ಅರುಣಾಚಲ ಪ್ರದೇಶದಲ್ಲಿ ಹಿಮಪಾತ: ಹಿಮದ ಅಡಿ ಸಿಲುಕಿರುವ ಏಳು ಸೈನಿಕರು

ಭಾರತದ ಈಶಾನ್ಯ ಗಡಿ ಭಾಗದ ಅರುಣಾಚಲ ಪ್ರದೇಶದಲ್ಲಿ ಸಂಭವಿಸಿದ ಹಿಮಪಾತದಲ್ಲಿ 7 ಸೈನಿಕರು ಸಿಲುಕಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.ಈ ಬಗ್ಗೆ ಮಾಹಿತಿ ನೀಡಿದ ರಕ್ಷಣಾ ಸಚಿವಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಲೆಫ್ಟಿನೆಂಟ್‌ ಕರ್ನಲ್‌ ಹರ್ಷವರ್ಧನ್‌ ಪಾಂಡೆ, ಅರುಣಾಚಲ ಪ್ರದೇಶದ ಕಮೆಂಗ್‌ ಸೆಕ್ಟರ್‌ ನ ಎತ್ತರದ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದರು.ಗಸ್ತು ತಿರುಗುತ್ತಿದ್ದ ವೇಳೆ ಸಂಭವಿಸಿದ ಹಿಮಪಾತಕ್ಕೆ 7 ಸೈನಿಕರು ಸಿಲುಕಿಕೊಂಡಿದ್ದಾರೆ. ಅವರ ರಕ್ಷಣೆಗಾಗಿ ಕಾರ್ಯಾಚರಣೆ ಮಾಡಲಾಗುತ್ತಿದ್ದು, ವಿಶೇಷ ತಂಡಗಳನ್ನು ಏರ್‌ ಲಿಪಟ್‌ ಮೂಲಕ ರಕ್ಷಣೆಗೆ ಕರೆತರಲಾಗಿದೆ ಎಂದು ತಿಳಿಸಿದ್ದಾರೆ.ಗಡಿನಾಡಿನ ಹಲವು ಎತ್ತರದ ಪ್ರದೇಶಗಳು ಈ ತಿಂಗಳಿನಲ್ಲಿ ಭಾರೀ ಹಿಮಪಾತಕ್ಕೆ ಸಾಕ್ಷಿಯಾಗುತ್ತಿವೆ. ಇಟಾನಗರ ಬಳಿಯ ಡೇರಿಯಾ ಬೆಟ್ಟವು 34 ವರ್ಷಗಳ ನಂತರ ಹಿಮಪಾತಕ್ಕೆ ಸಾಕ್ಷಿಯಾಗಿದ್ದು, ಕಮೆಂಗ್‌ ಪ್ರದೇಶದಲ್ಲಿಯೂ ಕೂಡ ಎರಡು ದಶಕಗಳ ನಂತರ ಹಿಮಪಾತ ಸಂಭವಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ಹಿನ್ನೆಲೆ "ದೇಶದಲ್ಲಿ ಹೆಣ್ಣುಮಕ್ಕಳಿಗೆ ಕಿರುಕುಳ ನೀಡುವುದನ್ನು ಮೊದಲು ನಿಲ್ಲಿಸಬೇಕು,

Wed Feb 9 , 2022
ನವದೆಹಲಿ, ಫೆಬ್ರವರಿ 9: ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ಹಿನ್ನೆಲೆ “ದೇಶದಲ್ಲಿ ಹೆಣ್ಣುಮಕ್ಕಳಿಗೆ ಕಿರುಕುಳ ನೀಡುವುದನ್ನು ಮೊದಲು ನಿಲ್ಲಿಸಬೇಕು,” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆಗ್ರಹಿಸಿದ್ದಾರೆ.ಭಾರತದಲ್ಲಿ ಸಂವಿಧಾನವು ಹೆಣ್ಣುಮಕ್ಕಳಿಗೂ ಸಮಾನ ಹಕ್ಕನ್ನು ನೀಡಿದೆ.ಮಹಿಳೆಯರು ಯಾವ ಬಟ್ಟೆಯನ್ನು ಹಾಕಿಕೊಳ್ಳಬೇಕು ಎಂಬುದನ್ನು ನಿರ್ಧರಿಸುವುದು ಅವರ ವೈಯಕ್ತಿಕ ಹಕ್ಕು ಎನ್ನುವುದರ ಮೂಲಕ ಹಿಜಾಬ್ ಧರಿಸುವುದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.ಸಿಧು ರನ್ನು ಹೊಗಳುವ ಭರದಲ್ಲಿ ರಾಹುಲ್ ಗಾಂಧಿ ನೀಡಿದ ಹೇಳಿಕೆ ಫುಲ್ ಟ್ರೋಲ್  […]

Advertisement

Wordpress Social Share Plugin powered by Ultimatelysocial