ರಾತ್ರಿ ಹೊತ್ತು ಅಪ್ಪಿ ತಪ್ಪಿಯೂ ಈ ಆಹಾರ ಸೇವಿಸಬೇಡಿ..!

ಸರಿಯಾದ ಆಹಾರ ಸೇವಿಸುವುದರಿಂದ ನಮ್ಮ ಆರೋಗ್ಯವು ಚೆನ್ನಾಗಿರುತ್ತದೆ.

ಕೆಲವೊಮ್ಮೆ ನಮಗೆ ಗೊತ್ತಿಲ್ಲದೇ ಒಂದಷ್ಟು ಆಹಾರಗಳನ್ನು ಸೇವಿಸಿ ಬೇಡದ ತೊಂದರೆಗಳನ್ನು ತಂದುಕೊಳ್ಳುತ್ತೇವೆ. ನಿರ್ಧಿಷ್ಟವಾಗಿ ಕೆಲವೊಂದು ಆಹಾರವನ್ನು ರಾತ್ರಿ ಸಮಯದಲ್ಲಿ ತೆಗೆದುಕೊಳ್ಳಲೇಬಾರದಂತೆ. ಆ ಆಹಾರಗಳು ಯಾವುದೆಂಬುದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

-ಜಾಸ್ತಿ ನೀರಿನಂಶವಿರುವ ಆಹಾರವನ್ನು ರಾತ್ರಿ ಹೊತ್ತು ತೆಗೆದುಕೊಳ್ಳಬಾರದಂತೆ. ಕಲ್ಲಂಗಡಿ ಹಣ್ಣು, ಸೌತೆಕಾಯಿ ಇವುಗಳನ್ನು ರಾತ್ರಿ ಹೊತ್ತು ಸೇವಿಸಿದರೆ ಮೂತ್ರ ವಿಸರ್ಜನೆಗೆ ಎದ್ದು ಹೋಗಬೇಕಾಗುತ್ತದೆ. ಇದರಿಂದ ನಿದ್ದೆ ಸರಿಯಾಗಿ ಆಗದೇ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯಂತೆ.

-ಇನ್ನು ಮಸಾಲೆಯುಕ್ತ ಆಹಾರ ಪದಾರ್ಥವನ್ನು ರಾತ್ರಿ ಊಟಕ್ಕೆ ಸೇವಿಸಬಾರದಂತೆ. ಇದರಿಂದ ಎದೆಯಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಹಾಗೇ ಈ ಪದಾರ್ಥಗಳು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆಯಂತೆ. ಇದರಿಂದ ನಿದ್ದೆಗೆ ಕೂಡ ಸಮಸ್ಯೆಯಾಗುತ್ತದೆ.

-ಬಾಳೆಹಣ್ಣು ಸೇವಿಸುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ. ಇದರಲ್ಲಿ ಪೋಟ್ಯಾಷಿಯಂ ಹೆಚ್ಚಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತ್ವಚೆಯ ಆರೋಗ್ಯಕ್ಕೂ ಇದು ಒಳ್ಳೆಯದು. ಆದರೆ ರಾತ್ರಿ ಹೊತ್ತು ಇದನ್ನು ಸೇವಿಸಿದರೆ ಗಂಟಲಿನಲ್ಲಿ ಕಫ ಕಟ್ಟಿಕೊಳ್ಳುತ್ತದೆಯಂತೆ ಹಾಗೇ ಅಜೀರ್ಣವಾಗುತ್ತದೆಯಂತೆ.

-ಇನ್ನು ಬಾದಾಮಿ, ಪಿಸ್ತಾ, ವಾಲ್ ನಟ್ಸ್ ಗಳಲ್ಲಿ ಫ್ಯಾಟ್ ಮತ್ತು ಕ್ಯಾಲೋರಿ ಜಾಸ್ತಿ ಇದೆಯಂತೆ. ಇದನ್ನು ರಾತ್ರಿ ಹೊತ್ತು ಸೇವಿಸಿದರೆ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರೋಹಿತ್ ಶರ್ಮಾ ಹೆಚ್ಚು ಹೇಳಬೇಕಾಗಿಲ್ಲ, ಅವರು ಭಾರತವನ್ನು ಮುಂಚೂಣಿಯಿಂದ ಮುನ್ನಡೆಸುತ್ತಿದ್ದಾರೆ: ರಸೆಲ್ ಅರ್ನಾಲ್ಡ್

Fri Feb 25 , 2022
ಶ್ರೀಲಂಕಾದ ಮಾಜಿ ಆಲ್‌ರೌಂಡರ್ ರಸೆಲ್ ಅರ್ನಾಲ್ಡ್ ರೋಹಿತ್ ಶರ್ಮಾ ಅವರನ್ನು ಶ್ಲಾಘಿಸಿದರು, ಇಂಡಾ ನಾಯಕನು ಮುಂಭಾಗದಿಂದ ಮುನ್ನಡೆಸುತ್ತಿದ್ದಾನೆ ಮತ್ತು ಮುಂದಿನ ವರ್ಷದ ಟಿ 20 ವಿಶ್ವಕಪ್‌ನ ಮುನ್ನಡೆಯಲ್ಲಿ ತನ್ನ ಸಹ ಆಟಗಾರರು ಅವರ ದೃಷ್ಟಿಕೋನವನ್ನು ಅನುಸರಿಸುವಂತೆ ಮಾಡಲು ಅವರು ಹೆಚ್ಚು ಹೇಳಬೇಕಾಗಿಲ್ಲ ಎಂದು ಹೇಳಿದರು. ಕಳೆದ ವರ್ಷ T20 ವಿಶ್ವಕಪ್‌ನ ಆರಂಭಿಕ ನಿರ್ಗಮನದ ನಂತರ ಭಾರತಕ್ಕೆ ವಿಭಿನ್ನ ಧ್ವನಿಯ ಅಗತ್ಯವಿತ್ತು ಮತ್ತು ಅದನ್ನು ರೋಹಿತ್‌ನಲ್ಲಿ ಕಂಡುಕೊಂಡಿದ್ದೇವೆ ಎಂದು ಅರ್ನಾಲ್ಡ್ ಹೇಳಿದರು. […]

Advertisement

Wordpress Social Share Plugin powered by Ultimatelysocial