ತಾರಕಕ್ಕೇರಿದ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ; ಸಾಮರಸ್ಯಕ್ಕಾಗಿ ದೇವರ ಮೊರೆ ಹೋದ ಭಕ್ತ

ಬೆಂಗಳೂರು: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ಸಂಘರ್ಷ ತಾರಕಕ್ಕೇರಿದ್ದು, ಇದೀಗ ವಿವಾದ ಹೈಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ. ಈ ನಡುವೆ ಭಕ್ತನೋರ್ವ, ಜನರಲ್ಲಿ ಸಾಮರಸ್ಯ ಮೂಡಲಿ ಎಂದು ಪ್ರಾರ್ಥಿಸಿ ದೇವರ ಮೊರೆ ಹೋದ ಘಟನೆ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.ಇಲ್ಲಿನ ಚಿಮ್ಮನಹಳ್ಳಿ ದುರ್ಗಾಂಬಿಕಾ ರಥೋತ್ಸವ ನಡೆಯುತ್ತಿದ್ದು, ಯುವಕನೊಬ್ಬ ಬಾಳೆಹಣ್ಣಿನ ಮೇಲೆ ಜಾತೀಯತೆ ಅಳಿಯಲಿ, ಸಮಾನತೆ ಬೆಳೆಯಲಿ ಎಂದು ಬರೆದು ಬಾಳೆಹಣ್ಣನ್ನು ರಥಕ್ಕೆ ಎಸೆದಿದ್ದಾನೆ.ಸಾಮರಸ್ಯದ ಸಂದೇಶ ಸಾರುವ ಬಾಳೆಹಣ್ಣನ್ನು ರಥಕ್ಕೆ ಸಮರ್ಪಿಸಿ, ರಾಜ್ಯದಲ್ಲಿ ಎದ್ದಿರುವ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಅಂತ್ಯಗೊಂಡು ಶಾಂತಿ, ಸೌಹಾರ್ದತೆ ನೆಲೆಸಲಿ ಎಂದು ಪ್ರಾರ್ಥಿಸಿದ್ದಾನೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ಸೋಂಕಿಗೊಳಗಾದಾಗ ದೇಹದಲ್ಲಾಗುವ ಬದಲಾವಣೆಗಳೇನು.? ಇಲ್ಲಿದೆ ತಜ್ಞರು ನೀಡಿರುವ ಸಂಕ್ಷಿಪ್ತ ಮಾಹಿತಿ

Thu Feb 10 , 2022
ಕಳೆದ ಎರಡೂವರೆ ವರ್ಷಗಳಿಂದ ಜಗತ್ತು ಕೊರೋನಾ ವೈರಸ್‌ನ ಸಾಂಕ್ರಾಮಿಕದಿಂದ ರೋಸಿ ಹೋಗಿದೆ. ಚೀನಾದ ವುಹಾನ್ ನಗರದಲ್ಲಿ ಕೋವಿಡ್‌-19ನ ಮೊದಲ ಪ್ರಕರಣ ಪತ್ತೆಯಾಗಿಂದಲೂ ಈ ವೈರಸ್‌ನ ನಡವಳಿಕೆಯನ್ನು ಅರ್ಥ ಮಾಡಿಕೊಳ್ಳಲು ಹಲವಾರು ರೀತಿಯ ಸಂಶೋಧನೆಗಳನ್ನು ಮಾಡಲಾಗಿದೆ.ಕೋವಿಡ್ ಸೋಂಕು ತೀವ್ರವಾದ ಉಸಿರಾಟದ ಕಾಯಿಲೆಯಾಗಿದ್ದು ಅದು ಶ್ವಾಸಕೋಶವನ್ನು ಹಾನಿಗೊಳಿಸುತ್ತದೆ ಎಂದು ಅನೇಕ ತಜ್ಞರು ಹೇಳಿದ್ದಾರೆ. ಆದರೆ, ಈ ವೈರಸ್ ಮಾನವ ದೇಹಕ್ಕೆ ಪ್ರವೇಶಿಸಿದಾಗ ನಿಖರವಾಗಿ ಏನಾಗುತ್ತದೆ ? ಇತ್ತೀಚಿನ ಅಧ್ಯಯನದಲ್ಲಿ, ಸೋಂಕುಪೀಡಿತ ರೋಗಿಯ ದೇಹದಲ್ಲಿ […]

Advertisement

Wordpress Social Share Plugin powered by Ultimatelysocial