ಸ್ಟಾರ್ ಸುವರ್ಣ ಜೇನುಗೂಡು ಎಂಬ ಅದ್ಭುತ ಪ್ರೇಮಕಾವ್ಯವನ್ನು ಫೆಬ್ರವರಿ 21ರಾತ್ರಿ 10ಗಂಟೆಗೆ ತೆರೆಗೆ ತರಲಿದೆ.

 

starಜೇನುಗೂಡು ಸ್ಟಾರ್ ನೆಟ್ವರ್ಕ್ ನ ಅತ್ಯಂತ ಯಶಸ್ವಿಯಾದ ಧಾರಾವಾಹಿಯಾಗಿದೆ. ಸ್ಟಾರ್ ಜಲ್ಸಾ(ಬೆಂಗಾಲಿ) ಈ ಧಾರಾವಾಹಿಯನ್ನು ಮೊಟ್ಟಮೊದಲ ಬಾರಿಗೆ ೨೦೨೦ ರಲ್ಲಿ ಚೋರ್ಕಟೋ ಎಂಬ ಹೆಸರಿನಲ್ಲಿ ತೆರೆಗೆ ತಂದಿದ್ದು ಆನಂತರ ಅದನ್ನು ಅತೀ ಕಡಿಮೆ ಅವಧಿಯಲ್ಲಿ ಯಶಸ್ವಿಯಾಗಿ ಇತರೇ ಭಾಷೆಗಳಾದ ಮಲೆಯಾಳಂ, ಹಿಂದಿ, ಮರಾಠಿ, ತಮಿಳಿಗೆ ತರಲಾಯಿತು. ಈಗ ಇದನ್ನು ಕನ್ನಡಕ್ಕೆ ತರಲಾಗಿದೆ.ಈ ಪ್ರೇಮಕಥೆಯಲ್ಲಿ ಆಧುನಿಕ ಮನೋಭಾವದ ಯುವತಿ,‌ ಮೊದಲು ತಾನು ಮದುವೆ ಆಗುವ ಹುಡುಗನ ಕುಟುಂಬದವರೊಂದಿಗೆ ಪ್ರೇಮಕಥೆಯಲ್ಲಿ ಬೀಳುತ್ತಾಳೆ. ನಂತರ ಆ ಹುಡುಗನ ಜೊತೆ‌ ಈ‌ ಕಥೆಯಲ್ಲಿ ಆಧುನಿಕ ಮನೋಭಾವದ ಈ ಹುಡುಗಿ ಮಧ್ಯಮವರ್ಗದ ವಿಜ್ಞಾನಿ ಹುಡುಗನ ಜೊತೆ ಪ್ರೀತಿಯಲ್ಲಿ ಬಿದ್ದಾಗ ಅವಳ ಬದುಕು ಹೇಗೆ ಬದಲಾಗುತ್ತದೆ ಎಂಬುದನ್ನು ಒಳಗೊಂಡಿದೆ.ನಡುಕೋಟಿ ಕುಟುಂಬದ ಮೂವರು ಅಣ್ಣತಮ್ಮಂದಿರ ಸ್ವಭಾವ ಬೇರೆಬೇರೆ ಅಗಿದ್ದರೂ, ಅವರು ಯಾವಾಗಲೂ ಒಗ್ಗಟ್ಟಿನಿಂದ ಇರುತ್ತಾರೆ. ಈ ಕುಟುಂಬದವರು ಯಾವುದೇ ಸಂದರ್ಭದಲ್ಲೂ ಒಬ್ಬರಿಗೊಬ್ಬರು ಬಿಟ್ಟು ಕೊಡದೆ ಹೊಂದಾಣಿಕೆ ಜೀವನ ನಡೆಸುತ್ತಿರುತ್ತಾರೆ. ಇವರ ಕುಟುಂಬ ಜೇನುಗೂಡಿನ ತರಹ ಬೇರೆಯವರಿಗೆ ಮಾದರಿಯಾಗುವಂತಹ ಕೂಡುಕುಟುಂಬವಾಗಿರುತ್ತದೆ. ಈ ಧಾರಾವಾಹಿಯ ನಾಯಕನಾಗಿರುವ ಎರಡನೇ ತಮ್ಮನ ಮಗ ಶಶಾಂಕನಿಗೆ ವಿಜ್ಞಾನಿಯಾಗಿ ಅಮೇರಿಕಾದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿರುತ್ತದೆ ಆದರೆ ಅವನ ಕುಟುಂಬಕ್ಕಾಗಿ ಅವನು ಆ ಅವಕಾಶವನ್ನು ತ್ಯಜಿಸುತ್ತಾನೆ.‌ಈ‌ ಜೇನುಗೂಡಿನಂತಹ‌ ಕುಟುಂಬ ವೀಕ್ಷಕರನ್ನು ಇದೇ 21ರ ಸೋಮವಾರ ರಾತ್ರಿ 10 ಗಂಟೆಗೆ ಸ್ಟಾರ್ ಸುವರ್ಣ ಮೂಲಕ ರಂಜಿಸಲು ಬರುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತ್ರಿಪುರಾ ಎಲ್ಲಾ ಶಾಲೆಗಳಲ್ಲಿ ರಾಜಕೀಯ ಕಾರ್ಯಕ್ರಮಗಳನ್ನು ನಿಷೇಧಿಸಿದೆ, ಉಲ್ಲಂಘನೆಯ ವಿರುದ್ಧ ಕಠಿಣ ಕ್ರಮಕ್ಕೆ ಆದೇಶ

Sun Feb 20 , 2022
  ನವದೆಹಲಿ: ಶಾಲಾ ಅವಧಿಯಲ್ಲಿ ಶಾಲಾ ಆವರಣದಲ್ಲಿ ರಾಜಕೀಯ ರ್ಯಾಲಿ ಮತ್ತು ಕಾರ್ಯಕ್ರಮಗಳನ್ನು ನಿಷೇಧಿಸಿ ತ್ರಿಪುರಾ ಸರ್ಕಾರ ಆದೇಶ ಹೊರಡಿಸಿದೆ. ಆಟದ ಮೈದಾನ ಸೇರಿದಂತೆ ಯಾವುದೇ ಶಾಲಾ ಸಂಪನ್ಮೂಲಗಳನ್ನು ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟಕರು ರಾಜಕೀಯ ಕಾರ್ಯಕ್ರಮಗಳು ಅಥವಾ ರ್ಯಾಲಿಗಳನ್ನು ನಡೆಸಲು ಬಳಸಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಶಾಲಾ ಅವಧಿಯಲ್ಲಿ ಇಂತಹ ಕಾರ್ಯಕ್ರಮಗಳಿಗೆ ಅವಕಾಶ ನೀಡುತ್ತಿರುವ ಮುಖ್ಯೋಪಾಧ್ಯಾಯರ ಒಂದು ವಿಭಾಗದ ವಿರುದ್ಧ ಇಲಾಖೆಯು ಕೆಲವು ವರದಿಗಳನ್ನು ಸ್ವೀಕರಿಸಿದ ನಂತರ […]

Advertisement

Wordpress Social Share Plugin powered by Ultimatelysocial