ಈ 10 ದುರ್ಬಲ ಪಾಸ್ ವರ್ಡ್ ʼHackerʼಗಳ ಫೆವರೇಟ್..‌ ಥಟ್‌ ಅಂತಾ ಹ್ಯಾಕ್‌ ಮಾಡ್ತಾರೆ.. ಫಟಾ ಫಟ್ ಅಂತಾ ಹಣ ಎಗರಿಸಿಬಿಡ್ತಾರೆ ಹುಷಾರು.!!

ನಾರ್ಡ್ ಪಾಸ್(NordPass) ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ಹ್ಯಾಕರ್(Hacker )ಗಳು ಮತ್ತು ಸೈಬರ್ ಅಪರಾಧಿಗಳು ಕೆಲವೇ ನಿಮಿಷಗಳಲ್ಲಿ ಹ್ಯಾಕ್ ಮಾಡಬಹುದಾದ ಪಾಸ್ ವರ್ಡ್ʼಗಳು ಸೇರಿವೆ. ವಿಶ್ವದ 10 ದುರ್ಬಲ ಪಾಸ್ ವರ್ಡ್(Password)ಗಳ ಪಟ್ಟಿಯನ್ನ ಬಿಡುಗಡೆ ಮಾಡಲಾಗಿದೆ.

ಇದರಲ್ಲಿ ಅತ್ಯಂತ ದುರ್ಬಲ ಪಾಸ್ ವರ್ಡ್(Weak password) ಅಂದ್ರೆ 123456 ಆಗಿದೆ.

ಭಾರತದಲ್ಲಿ ಬಳಸಲಾಗುವ ಅತ್ಯಂತ ದುರ್ಬಲ ಪಾಸ್ ವರ್ಡ್ ಗಳು ಯಾವುವು ಎಂದು ಅನ್ನೋದನ್ನ ಕಂಡು ಹಿಡಿಯಲು ನಾರ್ಡ್‌ ಪಾಸ್‌ ಪ್ರಯತ್ನಿಸಿದ್ದು, ಭಾರತದ ಹೆಚ್ಚಿನ ಜನರು ಪಾಸ್ ವರ್ಡ್ʼಗಳಾಗಿ ಬಳಸುವ ಕೆಲವು ಹೆಸರುಗಳಪಾಸ್ ವರ್ಡ್ʼಗಳನ್ನು ಹ್ಯಾಕರ್ʼಗಳು ಚಿಟಿಕೆಯಲ್ಲಿ ಹ್ಯಾಕ್ ಮಾಡಿ ಬಿಡ್ತಾರೆ. ನೀವು ಕೂಡ ಈ ಪಾಸ್‌ವರ್ಡ್‌ ಇಟ್ಟಿದ್ರೆ ಜಾಗರೂಕರಾಗಿರಿ.

ನಾರ್ಡ್ ಪಾಸ್ ಪಟ್ಟಿ ಬಿಡುಗಡೆ..!
ನಾರ್ಡ್ ಪಾಸ್ʼನ ವೆಬ್ ಸೈಟ್ʼನಲ್ಲಿ ವಾರದ ಪಾಸ್ ವರ್ಡ್ʼಗಳ ವಿವರಗಳನ್ನ ಸಹ ಪ್ರತಿ ದೇಶವನ್ನ ಅವಲಂಬಿಸಿ ಪ್ರತ್ಯೇಕವಾಗಿ ವೀಕ್ಷಿಸಬಹುದು. ಈ ಕಂಪನಿಯು 50 ದೇಶಗಳ ದತ್ತಾಂಶದ ಆಧಾರದ ಮೇಲೆ ತನ್ನ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದ್ರಂತೆ, ಭಾರತದ ಅತಿ ಹೆಚ್ಚು ಪಾಸ್ ವರ್ಡ್ʼಗಳ ಪಟ್ಟಿ ತುಂಬಾ ಆಶ್ಚರ್ಯಕರವಾಗಿತ್ತು. ಈ ಪಟ್ಟಿಯಲ್ಲಿ ನೀವು ಎಚ್ಚರಿಸುವ ಕೆಲವು ಪಾಸ್ ವರ್ಡ್ʼಗಳು ಸೇರಿವೆ.

2. Lovely ಮತ್ತು Sweety
ವಾರದ ಪಾಸ್ ವರ್ಡ್ʼಗಳ ಈ ಪಟ್ಟಿಯಲ್ಲಿ ಲವ್ಲಿ ಮತ್ತು ಸ್ವೀಟಿಯಂತಹ ಹೆಸರುಗಳು ಸೇರಿವೆ. ವೆಬ್ ಸೈಟ್ʼನಲ್ಲಿ ಲಭ್ಯವಿರುವ ದತ್ತಾಂಶದ ಪ್ರಕಾರ, ಈ ಪಾಸ್ ವರ್ಡ್ʼಗಳನ್ನು ಹ್ಯಾಕ್ ಮಾಡಲು ಹ್ಯಾಕರ್ʼಗಳಿಗೆ ಕೇವಲ ಒಂದು ಸೆಕೆಂಡು ಮಾತ್ರ ಹಿಡಿಯಿತು.

3. ರಾಹುಲ್ ಮತ್ತು ಸುರೇಶ್
‘ರಾಹುಲ್ – ಹೆಸರು ಕೇಳಿರಬಹುದು’ ಈ ಸಂಭಾಷಣೆ ಭಾರತದಲ್ಲಿ ಪ್ರಸಿದ್ಧವಾಗಿದೆ. 8,000 ಕ್ಕೂ ಹೆಚ್ಚು ಜನರು ಈ ಹೆಸರನ್ನು ಪಾಸ್ ವರ್ಡ್ ಮಾಡಿದ್ದಾರೆ. ಈ ಪಾಸ್ ವರ್ಡ್ʼನ್ನ ಹ್ಯಾಕ್ ಮಾಡಲು ಹ್ಯಾಕರ್ʼಗಳಿಗೆ ಕೇವಲ 17 ಸೆಕೆಂಡುಗಳಿಗಿಂತ ಕಡಿಮೆ ಸಮಯ ಹಿಡಿಯಿತು. ಸುರೇಶ್ ಅವರ ಹೆಸರೂ ಈ ಪಟ್ಟಿಯಲ್ಲಿ ಸೇರಿದೆ. ರಾಹುಲ್ʼಗೆ ಹೋಲಿಸಿದರೆ ಇದು ಕಷ್ಟ, ಆದ್ರೆ, 2 ನಿಮಿಷಗಳಲ್ಲಿ ಅದನ್ನು ಹ್ಯಾಕ್ ಮಾಡಲಾಯಿತು.

4. ರಾಜೇಶ್ ಮತ್ತು ದೀಪಕ್
ಈ ಪಟ್ಟಿಯಲ್ಲಿ ಸೇರಿರುವ ಮುಂದಿನ ಎರಡು ಹೆಸರುಗಳು ರಾಜೇಶ್ ಮತ್ತು ದೀಪಕ್. ಸಂಶೋಧನೆಯಲ್ಲಿ ಭಾಗಿಯಾಗಿದ್ದ 22,000ಕ್ಕೂ ಹೆಚ್ಚು ಜನರ ಪಾಸ್ ವರ್ಡ್ʼಗಳೆಂದರೆ ರಾಜೇಶ್ ಮತ್ತು ದೀಪಕ್. ಅವುಗಳನ್ನ ಹ್ಯಾಕ್ ಮಾಡಲು ಕೇವಲ 2 ನಿಮಿಷಗಳು ಬೇಕಾಯಿತು.

5. ಪ್ರಿಯಾಂಕಾ ಮತ್ತು ಅಭಿಷೇಕ್
ಈ ಎರಡು ಹೆಸರುಗಳನ್ನ ಇಲ್ಲಿ ತೆಗೆದುಕೊಳ್ಳುವುದು ಸಹ ಅಗತ್ಯವಾಗಿದೆ. ಏಕೆಂದರೆ ಇವು ಹೆಸರಿನ ಆಧಾರದ ಮೇಲೆ ಪಾಸ್ ವರ್ಡ್ʼಗಳಾಗಿವೆ. ಆದ್ರೆ, ಅವುಗಳನ್ನು ಹ್ಯಾಕ್ ಮಾಡಲು 3 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಲಾಗಿದೆ.

6. ಕೃಷ್ಣ ಮತ್ತು ಸೈರಾಮ್
ದೇವರ ಹೆಸರಿನ ಆಧಾರದ ಮೇಲೆ ಈ ಪಾಸ್ ವರ್ಡ್ʼಗಳು ಸಾಕಷ್ಟು ದುರ್ಬಲವೆಂದು ಸಾಬೀತಾಯಿತು. ಕೃಷ್ಣ ಪಾಸ್ ವರ್ಡ್ ಹ್ಯಾಕ್ ಮಾಡಲು 1 ಸೆಕೆಂಡಿಗಿಂತ ಕಡಿಮೆ ಸಮಯ ತೆಗೆದುಕೊಂಡ್ರೂ, ಸೈರಾಮ್ ಪಾಸ್ ವರ್ಡ್ 2 ನಿಮಿಷಗಳಲ್ಲಿ ಹ್ಯಾಕ್ ಮಾಡಲಾಗಿದೆ.

7. ಅಂತಹ ಹ್ಯಾಕರ್ʼಗಳ ಗುರಿಗಳನ್ನ ತಪ್ಪಿಸಿ
ನಿಮ್ಮ ಪಾಸ್ ವರ್ಡ್ ರಚಿಸುವಾಗ ಕ್ಯಾಪಿಟಲ್ ಮತ್ತು ಸಣ್ಣ ಅಕ್ಷರಗಳೊಂದಿಗೆ ಸಂಖ್ಯೆಗಳು ಮತ್ತು ವಿಶೇಷ ಕೇಸ್ʼಗಳನ್ನು (ಉದಾ:-@#_&*~ ಇತ್ಯಾದಿ) ಬಳಸಿ. ಇದು ಸುಲಭವಾಗಿ ಹ್ಯಾಕ್ ಮಾಡದ ಬಲವಾದ ಪಾಸ್ ವರ್ಡ್ ರಚಿಸುತ್ತದೆ.

Please follow and like us:

Leave a Reply

Your email address will not be published. Required fields are marked *

Next Post

ಪಂಜ್​ಶೀರ್ ಪ್ರಾಂತ್ಯದಲ್ಲಿರುವ ಪರಂಡೆಹ್ ಕಣಿವೆಯನ್ನು ತಾಲಿಬಾನಿ ಪಡೆಗಳು ಸುತ್ತುವರೆದಿದ್ದು,

Wed Feb 9 , 2022
ಪಂಜ್​ಶೀರ್ ಪ್ರಾಂತ್ಯದಲ್ಲಿರುವ ಪರಂಡೆಹ್ ಕಣಿವೆಯನ್ನು ತಾಲಿಬಾನಿ ಪಡೆಗಳು ಸುತ್ತುವರೆದಿದ್ದು, ಕೆಲವು ಸ್ಥಳೀಯ ನಿವಾಸಿಗಳನ್ನು ಬಂಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.ಪಂಜ್​ಶೀರ್(ಅಫ್ಘಾನಿಸ್ತಾನ):ಅಧಿಕಾರಕ್ಕೆ ಬಂದ ನಂತರ ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ಪಡೆಗಳಿಗೆ ಸೆಡ್ಡು ಹೊಡೆದು ನಿಂತಿದ್ದ ಪಂಜ್​ಶೀರ್ ಪ್ರಾಂತ್ಯದಲ್ಲಿರುವ ಪರಂಡೆಹ್ ಕಣಿವೆಯನ್ನು ತಾಲಿಬಾನಿ ಪಡೆಗಳು ಸುತ್ತುವರೆದಿದ್ದು, ಕೆಲವು ಸ್ಥಳೀಯ ನಿವಾಸಿಗಳನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.ಮೂಲಗಳ ಪ್ರಕಾರ, ಪ್ರಾಂತ್ಯದಲ್ಲಿ ಫೆಬ್ರವರಿ 7ರಿಂದ ಈ ಪ್ರದೇಶದಲ್ಲಿ ಸ್ಥಳೀಯರು ಮತ್ತು ತಾಲಿಬಾನ್ ನಡುವೆ ಘರ್ಷಣೆ ನಡೆಯುತ್ತಿದೆ. ತಾಲಿಬಾನಿಗಳ […]

Advertisement

Wordpress Social Share Plugin powered by Ultimatelysocial