ಧರ್ಮಸ್ಥಳಕ್ಕೆ ಪಾದಯಾತ್ರೆ ಆರಂಭ: ಶಿವರಾತ್ರಿ ಪ್ರಯುಕ್ತ ವಿವಿಧೆಡೆಯಿಂದ ಭಕ್ತರ ಆಗಮನ

ಬೆಳ್ತಂಗಡಿ: ಶಿವರಾತ್ರಿ ಪ್ರಯುಕ್ತ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರಿಕರು ಚಾರ್ಮಾಡಿ ಹಾಗೂ ಶಿರಾಡಿ ಘಾಟಿಗಳ ಮೂಲಕ ಶನಿವಾರ ಬರಲಾರಂಭಿಸಿದ್ದಾರೆ.
ಈಗಾಗಲೇ ಹಲವು ತಂಡಗಳು ಚಾರ್ಮಾಡಿ, ಕಲ್ಮಂಜ, ಮುಂಡಾಜೆ, ಕೊಕ್ಕಡ, ಬೂಡುಜಾಲು, ಉಜಿರೆ ಮೊದಲಾದ ರಸ್ತೆಗಳ ಮೂಲಕ ಧರ್ಮಸ್ಥಳ ಕ್ಷೇತ್ರದ ಕಡೆ ಪ್ರಯಾಣಿಸುತ್ತಿದ್ದಾರೆ.ಭಾನುವಾರ ಹಾಗೂ ಸೋಮವಾರ ಅತಿ ಹೆಚ್ಚಿನ ಸಂಖ್ಯೆಯ ಪಾದಯಾತ್ರಿಗಳು ಈ ರಸ್ತೆಗಳ ಮೂಲಕ ಆಗಮಿಸುವ ಸಾಧ್ಯತೆ ಇದೆ. ಶಿವರಾತ್ರಿಯಂದು ಕ್ಷೇತ್ರಕ್ಕೆ 30 ಸಾವಿರ ಪಾದಯಾತ್ರಿಗಳು ಆಗಮಿಸುವ ನಿರೀಕ್ಷೆ ಇದೆ.ಸ್ಥಳೀಯರಿಂದ ಸೇವೆ: ರಸ್ತೆಯ ಅಲ್ಲಲ್ಲಿ ಸ್ಥಳೀಯರು ಪಾನಕ, ಶರಬತ್ತು, ಕಲ್ಲಂಗಡಿ, ನೀರಿನ ವ್ಯವಸ್ಥೆ ಮಾಡಿ ಯಾತ್ರಿಗಳನ್ನು ಸ್ವಾಗತಿಸುತ್ತಿದ್ದಾರೆ. ಬೆಂಗಳೂರಿನ ಪದ್ಮರಾಜ್​ ಎಂಬುವರು ಕಕ್ಕಿಂಜೆಯ ಮಧುಕರ ರಾವ್​ ಸಹಕಾರದಲ್ಲಿ 30 ವರ್ಷಗಳಿಂದ, ಮುಂಡಾಜೆಯ ಪಡೀಲು ರಾಮನಾಯ್ಕ್​ ಮತ್ತು ಮನೆಯವರು 25 ವರ್ಷಗಳಿಂದ ಸ್ವಾಗತಿಸಿ ಉಪಚರಿಸುತ್ತಿದ್ದಾರೆ. ಚಾರ್ಮಾಡಿ ಪಂಚಾಯಿತಿ, ಉಜಿರೆ, ಕನ್ಯಾಡಿ, ಸೋಮಂತಡ್ಕ ಮೊದಲಾದ ಕಡೆ ಸ್ಥಳೀಯರು ಪಾದಯಾತ್ರಿಗಳ ಅನುಕೂಲಕ್ಕಾಗಿ ವ್ಯವಸ್ಥೆ ಕಲ್ಪಿಸಿದ್ದಾರೆ.ಚಾರ್ಮಾಡಿ ಮೂಲಕ ಬರುವ ಪಾದಯಾತ್ರಿಗಳಿಗೆ ಶ್ರೀ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನ, ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನಗಳ ಆಡಳಿತ ಮಂಡಳಿ ಆಹಾರ, ವಸತಿ ಸೇವೆಗಳನ್ನು ಒದಗಿಸಿದೆ. ಪಾದಯಾತ್ರಿಕರ ಆರೋಗ್ಯ ಉಪಚಾರಕ್ಕೆ ಉಜಿರೆ ಎಸ್​ಡಿಎಂ ಆಸ್ಪತ್ರೆ ವತಿಯಿಂದ ಚಾರ್ಮಾಡಿ, ಸತ್ಯನಪಲ್ಕೆ, ಬೂಡುಜಾಲು, ಉಜಿರೆ, ಧರ್ಮಸ್ಥಳ ಮೊದಲಾದ ಕಡೆ ಶಿಬಿರಗಳನ್ನು ತೆರೆಯಲಾಗಿದೆ. ಚಾರ್ಮಾಡಿ ಹಾಗೂ ಶಿರಾಡಿ ಘಾಟಿಯಲ್ಲಿ ಕಾಡಾನೆಗಳ ಸಂಚಾರ ಇರುವುದರಿಂದ ಪಾದಯಾತ್ರಿಗಳು ಎಚ್ಚರಿಕೆಯಿಂದ ಸಂಚರಿಸಬೇಕು ಎಂದು ಅರಣ್ಯ ಇಲಾಖೆ ಸೂಚನೆ ನೀಡಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ'

Sun Feb 27 , 2022
ಅಫಜಲಪುರ: ಅಭಿವೃದ್ಧಿ ಕಾರ್ಯಗಳಿಗೆ ಮಂಜೂರಾಗಿರುವ ಅನುದಾನ ಸಂಪೂರ್ಣವಾಗಿ ಸದ್ಬಳಕೆ ಆಗಬೇಕು. ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು ಎಂದು ಶಾಸಕ ಎಂ.ವೈ.ಪಾಟೀಲ ತಿಳಿಸಿದರು.ತಾಲ್ಲೂಕುನ ಅತನೂರ ಗ್ರಾಮದಿಂದ ಬಿಲ್ವಾಡ್ (ಕೆ) ಗ್ರಾಮದವರೆಗೆ ₹3 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಈ ಭಾಗದಲ್ಲಿ ಭೀಮಾ ಏತ ನೀರಾವರಿ ಯೋಜನೆ ಮಹತ್ವದಾಗಿದ್ದು, ಇದರಿಂದ 60 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಆದರೆ ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ₹900 ಕೋಟಿ […]

Advertisement

Wordpress Social Share Plugin powered by Ultimatelysocial