ತೆರಳಲು ಸೂಕ್ತವಾದ ಸಂಪರ್ಕವಿಲ್ಲ. ಬೈಯಪ್ಪನಹಳ್ಳಿಗೆ ಹೋಗುವ ನೇರಳೆ ಬಣ್ಣದ ಮೆಟ್ರೊ ರೈಲಿನಲ್ಲಿ ಹೋಗುವ ಪ್ರಯಾಣಿಕರು ಸ್ವಾಮಿ ವಿವೇಕಾನಂದ ರಸ್ತೆ ನಿಲ್ದಾಣದಲ್ಲಿಇಳಿದು ಆಟೋ ಅಥವಾ ಟ್ಯಾಕ್ಸಿ ಹಿಡಿದು ಎರಡು ಕಿ.ಮೀ. ದೂರ ಹೋಗಬೇಕು. ಮೆಜೆಸ್ಟಿಕ್‌ನಿಂದ ಅರ್ಧ ಗಂಟೆಗೊಂದರಂತೆ ಬಿಎಂಟಿಸಿ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಇದು ಎಲ್ಲ ಬಡಾವಣೆಗಳಿಗೂ ಪೂರಕವಾಗಿಲ್ಲ. ಹಾಗಾಗಿ, ಪ್ರಯಾಣಿಕರು ನಿಲ್ದಾಣ ತಲುಪಲು ಸಾಕಷ್ಟು ಸಾಹಸಪಡಬೇಕು. ಹಾಗಾಗಿ, ಕ್ರಾಂತಿವೀರ ಮೆಟ್ರೊ ರೈಲು ನಿಲ್ದಾಣ ವ್ಯವಸ್ಥೆ ಮಾದರಿಯಲ್ಲೇ ಇಲ್ಲಿಗೂ ಸಂಪರ್ಕ ಕಲ್ಪಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಡಿಎ ವಿಲ್ಲಾ ಮಾರ್ಚ್-ಏಪ್ರಿಲ್‌ಗೆ ಸಿದ್ಧ.

Mon Feb 20 , 2023
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತುಮಕೂರು ರಸ್ತೆಯ ಹುಣ್ಣಿಗೆರೆ(ದಾಸನಪುರ ಹೋಬಳಿ) ಯಲ್ಲಿ 271.46 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ವಿಲ್ಲಾ ಯೋಜನೆ 2023ರ ಮಾರ್ಚ್-ಏಪ್ರಿಲ್‌ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಹೀಗಾಗಿ, ವಿಲ್ಲಾ ಹೊಂದಬೇಕೆಂಬುವವರ ಕನಸು ನನಸಾಗುವ ದಿನಗಳು ಹತ್ತಿರವಾಗುತ್ತಿವೆ.ಬಿಡಿಎ ಮೊದಲ ವಿಲ್ಲಾ ಯೋಜನೆ ಸಂಪೂರ್ಣ ಯಶಸ್ವಿಯಾಗಿದ್ದು, ಆಲೂರಿನಲ್ಲಿ ನಿರ್ಮಿಸಿದ್ದ 452 ವಿಲ್ಲಾಗಳು ಶೇ.100ರಷ್ಟು ಮಾರಾಟವಾಗಿವೆ. ಇದರ ಯಶಸ್ಸಿನಿಂದ ಪ್ರೇರಣೆಗೊಂಡ ಬಿಡಿಎ ಹುಣ್ಣಿಗೆರೆಯಲ್ಲಿ ಮತ್ತೊಂದು ವಿಲ್ಲಾ ಯೋಜನೆಗೆ ಕೈಹಾಕಿತ್ತು.ಹುಣ್ಣಿಗೆರೆಯಲ್ಲಿ ವಿಲ್ಲಾ ಯೋಜನೆಗೆಂದು […]

Advertisement

Wordpress Social Share Plugin powered by Ultimatelysocial