ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯಲ್ಲಿ ಶ್ರೀ ಚಿಕ್ಕದೇವಮ್ಮನವರ ನೂತನ ದೇವಾಲಯದ ಉದ್ಘಾಟನೆ.

ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯಲ್ಲಿ ಶ್ರೀ ಚಿಕ್ಕದೇವಮ್ಮನವರ ನೂತನ ದೇವಾಲಯದ ಉದ್ಘಾಟನೆ ಹಾಗೂ ಶ್ರೀ ಚಿಕ್ಕದೇವಮ್ಮನವರ ಮತ್ತು ಸಪ್ತ ಮಾತೃಕೆಯರ ವಿಗ್ರಹಗಳ ಪ್ರತಿಷ್ಠಾಪನ ಕಾರ್ಯಕ್ರಮವು ಸಡಗರ ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ನೆರವೇರಿತು ಪ್ರತಿಷ್ಠಾಪನಾ
ಮೂರು ದಿನಗಳ ಕಾಲ ಹಲವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆದ ದೇವಾಲಯದ ಉದ್ಘಾಟನಾ ಮಹೋತ್ಸವ
ನೂತನ ವಿಗ್ರಹಗಳನ್ನು ಕಪಿಲಾ ನದಿ ತೀರದಿಂದ ವಿಶೇಷ ಪೂಜೆ ಸಲ್ಲಿಸಿ ದೇವಾಲಯಕ್ಕೆ ತಂದು ಶ್ರೀ ಗಣಪತಿ ಪೂಜೆ ಪುಣ್ಯಾಹ ದಿಂದ ಶಿಲಾನ್ಯಾಸ, ಶಕ್ತಿ ವರ್ಧನ, ದಿವ್ಯಾಂಗ ಹೋಮ , ವಾಸ್ತು ಹೋಮ ಸೇರಿದಂತೆ ಶ್ರೀದೇವಿಗೆ ಎಲ್ಲ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು
ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ನೂತನ ಶ್ರೀ ಚಿಕ್ಕದೇವಮ್ಮ ಹಾಗೂ ಸಪ್ತ ಮಾತೃಕೆಯರ ವಿಗ್ರಹಗಳು ಸೇರಿದಂತೆ ವಿಮಾನ ಗೋಪುರಗಳ ಮೇಲೆ ಕಳಸಗಳನ್ನು ಸಹ ಪ್ರತಿಷ್ಠಾಪಿಸಲಾಯಿತು
ಬಳಿಕ ವಿಶೇಷವಾಗಿ ಅಲಂಕರಿಸಲಾಗಿದ್ದ ಶಕ್ತಿದೇವತೆ ಗಳಿಗೆ ವಿಶೇಷ ಪೂಜೆ ಹಾಗೂ ಮಹಾ ಮಂಗಳಾರತಿ ನಡೆಯಿತು
ಇದೇ ಸಂದರ್ಭ ಅಲಂಕೃತ ಶ್ರೀ ಚಿಕ್ಕದೇವಮ್ಮನವರ ಉತ್ಸವ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಲವು ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು
ಹುಲ್ಲಹಳ್ಳಿ ಪಟ್ಟಣವು ಸೇರಿದಂತೆ ಗ್ರಾಮಗಳ ಸಾವಿರಾರು ಭಕ್ತರು ಈ ಎಲ್ಲಾ ದೇವತಾ ಕಾರ್ಯಗಳಲ್ಲಿ ಭಾಗವಹಿಸಿ ತಮ್ಮ ಭಕ್ತಿ ಭಾವ ಮೆರೆದರು
ಬಂದ ಎಲ್ಲಾ ಭಕ್ತರಿಗೆ ಜೆಡಿಎಸ್ ಮುಖಂಡ ಮಾದೇಶ್ ಅವರಿಂದ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು
ಕಾರ್ಯಕ್ರಮದಲ್ಲಿ ಶಾಸಕ ಹರ್ಷವರ್ಧನ್ ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಮಾಜಿ ಸಂಸದ ಧ್ರುವನಾರಾಯಣ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಕಾಂಗ್ರೆಸ್ ಮುಖಂಡರಾದ ಗುಂಡ್ಲುಪೇಟೆ ಗಣೇಶ್ ಪ್ರಸಾದ್ ರಾಜ್ಯ ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಬಸವರಾಜ್ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಿಕ್ಕರಂಗನಾಯಕ ಬಿಜೆಪಿ ತಾಲೂಕ ಅಧ್ಯಕ್ಷ ಮಹೇಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು
ಬಂದ ಎಲ್ಲಾ ಗಣ್ಯರಿಗೆ ಗ್ರಾಮಸ್ಥರಿಂದ ಮಾಲಾರ್ಪಣೆ ಮಾಡಿ ಗೌರವಿಸಲಾಯಿತು
ಗ್ರಾಮದ ಯಜಮಾನರುಗಳು ವಿವಿಧ ಪಕ್ಷಗಳ ಮುಖಂಡರುಗಳ ನೇತೃತ್ವದಲ್ಲಿ ದೇವಾಲಯದ ಉದ್ಘಾಟನಾ ಕಾರ್ಯಕ್ರಮವು ಸಾಂಗವಾಗಿ ನೆರವೇರಿತು
ಪೂಜಾ ಕೈಂಕರ್ಯಗಳ ನೇತೃತ್ವ ವಹಿಸಿದ್ದ ವಿರಕ್ತ ಮಠಾಧ್ಯಕ್ಷರಾದ ಶ್ರೀ ಇಮ್ಮಡಿ ಚನ್ನಮಲ್ಲದೇಶಿಕೇಂದ್ರ ಸ್ವಾಮೀಜಿ ಹಾಗೂ ಬೃಹತ್ ಅನ್ನ ಸಂತರ್ಪಣೆಯ ರೂವಾರಿಗಳು ಮತ್ತು ಜೆಡಿಎಸ್ ಅಭ್ಯರ್ಥಿ ಎಂದೇ ಬಿಂಬಿ ತರಾಗಿರುವ ಮಾದೇಶ್ ಅವರು ಮಾತನಾಡಿ ಕಾರ್ಯಕ್ರಮದ ಬಗ್ಗೆ ವಿವರಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರ್ತವ್ಯಪಥದಲ್ಲಿ ಮೂರು ಪಡೆಗಳಿಂದ ಮೈ ನವಿರೇಳಿಸುವ ಪರೇಡ್​​̤

Thu Jan 26 , 2023
ದೆಹಲಿ:ಕರ್ತವ್ಯಪಥದಲ್ಲಿ ಮೂರು ಪಡೆಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಗೌರವ ವಂದನೆ ಸಲ್ಲಿಸುತ್ತಿವೆ. ವಾಯುಪಡೆ​​​​​​​​​​​ ತಂಡದಿಂದ ಆಕಾಶ್ ಮಿಸೈಲ್, ಏರ್​​​​ ಡಿಫೆನ್ಸ್​​​​​​​​​​​​​​​ ತಂಡ, ಬ್ರಿಡ್ಜ್​​ ಎಂಜಿನಿಯರಿಂಗ್​​​​​​ ತಂಡ, ​​​​ಬ್ರಹ್ಮೋಸ್​-861 ಮಿಸೈಲ್​​​​ ತಂಡ, K9 ವಜ್ರಾ ಟ್ಯಾಂಕ್ ಗ್ರೂಪ್​​ ತಂಡ, ಕ್ವಿಕ್​​ ರೆಸ್ಪಾನ್ಸ್​ ಲಡಾಖ್​ ಸ್ಕೌಟ್​​​ ತಂಡ, ಬಿಎಂಪಿ ಸಾರಥ್​ ಇನ್​ಫೆಂಟ್ರಿ ತಂಡ, ನಾಗಾ ಮಿಸೈಲ್ ಸಿಸ್ಟಂ, ವಾಯುಸೇನೆಯ​ ಬ್ಯಾಂಡ್​​​ ​ನೌಕಪಡೆಯ ಮಹಿಳಾ ತಂಡದಿಂದ ಪರೇಡ್ ನಡೆಯಿತು.   ಇತ್ತೀಚಿನ ಸುದ್ದಿಗಳಿಗಾಗಿ […]

Advertisement

Wordpress Social Share Plugin powered by Ultimatelysocial