ಮಂಗಳೂರು ವಿಮಾನ ನಿಲ್ದಾಣದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ

‘ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದು, ದೇಶ ಈಗ ಅತ್ಯಂತ ಸಂಕಷ್ಟದ ಪರಿಸ್ಥಿತಿಗೆ ಸಿಲುಕಿದೆ. ದೇಶವನ್ನು ಮರುನಿರ್ಮಾಣ ಮಾಡಬೇಕಾದ ಅನಿವಾರ್ಯತೆ ಎದುರಾಗಿದ್ದು, ದೇಶಕ್ಕೆ ಕಾಂಗ್ರೆಸ್ ಅಗತ್ಯವಿದೆ. ಹೀಗಾಗಿ ಪಕ್ಷದ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಅವರು ಪಕ್ಷದ ಸದಸ್ಯತ್ವ ಅಭಿಯಾನ ಆರಂಭಿಸಿದ್ದಾರೆ.

ಪಕ್ಷದಲ್ಲಿ ಬ್ಲಾಕ್, ಜಿಲ್ಲಾ ಪದಾಧಿಕಾರಿಗಳ ಚುನಾವಣೆ ನಿಗದಿಯಾಗಿದ್ದು, ಈಗ ಸದಸ್ಯತ್ವ ನೋಂದಣಿ ಮಾಡಿಕೊಂಡರೆ ಮತದಾನದ ಹಕ್ಕು ನೀಡಲಾಗುವುದು. 40 ಬೂತ್ ಗಳಿಗೆ ಒಬ್ಬ ಮುಖ್ಯ ನೋಂದಣಿದಾರರನ್ನು ನೇಮಕ ಮಾಡಿದ್ದೇವೆ. ಮುಂದಿನ ಚುನಾವಣೆ ಸಂದರ್ಭ ಟಿಕೆಟ್ ನೀಡುವ ವಿಚಾರದಲ್ಲಿ ಪಕ್ಷದ ಸದಸ್ಯರ ಅಭಿಪ್ರಾಯ ಕೇಳಲು ಅನುವಾಗಲಿದೆ. ಕಾಂಗ್ರೆಸ್ ಕಾರ್ಯಕರ್ತರ ಭಾವನೆ ಅಧ್ಯಕ್ಷರ ಭಾವನೆಯಾಗಬೇಕು. ಯಾರು ನಮ್ಮ ನಾಯಕರಾಗಬೇಕು ಎಂಬುದರ ಬಗ್ಗೆ ಕಾರ್ಯಕರ್ತರ ಅಭಿಪ್ರಾಯವನ್ನು ಆನ್ಲೈನ್ ಮೂಲಕ ಸಂಗ್ರಹಿಸಲು ಅನುವಾಗುವಂತೆ ಡಿಜಿಟಲ್ ಸದಸ್ಯತ್ವ ನೋಂದಣಿ ಆರಂಭಿಸಿದ್ದೇವೆ.

ಕಾಂಗ್ರೆಸ್ ಪಕ್ಷದ ಸಿದ್ಧಾಂತ, ನಾಯಕತ್ವದಲ್ಲಿ ನಂಬಿಕೆ ಇರುವವರು 5 ರೂ ಕೊಟ್ಟು ಸದಸ್ಯರಾಗಬಹುದು. ಗುರುತಿನ ಚೀಟಿ ಪಡೆಯಲು ಇಚ್ಛಿಸುವವರು ಜಿಲ್ಲಾ ಕಾಂಗ್ರೆಸ್ ನಲ್ಲಿ 10 ರೂ. ನೀಡಿ ಪಡೆಯಬಹುದು. ಸದಸ್ಯತ್ವ ವಿಚಾರದಲ್ಲಿ ಮುಖ್ಯ ನೋಂದಣಿದಾರರನ್ನು ಭೇಟಿ ಮಾಡಿ, ಪ್ರತಿಯೊಬ್ಬರಿಗೂ ಬೂತ್ ಗಳನ್ನು ಹಂಚಲು, ಅವರೊಂದಿಗೆ ಚರ್ಚೆ ಮಾಡಲು ಇಂದು ಮಂಗಳೂರು ಹಾಗೂ ಉಡುಪಿಗೆ ಭೇಟಿ ನೀಡುತ್ತಿದ್ದೇನೆ.’

ಕರಾವಳಿ ಭಾಗದಲ್ಲಿ ಹಿಜಾಬ್ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಬಿಜೆಪಿ ನಾಯಕರ ಟೀಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಸದಾ ಕಾಂಗ್ರೆಸ್ ವಿರುದ್ಧ ಆರೋಪ, ಟೀಕೆ ಮಾಡುವುದೇ ಬಿಜೆಪಿಯವರ ಕೆಲಸ. ದೇಶ, ರಾಜ್ಯ, ಮಕ್ಕಳಲ್ಲಿ ಅಶಾಂತಿ ಮೂಡಿಸುವುದು ಅವರ ಕೆಲಸ ವಾಗಿದ್ದು, ಮೊದಲಿನಿಂದಲೂ ಅವರು ಇದನ್ನೇ ಮಾಡಿಕೊಂಡು ಬರುತ್ತಿದ್ದಾರೆ. ಈ ವಿಚಾರವಾಗಿ ಪತ್ರಿಕಾಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡುತ್ತೇನೆ’ ಎಂದು ಉತ್ತರಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತುಪ್ಪ ನಿಜವಾಗಿಯೂ ಎಲ್ಲರಿಗೂ ಆರೋಗ್ಯಕರವೇ?

Mon Feb 7 , 2022
ತುಪ್ಪವು ಅದರ ಹಲವಾರು ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಕೂದಲಿನ ಆರೋಗ್ಯದಿಂದ ಹಿಡಿದು ಮೆದುಳಿನ ಕಾರ್ಯನಿರ್ವಹಣೆಯವರೆಗೆ, ತುಪ್ಪವು ಎಲ್ಲವನ್ನೂ ಮಾಡಬಲ್ಲ ಘಟಕಾಂಶದ ಖ್ಯಾತಿಯನ್ನು ಹೊಂದಿದೆ. ಬಹುಶಃ ಅದಕ್ಕಾಗಿಯೇ ನಮ್ಮ ಅಜ್ಜಿಯರು ತುಪ್ಪದ ರೊಟ್ಟಿ ಮತ್ತು ಲಡ್ಡೂಗಳನ್ನು ನಮಗೆ ತುಂಬುತ್ತಿದ್ದರು. ಆದರೆ, ನೀವು ಎಂದಿಗೂ ಈ ಜನಸಂದಣಿಯನ್ನು ಹೆಚ್ಚು ಇಷ್ಟಪಡದಿದ್ದರೆ, ಅದು ಸಂಪೂರ್ಣವಾಗಿ ಉತ್ತಮವಾಗಿದೆ. ಆಯುರ್ವೇದದ ಪ್ರಕಾರ ತುಪ್ಪವು ಆರೋಗ್ಯಕರ ದೈನಂದಿನ ಆಹಾರಗಳಲ್ಲಿ ಒಂದಾಗಿದೆ. ಆದರೆ ಜನಪ್ರಿಯ ನಂಬಿಕೆಗೆ ವಿರುದ್ಧವಾಗಿ, ಇದು ಎಲ್ಲರಿಗೂ ಅಲ್ಲ. […]

Advertisement

Wordpress Social Share Plugin powered by Ultimatelysocial