ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ : ಶೀಘ್ರವೇ ಬ್ಯಾಂಕುಗಳಲ್ಲಿ 41,177 ಹುದ್ದೆಗಳ ನೇಮಕಾತಿ

ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿಯೊಂದು ಸಿಕ್ಕಿದ್ದು, ದೇಶದ 12 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸುಮಾರು 41,177 ಹುದ್ದೆಗಳು ಖಾಲಿ ಇದ್ದು, ಈ ವರ್ಷವೇ ಈ ಹುದ್ದೆಗಳ ನೇಮಕ ನಡೆಯಲಿದೆ.

ಬ್ಯಾಂಕುಗಳಲ್ಲಿ ಖಾಲಿ ಇರುವ 41,177 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (IBPS) ನಾನಾ ನೇಮಕಾತಿ ಪರೀಕ್ಷೆಗಳ ಸಂಭವನೀಯ ವೇಳಾಪಟ್ಟಿ ಪ್ರಕಟಿಸಿದೆ.

ಐಬಿಪಿಎಸ್ 12 ರಾಷ್ಟ್ರೀಕೃತ ಬ್ಯಾಂಕುಗಳ ಪೈಕಿ 11 ಬ್ಯಾಂಕ್ ಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ.

ಐಬಿಪಿಎಸ್ ದೇಶದ ವಿವಿಧ ಬ್ಯಾಂಕುಗಳಲ್ಲಿನ ಪ್ರೊಬೆಷನರಿ ಆಫೀಸರ್\ಮ್ಯಾನೇಜ್ ಮೆಂಟ್ ಟ್ರೇನಿ, ಕ್ಲರಿಕಲ್ ಕೇಡರ್ ನ ಹುದ್ದೆಗಳು ಹಾಗೂ ಸ್ಪೆಷಲಿಸ್ಟ್ ಆಫೀಸರ್ ನೇಮಕಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಿದೆ. ಅಲ್ಲದೇ ದೇಶದ ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿ ಇರುವ ಆಫೀಸರ್ ಹಾಗೂ ಆಫೀಸರ್ ಅಸಿಸ್ಟೆಂಟ್ಸ್ ನೇಮಕಕ್ಕೂ ಪರೀಕ್ಷೆ ನಡೆಸಲಾಗುವುದು ಎಂದು ಐಬಿಪಿಎಸ್ ತಿಳಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪತಿ ಶೋಯೆಬ್ ಮಲಿಕ್ ಇನ್ನೂ ಕೆಲವು ವರ್ಷಗಳ ಕಾಲ ಆಡಲು ಸಾನಿಯಾ ಮಿರ್ಜಾ ಬೆಂಬಲ ವ್ಯಕ್ತಪಡಿಸಿದ್ದಾರೆ, ಅವರ ಆರೋಗ್ಯಕರ ಜೀವನಶೈಲಿಗೆ ಮೆಚ್ಚುಗೆ

Wed Feb 9 , 2022
  ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ತಮ್ಮ ಪತಿ ಶೋಯೆಬ್ ಮಲಿಕ್ ಅವರು ಸೂಪರ್ ಫಿಟ್ ದೇಹದಿಂದ ಆಶೀರ್ವದಿಸಿದ್ದಾರೆ ಮತ್ತು ಅವರು ಹೆಚ್ಚು ವರ್ಷಗಳ ಕಾಲ ಆಡುವ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಿದ್ದಾರೆ. ಮಲಿಕ್ ಇತ್ತೀಚಿಗೆ 40 ವರ್ಷಕ್ಕೆ ಕಾಲಿಟ್ಟಿದ್ದಾರೆ ಮತ್ತು ಅವರಲ್ಲಿ ಇನ್ನೂ ಕ್ರಿಕೆಟ್ ಆಡಲು ಏನಿದೆ ಎಂದು ತೋರುತ್ತದೆ ಮತ್ತು ಕ್ರೀಡೆಯಿಂದ ನಿವೃತ್ತಿಯಾಗುವ ಯಾವುದೇ ಯೋಜನೆಯನ್ನು ಹೊಂದಿಲ್ಲ. ಇತ್ತೀಚಿನ ಸಂದರ್ಶನದಲ್ಲಿ, ಸಾನಿಯಾ ತನ್ನ ಪತಿಯನ್ನು ಆರೋಗ್ಯಕರ […]

Advertisement

Wordpress Social Share Plugin powered by Ultimatelysocial