ವಸಿಷ್ಠ ಸಿಂಹ-ಹರಿಪ್ರಿಯಾರನ್ನ ಒಟ್ಟಿಗೆ ನೋಡಿ ಡಾಲಿ ಏನಂದ್ರು ಗೊತ್ತಾ?

ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೋಡಿಯಾಗಿಯೇ ಮನೆಗೆ ನಟ ಡಾಲಿ ಧನಂಜಯ್ ಅವರಿಗೆ ತಮ್ಮ ಮದುವೆಗೆ ಆಹ್ವಾನಿಸಿದ್ದಾರೆ. ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಒಟ್ಟಿಗೆ ಮನೆಗೆ ಬಂದಿರೋದನ್ನ ಕಂಡ ನಟ ಡಾಲಿ ಧನಂಜಯ್ ತುಂಬಾ ಖುಷಿಪಟ್ಟಿದ್ದಾರೆ. ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅವರ ಆಹ್ವಾನವನ್ನ ಡಾಲಿ ಧನಂಜಯ್ ಪ್ರೀತಿಯಿಂದಲೇ ಸ್ವೀಕರಿಸಿದ್ದಾರೆ. ಒಬ್ಬನೆ ಬರ್ತಿದ್ದ, ಇವತ್ತು ಇಬ್ಬರು ಬಂದಿದ್ರು, ಮದುವೆಗೆ ಕರಿಯೋದಕ್ಕೆ, ಮುದ್ದಾದ ಜೋಡಿ ಅಂತಲೇ ಡಾಲಿ ಧನಂಜಯ್ ಗೆಳೆಯ ವಸಿಷ್ಠ ಮತ್ತು ಹರಿಪ್ರಿಯಾ ಬಗ್ಗೆ ಹೀಗೆ ಹೇಳಿಕೊಂಡಿದ್ದಾರೆ. ಡಾಲಿ ಧನಂಜಯ್ ತಮ್ಮ ಗೆಳೆಯನ ಮದುವೆ ಆಹ್ವಾನ ಸ್ವೀಕರಿಸೋದಲ್ಲದೇ, ಆ ಕ್ಷಣದ ಫೋಟೋಗಳನ್ನ ಕೂಡ ಈಗ ಶೇರ್ ಮಾಡಿಕೊಂಡಿದ್ದಾರೆ. ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಒಟ್ಟಿಗೇನೆ ಹೋಗಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಇದೇ ಜನವರಿ 26 ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿಯೇ ಮದುವೆ ಆಗುತ್ತಿದ್ದಾರೆ. 28 ರಂದು ಬೆಂಗಳೂರಿನಲ್ಲಿ ರಿಷಪ್ಷನ್ ಕೂಡ ಆಯೋಜನೆ ಮಾಡಿದ್ದಾರೆ. ಆತ್ಮೀಯರಿಗೆ ಲಗ್ನಪತ್ರಿಕೆ ನೀಡಿ ಆಹ್ವಾನಿಸುತ್ತಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannadaz

Please follow and like us:

Leave a Reply

Your email address will not be published. Required fields are marked *

Next Post

ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಆರು ಆರೋಪಿಗಳ ವಿಚಾರಣೆ

Fri Jan 13 , 2023
ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ತಾಯಿ ಮಗು ಸಾವು ಪ್ರಕರಣ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಆರು ಆರೋಪಿಗಳ ವಿಚಾರಣೆ ಘಟನಾ ಸ್ಥಳಕ್ಕೆ ಆರು ಆರೋಪಿಗಳ ಕರೆದೊಯ್ಯೊಯ್ದಿದ್ದ ಪೊಲೀಸರು ಸೈಟ್ ಮ್ಯಾನೇಜರ್ ವಿಕಾಸ್ ಎಂಬಾತನಿಂದ ಪಿಲ್ಲರ್ ಕಾಮಗಾರಿ ಬಗ್ಗೆ ವಿವರಣೆ ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ಗೆ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ ವೇಳೆ ವಿವರಣೆ.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please […]

Advertisement

Wordpress Social Share Plugin powered by Ultimatelysocial