ಡ್ರಂಕ್ ಅಂಡ್ ಡ್ರೈವ್ ಪತ್ತೆಗೆ ಕೇರಳ ಪೊಲೀಸರಿಂದ ವಿಶೇಷ ಅಭಿಯಾನ!

ತಿರುವನಂತಪುರಂ, ಫೆ.23-ಮದ್ಯಮಾರಾಟ ನಿಷೇಧದ ನಡುವೆಯೂ ಕೇರಳದಲ್ಲಿ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಪೊಲೀಸರು ರಾಜ್ಯಾದ್ಯಂತ ಕುಡಿದು ವಾಹನ ಚಾಲನೆ ಮಾಡುವವರನ್ನು ಪತ್ತೆ ಹಚ್ಚುವ ವಿಶೇಷ ಅಭಿಯಾನವನ್ನು ನಡೆಸಿದ್ದು 3,764 ಪ್ರಕರಣಗಳು ದಾಖಲಾಗಿದೆ.  ಸಂಚಾರ ವಿಭಾಗದ ಐಜಿಪಿ ಎ ಅಕ್ಬರ್ ಸೂಚನೆಯ ಮೇರೆಗೆ ಕೇರಳದಾದ್ಯಂತ ಜಿಲ್ಲಾ ಪೊಲೀಸ್ ಮುಖ್ಯಸ್ಥರ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಕಳೆದ ಫೆ.6ರಿಂದ ಫೆ.12ರವರೆಗೆ 3,764 ಪ್ರಕರಣಗಳು ದಾಖಲಾಗಿದ್ದು, 1,911 ಲೈಸೆನ್ಸ್ ರದ್ದುಪಡಿಸಲಾಗಿದ್ದು, ಕುಡಿದು ವಾಹನ ಚಾಲನೆ ಮಾಡಿದ್ದಕ್ಕಾಗಿ 894 ಪರವಾನಗಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ತ್ರಿಶೂರ್ ನಗರದಲ್ಲಿ ಅತಿ ಹೆಚ್ಚು ಕುಡಿದು ವಾಹನ ಚಾಲನೆ ಪ್ರಕರಣ ದಾಳಲಾಗಿದೆ .ಕೊಚ್ಚಿ ನಗರದಲ್ಲಿ 342 ಪ್ರಕರಣಗಳು ಮತ್ತು ಆಲಪ್ಪುಳದಲ್ಲಿ 304 ಪ್ರಕರಣಗಳು ದಾಖಲಾಗಿವೆ. ತಿರುವನಂತಪುರಂ ನಗರದಲ್ಲಿ ಅತಿ ಕಡಿಮೆ 7 ಪ್ರಕರಣ ದಾಖಲಾಗಿದೆ.

ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಎಲ್ಲಾ ಜಿಲ್ಲೆಗಳಲ್ಲಿ ತಪಾಸಣೆ ಮುಂದುವರೆಸಲಾಗುವುದು ಎಂದು ಮೂಲಗಳಿ ತಿಳಿಸಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸತತ 4ನೇ ದಿನವೂ ಷೇರು ಮಾರುಕಟ್ಟೆ ಕುಸಿತ; ಸೆನ್ಸೆಕ್ಸ್ 927 ಅಂಕ ಕುಸಿತ

Thu Feb 23 , 2023
    ಜಾಗತಿಕ ಹಣದುಬ್ಬರ ಭೀತಿಯ ನಡುವೆಯೇ ಭಾರತೀಯ ಷೇರುಮಾರುಕಟ್ಟೆ ಸತತ ನಾಲ್ಕನೇ ದಿನವೂ ಕುಸಿತ ಕಂಡಿದ್ದು, ಸೆನ್ಸೆಕ್ಸ್ 927 ಅಂಕ ಕುಸಿತಗೊಂಡಿದೆ. ಮುಂಬೈ: ಜಾಗತಿಕ ಹಣದುಬ್ಬರ ಭೀತಿಯ ನಡುವೆಯೇ ಭಾರತೀಯ ಷೇರುಮಾರುಕಟ್ಟೆ ಸತತ ನಾಲ್ಕನೇ ದಿನವೂ ಕುಸಿತ ಕಂಡಿದ್ದು, ಸೆನ್ಸೆಕ್ಸ್ 927 ಅಂಕ ಕುಸಿತಗೊಂಡಿದೆ. ವಿಶ್ವಾದ್ಯಂತ ಹಣದುಬ್ಬರ ಹರಡುವ ಭೀತಿಯಿಂದ ಭಾರತ ಸೇರಿದಂತೆ ಜಾಗತಿಕ ಷೇರುಪೇಟೆಗಳು ತತ್ತರಿಸಿದ್ದು, ಸತತ ನಾಲ್ಕನೇ ದಿನವೂ ಕುಸಿತ ಕಂಡಿದೆ. ಬಿಎಸ್ಇ ಸೆನ್ಸೆಕ್ಸ್ 927.74 […]

Advertisement

Wordpress Social Share Plugin powered by Ultimatelysocial