ಗುಂಗಿನ ನಶೆಯಲ್ಲಿ ತೇಲುತ್ತಿರುವ..ತೂರಾಡುತ್ತಿರುವ ವಿದ್ಯಾರ್ಥಿಗಳು…

ಗುಂಗಿನ ನಶೆಯಲ್ಲಿ ತೇಲುತ್ತಿರುವ..ತೂರಾಡುತ್ತಿರುವ ವಿದ್ಯಾರ್ಥಿಗಳು…ಅದನ್ನು ವಿಡಿಯೋ ಮಾಡಿಕೊಳ್ತಿರೋ ಸಹಪಾಠಿಗಳು ಶಿವಮೊಗ್ಗದ ಪ್ರತಿಷ್ಠಿತ ಕಾಲೇಜು ಕ್ಯಾಂಪಸ್ ನಲ್ಲಿ ಗುಂಗಿನ ರಂಗಿನಾಟ..ಪೋಷಕರೇ ಎಚ್ಚರ
ಶಿವಮೊಗ್ಗದ ಪ್ರತಿಷ್ಠಿತ ಕಾಲೇಜಿನ ಕ್ಯಾಂಪಸ್ ನಲ್ಲಿ ಕಾಲೇಜಿವ ವಿದ್ಯಾರ್ಥಿಗಳು ಹಾಡಹಗಲೇ ಡ್ರಗ್ಸ್ ಸೇವಿಸಿ, ಗುಂಗಿನ ನಶೆಯಲ್ಲಿ ಒದ್ದಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೌದು ಮೂವರು ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್ ಸೇವಿಸಿ ಗಾಳಿಯಲ್ಲಿ ತೂರಾಡುತ್ತಿರುವಂತೆ..ಕಾಲನ್ನು ಮುಂದೆಯೂ ಹಾಕಲಾರದೆ..ಹಿಂದೆಯೂ ಹಾಕಲಾರದೆ…ನಶೆಯಲ್ಲಿ ಒದ್ದಾಡುತ್ತಿರುವ ಪರಿ ನೋಡಿದ್ರೆ..ಎಂತಹ ಪೋಷಕರು ತಮ್ಮ ಮಕ್ಕಳ ಬಗ್ಗೆ ಆತಂಕ ಪಡುತ್ತಾರೆ…ಈ ವಿದ್ಯಾರ್ಥಿಗಳು ಹಾಡಹಗಲೇ…ತರಗತಿಗಳು ನಡೆಯುತ್ತಿರುವ ಸಂದರ್ಭದಲ್ಲಿ ಡ್ರಗ್ಸ್ ಸೇವಿಸಿ, ಕ್ಯಾಂಪಸ್ ನಲ್ಲಿ ಎಲ್ಲಂದರಲ್ಲಿ ವಾಲಾಡುತ್ತಾ ಬಿದ್ದಿದ್ದಾರೆ. ಇದನ್ನು ಸಹಪಾಠಿ ವಿದ್ಯಾರ್ಥಿಗಳು ವಿಡಿಯೋ ಮಾಡಿಕೊಂಡಿದ್ದಾರೆ. ದೃಷ್ಯ ನೋಡಿದರೆ ಅದು ಸಾಗರ ರಸ್ತೆಯನ್ನು ಬೊಟ್ಟು ಮಾಡು ತೋರಿಸುತ್ತದೆ.
ಶನಿವಾರ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಕಾಲೇಜು ಸಂಸ್ಥೆಯ ಹೆಸರಿನ ಟ್ಯಾಗ್ ಲೈನ್ ನಲ್ಲಿ ವೈರಲ್ ಆಗಿದೆ ಆದರೆ ವಿದ್ಯಾರ್ಥಿಗಳ ಪರದಾಟವನ್ನು ನೋಡಿದಾಗ ಮನಸ್ಸು ಭಾರವಾಗುತ್ತದೆ. ಇವರೆಲ್ಲಾ ಮೊದಲ ಬಾರಿಗೆ ಡ್ರಗ್ಸ್ ಸೇವಿಸಿದಂತೆ ಭಾಸವಾಗುತ್ತೆ. ಯಾರೋ ಸ್ನೇಹಿತರ ಜೊತೆ ಸೇರಿ ಇವರು ಗಾಂಜಾ ಇಲ್ಲವೇ..ಡ್ರಗ್ಸ್ ಸೇವಿಸಿದಂತಿದೆ. ವೃತ್ತಿಪರ ವ್ಯಸವಿಗಳಾದ್ರೆ..ಡ್ರಗ್ಸ್ ಸೇವಿಸಲು ನಿರ್ಜನ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳುವುದು ಸಹಜ. ಆದರೆ ಈ ವಿದ್ಯಾರ್ಥಿಗಳು..ತರಗತಿಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ ಡ್ರಗ್ಸ್ ಸೇವಿಸಿದ್ದರ..ಹಿಂದೆ…ವ್ಯವಸ್ಥಿತ ನೆಟ್ ವರ್ಕ್ ಕೆಲಸ ಮಾಡಿದಂತೆ ಕಾಣುತ್ತದೆ. ಘಟನೆ ಎಲ್ಲೇ ನಡೆದಿರಲಿ..ಪೊಲೀಸರು ದಿಟ್ಟ ಕ್ರಮ ಕೈಗೊಂಡು ಶಾಲಾ ಕಾಲೇಜು ಕ್ಯಾಂಪಸ್ ಹಾಗು ಹಾಸ್ಟೆಲ್ ಗಳ ಮೇಲೆ ಹದ್ದಿನ ಕಣ್ಣಿಡಬೇಕಿದೆ. .

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿ‌ನಲ್ಲಿ ಶಂಕಿತ ಉಗ್ರ‌ನ ವಶಕ್ಕೆ ಪಡೆದ ಸಿಸಿಬಿ ಪೊಲೀಸರು!

Mon Jul 25 , 2022
ಅಸ್ಸಾಂ ಮೂಲದ ಅಖ್ತರ್ ಹುಸೇನ್ ಲಷ್ಕರ್ ಶಂಕಿತ ಉಗ್ರ ಕಳೆದ ರಾತ್ರಿ 8 ಗಂಟೆ ಸುಮಾರಿಗೆ ಶಂಕಿತ ಉಗ್ರ ವಾಸವಿದ್ದ ಮನೆ ಮೇಲೆ ದಾಳಿ ತಿಲಕ್ ನಗರದ ಬಿಟಿಪಿ ಏರಿಯಾದ ಕಟ್ಟಡದ ಮೂರನೇ ಮಹಡಿ ಕೋಣೆಯಲ್ಲಿ ವಾಸ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದ ಕೆಲ ಯುವಕರೊಂದಿಗೆ ವಾಸ್ತವ್ಯ ಖಚಿತ ಮಾಹಿತಿ ಮೇರೆಗೆ 30 ಕ್ಕೂ ಹೆಚ್ಚು ಸಿಸಿಬಿ ಪೊಲೀಸರಿಂದ ದಾಳಿ ಕಾರ್ಯಚರಣೆ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ […]

Advertisement

Wordpress Social Share Plugin powered by Ultimatelysocial