ಪುಟ್ಟ ʼನೊಣʼ ಎಷ್ಟು ಡೇಂಜರ್ ಗೊತ್ತಾ…?

ಬೇಸಿಗೆ ಬಂತೆಂದರೆ ಸಾಕು ಮನೆ, ರಸ್ತೆ ಚರಂಡಿಗಳಲ್ಲಿ ನೊಣಗಳದೇ ಕಾರುಬಾರು. ಮನಬಂದಂತೆ ಊಟದ ಎಲೆ, ತಿಂಡಿಗಳ ಮೇಲೆ ಕೂರುವ ಇವು ನಮಗೆ ತುಂಬಲಾರದ ನಷ್ಟ ಮಾಡುತ್ತವೆ. ಇದು ರೋಗವನ್ನು ಹರಡುವ ಮುಖ್ಯ ಕೀಟವಾಗಿದೆ.ನೊಣ ಆಹಾರವನ್ನು ತಿನ್ನುವ ರೀತಿ ತುಂಬ ವಿಚಿತ್ರ.ಆಹಾರದ ಮೇಲೆ ಕೂರುವ ಇದು, ಮೊದಲು ಅದರ ಮೇಲೆ ಜೊಲ್ಲು ರಸವನ್ನು ಮತ್ತು ಇತರ ಜೀರ್ಣರಸಗಳನ್ನು ಬಿಡುತ್ತದೆ. ಇದರಿಂದಲೇ ಆಹಾರಗಳು ಅಧಿಕ ಪ್ರಮಾಣದಲ್ಲಿ ಮಲಿನಗೊಳ್ಳುತ್ತವೆ. ಇವು ಅನೇಕ ಭಯಂಕರ ರೋಗಾಣುಗಳನ್ನು ಹರಡಿ ಲಕ್ಷಾಂತರ ಜನರ ಸಾವಿಗೆ ಕಾರಣವಾಗುತ್ತವೆ.ನೊಣ ಇನ್ನೊಂದು ರೀತಿಯಲ್ಲಿ ಆಹಾರವನ್ನು ಕಲುಷಿತಗೊಳಿಸುತ್ತವೆ. ಅವು ತಮ್ಮ ಕಾಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಕಾಲ್ಗಳನ್ನು ಪರಸ್ಪರ ಉಜ್ಜಿಳ್ಳುತ್ತವೆ. ಹೀಗೆ ಮಾಡಿದಾಗ ಅವುಗಳ ಕಾಲಿನಲ್ಲಿರುವ ರೋಗಾಣುಗು ಆಹಾರದ ಮೇಲೆ ಬೀಳುತ್ತವೆ.ನೊಣಗಳು ಆಹಾರವನ್ನು ಕಲುಷಿತಗೊಳಿಸುವುದರಿಂದ ಟೈಫಾಯಿಡ್, ಕ್ಷಯ ಮತ್ತು ಆಮಶಂಕೆ ಮುಂತಾದ ರೋಗಗಳು ಕಾಣಿಸಿಕೊಳ್ಳುತ್ತವೆ. ಹವಾಮಾನ ತಣ್ಣಗಿದ್ದರೆ ಹೆಚ್ಚುಕಾಲ ಬದುಕುವ ಇವು ಬಿರುಬೇಸಿಗೆಯಲ್ಲಿ ಸಾಯುತ್ತವೆ. ಹಾಗಾಗಿ ಇಂತಹ ರೋಗಗಳನ್ನು ಉಂಟು ಮಾಡುವ ನೊಣಗಳಿಂದ ಹುಷಾರಾಗಿರಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹುಣಸೂರಲ್ಲಿ: ಗುಂಡೇಟಿಗೆ ಕಾಡಾನೆಯ ಬಲಿ

Sat Jan 29 , 2022
ಹುಣಸೂರು: ಗುಂಡೇಟಿಗೆ ಕಾಡಾನೆಯೊಂದು ಬಲಿಯಾಗಿರುವ ಘಟನೆ ನಾಗರಹೊಳೆ ಉದ್ಯಾನದ ಆನೆಚೌಕೂರು ಮೀಸಲು ಅರಣ್ಯದಂಚಿನ ಸೂಳಗೋಡು ಗ್ರಾಮದಲ್ಲಿ ನಡೆದಿದೆ. ಕಾಡಂಚಿನಿಂದ ಸುಮಾರು 500 ಮೀಟರ್ ದೂರದ ಪಿರಿಯಾಪಟ್ಟಣ ತಾಲೂಕಿನ ಸೂಳಗೋಡು ಗ್ರಾಮದ ಚಿಕ್ಕೇಗೌಡರ ಪುತ್ರ ರೇವಣ್ಣರ ಜಮೀನಿನಲ್ಲಿ ಸುಮಾರು 20 ವರ್ಷದ ಹೆಣ್ಣಾನೆ ಶವ ಪತ್ತೆಯಾಗಿದೆ. ನಾಗರಹೊಳೆ ಉದ್ಯಾನದಿಂದ ಹುಣಸೂರು ವನ್ಯಜೀವಿ ವಲಯ ವ್ಯಾಪ್ತಿಯಿಂದ ಆಹಾರ ಹುಡುಕಿಕೊಂಡು ನಾಡಿಗೆ ಬಂದಿದ್ದ ಸುಮಾರು 4-5 ಆನೆಗಳ ಹಿಂಡಿನಲ್ಲಿದ್ದ ಈ ಹೆಣ್ಣಾನೆಗೆ ಗುಂಡೇಟು ತಗುಲಿದ್ದು, ಸಾವನ್ನಪ್ಪಿದೆ. […]

Advertisement

Wordpress Social Share Plugin powered by Ultimatelysocial