ಕನ್ನಡತಿ ನಟಿಯ ಸೂಪರ್ ಲುಕ್!

ಕನ್ನಡ ಕಿರುತೆರೆ ನಟಿ ಸಾರಾ ಅಣ್ಣಯ್ಯ ಅವರು ಮಹಾಶಿವರಾತ್ರಿ ದಿನ ಸುಂದರವಾದ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಇದರಲ್ಲಿ ನಟಿ ಕ್ಯೂಟ್ ಕಾಣಿಸಿದ್ದಾರೆ.

ಹಸಿರು ಲಂಗ ಹಾಗೂ ಹಳದಿ ಬಣ್ಣದ ಬ್ಲೌಸ್ ಹಾಗೂ ದಾವಣಿ ಧರಿಸಿದ್ದರು ಸಾರಾ. ಇದಕ್ಕೆ ಗ್ರ್ಯಾಂಡ್ ಆಗಿರುವ ಇಯರಿಂಗ್ಸ್ ಹಾಗೂ ನೆಕ್ಲೆಸ್ ಧರಿಸಿದ್ದರು.

ನಟಿ ಸುಂದರವಾದ ಬಿಂದಿ ಇಟ್ಟುಕೊಂಡು ಅಪ್ಪಟ ಹಳ್ಳಿಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಸುಂದರವಾದ ಸ್ಮೈಲ್ ಫೋಟೋದಲ್ಲಿ ಹೈಲೈಟ್ ಆಗಿದೆ.

ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. ಸರ್ವಶಕ್ತ ಪರಮೇಶ್ವರನು ಈ ಶುಭ ದಿನದಂದು ಎಲ್ಲರ ಬಾಳಲ್ಲೂ ಸುಖ – ಶಾಂತಿ – ಸಮೃದ್ಧಿಯನ್ನು ಹೊತ್ತು ತರಲಿ, ಶಿವನ ಕೃಪೆ ನಿಮ್ಮ ಮೇಲೆ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ನಟಿ ಫೋಟೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.

ಗೌರಿ ದರ್ಶನ ಸಾಕಾ ಶಿವಪ್ರತ್ಯಕ್ಷ ಯಾವಾಗ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ನಟಿ ಕನ್ನಡತಿ ಸೀರಿಯಲ್ ಮೂಲಕ ಜನರ ಮೆಚ್ಚುಗೆ ಗಳಿಸಿದ್ದಾರೆ.

ಸಾರಾ ಅಣ್ಣಯ್ಯ ಮೂಲತಃ ಮಡಿಕೇರಿಯವರಾಗಿದ್ದು ತಮಿಳಿನಲ್ಲಿ ವೆಬ್ ಸಿರೀಸ್​ಗಳಲ್ಲಿ ನಟಿಸುತ್ತಿದ್ದರು. ಅವರು ಮಾಡೆಲಿಂಗ್ ಮೂಲಕವೂ ಫೇಮಸ್ ಆಗಿದ್ದಾರೆ.

ಸಾರಾ ಅಣ್ಣಯ್ಯ ಅವರು ಈಗ ಕನ್ನಡ ಕಿರುತೆರೆಯಲ್ಲಿ ಉತ್ತಮ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಸೀರಿಯಲ್​ನಲ್ಲಿ ಉತ್ತಮ ಅವಕಾಶ ಸಿಗುತ್ತಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೆಹಲಿ ನಿಕ್ಕಿ ಯಾದವ್ ಸಾವಿನ ಪ್ರಕರಣದಲ್ಲಿ ಬಗೆದಷ್ಟು ವಿಚಾರಗಳು ಹೊರಬರುತ್ತಿವೆ.

Sat Feb 18 , 2023
ಹೊಸದಿಲ್ಲಿ ಫೆಬ್ರವರಿ 18: ದೆಹಲಿ ನಿಕ್ಕಿ ಯಾದವ್ ಸಾವಿನ ಪ್ರಕರಣದಲ್ಲಿ ಬಗೆದಷ್ಟು ವಿಚಾರಗಳು ಹೊರಬರುತ್ತಿವೆ. ಮದುವೆ ದಿನ ಲಿವ್ ಇನ್ ಸಂಗಾತಿ ನಿಕ್ಕಿಯನ್ನು ಸಾಹಿಲ್ ಎಂಬಾತ ಹತ್ಯೆ ಮಾಡಿ ತನ್ನ ಕುಟುಂಬ ಒಡೆತನದ ರೆಸ್ಟೊರೆಂಟ್‌ನ ಫ್ರಿಡ್ಜ್‌ನಲ್ಲಿ ಯುವತಿಯ ಶವವನ್ನು ಇರಿಸಿದ್ದನು. ಈ ಹತ್ಯೆಯಲ್ಲಿ ಸಾಹಿಲ್‌ಗೆ ತಂದೆ ಸಾಥ್ ನೀಡಿದ್ದಾರೆನ್ನುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ತನ್ನ ಮಗನಿಗೆ ಕೊಲೆ ಯೋಜನೆಗೆ ಸಹಾಯ ಮಾಡಿದ್ದಕ್ಕಾಗಿ ಸಾಹಿಲ್ ತಂದೆಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. […]

Advertisement

Wordpress Social Share Plugin powered by Ultimatelysocial