ಬಹುಭಾಷಾ ನಟಿ ಜಯಸುಧಾ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ.

ಹುಭಾಷಾ ನಟಿ ಜಯಸುಧಾ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ. ಒಂದ್ಕಾಲದಲ್ಲಿ ಸ್ಟಾರ್ ನಟಿಯಾಗಿ ಮೆರೆದ ಸಹಜ ನಟಿ ಈ ಪೋಷಕ ಪಾತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. 2017ರಲ್ಲಿ ಜಯಸುಧ 2ನೇ ಪತಿ ನಿತಿನ್ ಕಪೂರ್ ಕೊನೆಯುಸಿರೆಳೆದಿದ್ದರು. ಇದೀಗ ನಟಿ ಒಬ್ಬ ಉದ್ಯಮಿಯ ಕೈ ಹಿಡಿದಿದ್ದಾರೆ ಎನ್ನಲಾಗ್ತಿದೆ. ಕೆಲ ದಿನಗಳಿಂದ ನಟಿ ಜಯಸುಧಾ 3ನೇ ಮದುವೆ ಆಗಿದ್ದಾರೆ ಎನ್ನುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಉದ್ಯಮಿ ಒಬ್ಬರ ಜೊತೆ ಮದುವೆ ಆಗಿದೆ ಎನ್ನಲಾಗ್ತಿದೆ. ಯಾವುದೇ ಸಿನಿಮಾ ಈವೆಂಟ್, ಸೆಲೆಬ್ರೆಟಿಗಳ ಮನೆ ಕಾರ್ಯಕ್ರಮ ಇದ್ದರು ಜಯಸುಧಾ ಜೊತೆ ಆತ ಕಾಣಿಸಿಕೊಳ್ಳುತ್ತಿದ್ದಾನೆ. ಇದನ್ನು ನೋಡಿ ಇಬ್ಬರು ಮದುವೆ ಆಗಿದ್ದಾರೆ ಎನ್ನಲಾಗ್ತಿದೆ. 64ನೇ ವಯಸ್ಸಿಲ್ಲಿ ಸಹಜ ನಟಿ 3ನೇ ಮದುವೆ ಆಗಿದ್ದಾರಾ? ಎಂದು ಕೆಲವರು ಕೇಳುತ್ತಿದ್ದಾರೆ. ಇತ್ತೀಚೆಗೆ ಹಾಸ್ಯ ನಟ ಆಲಿ ಮಗಳ ಮದುವೆಗೆ ಜಯಸುಧಾ ಹಾಗೂ ಆ ಉದ್ಯಮಿ ಒಟ್ಟಿಗೆ ಬಂದಿದ್ದರು. ‘ವಾರೀಸು’ ಸಿನಿಮಾ ಈವೆಂಟ್‌ಗೂ ಜೊತೆಯಾಗಿ ಹಾಜರಾಗಿದ್ದರು. ಇದನ್ನೆಲ್ಲಾ ನೋಡಿ ಜೋಡಿ ಯಾರಿಗೂ ಗೊತ್ತಿಲ್ಲದೇ ಮದುವೆ ಆಗಿದ್ದಾರೆ ಎನ್ನಲಾಗ್ತಿದೆ. ಜಯಸುಧಾ ಮೊದಲಿಗೆ ಸಿನಿಮಾ ನಿರ್ಮಾಪಕ ವಡ್ಡೆ ರಮೇಶ್ ಎಂಬುವವರನ್ನು ವಿವಾಹವಾಗಿದ್ದರು. ಕೆಲ ಭಿನ್ನಾಭಿಪ್ರಾಯಗಳಿಂದ ದಂಪತಿ ದೂರಾಗಿದ್ದರು. ನಂತರ ಬಾಲಿವುಡ್ ನಟ ಜಿತೇಂದ್ರ ಕಪೂರ್ ಸೋದರ ಸಂಬಂಧಿ ನಿತಿನ್ ಕಪೂರ್ ಕೈ ಹಿಡಿದಿದ್ದರು. ಕಾರಣಾಂತರಗಳಿಂದ ನಿತಿನ್ ಸುಸೈಡ್ ಮಾಡಿಕೊಂಡಿದ್ದರು. ನಂತರ ಜಯಸುಧಾ ಮಕ್ಕಳ ಜೊತೆ ವಾಸವಾಗಿದ್ದಾರೆ.ಕಳೆದ ವರ್ಷ ಅನಾರೋಗ್ಯದಿಂದ ಸಹಜ ನಟಿ ಜಯಸುಧಾ ಅಮೇರಿಕಾಗೆ ಹೋಗಿ ಚಿಕಿತ್ಸೆ ಪಡೆದು ಬಂದಿದ್ದರು. ಚಿಕಿತ್ಸೆ ಸಮಯದಲ್ಲಿ ಗುರುತು ಹಿಡಿಯದಂತಾಗಿದ್ದ ನಟಿ ಈಗ ಚೇತರಿಸಿಕೊಂಡಿದ್ದಾರೆ. ‘ವಾರಿಸು’ ಚಿತ್ರದಲ್ಲಿ ದಳಪತಿ ವಿಜಯ್ ತಾಯಿ ಪಾತ್ರದಲ್ಲಿ ನಟಿಸಿದ್ದಾರೆ. ‘ನೀ ತಂದ ಕಾಣಿಕೆ’ ಸಿನಿಮಾ ಮೂಲಕ ದಶಕಗಳ ಹಿಂದೆಯೇ ಜಯಸುಧಾ ಸ್ಯಾಂಡಲ್‌ವುಡ್‌ಗೆ ಬಂದಿದ್ದರು. ‘ತಾಯಿಯ ಮಡಿಲು’ ಹಾಗೂ ‘ವಜ್ರಕಾಯ’ ಸಿನಿಮಾಗಳಲ್ಲಿ ಶಿವರಾಜ್‌ಕುಮಾರ್ ತಾಯಿ ಪಾತ್ರದಲ್ಲಿ ನಟಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannadaz

Please follow and like us:

Leave a Reply

Your email address will not be published. Required fields are marked *

Next Post

ಮಹೇಶ್ ಯೋಗಿ ಭಾರತೀಯ ಯೋಗಪದ್ಧತಿಯ ಮೂಲಕ ಧ್ಯಾನ ಕಲಿಸಿದವರಲ್ಲಿ ಪ್ರಮುಖರು.

Fri Jan 13 , 2023
ಮಹೇಶ್ ಯೋಗಿ ಪಾಶ್ಚಿಮಾತ್ಯರಿಗೆ ಭಾರತೀಯ ಯೋಗಪದ್ಧತಿಯ ಮೂಲಕ ಧ್ಯಾನ ಕಲಿಸಿದವರಲ್ಲಿ ಪ್ರಮುಖರು. ಮಹರ್ಷಿ ಮಹೇಶ್ ಯೋಗಿ ಅವರ ಯೋಗ ಪದ್ಧತಿ ಜಗತ್ತಿನಾದ್ಯಂತ ಹೆಸರುವಾಸಿಯಾಗಿದೆ. ಮಹರ್ಷಿ ಮಹೇಶ್ ಯೋಗಿ ಅವರು ಹುಟ್ಟಿದ್ದು ಮಧ್ಯಪ್ರದೇಶದ ಜಬಲ್‌ಪುರನಲ್ಲಿ. ಇವರ ಜನ್ಮದಿನಾಂಕದ ಬಗ್ಗೆ ನಿಖರವಾದ ದಾಖಲೆಗಳಿಲ್ಲ. ಕೆಲವೊಂದು ಮೂಲಗಳ ಪ್ರಕಾರ 1911ರಿಂದ 1918ರ ಕಾಲಾವಧಿಯಲ್ಲಿ ಮಹರ್ಷಿಯವರು ಜನಿಸಿರಬಹುದೆಂದು ಊಹಿಸಲಾಗಿದೆ. ಕೆಲವು ಮೂಲಗಳ ಪ್ರಕಾರ ಅವರು 1918ರ ಜನವರಿ 12ರಂದು ಜನಿಸಿದರು. ಮನಸ್ಸಿನ ನಿಯಂತ್ರಣ, ಏಕಾಗ್ರತೆ ಸಾಧಿಸುವ […]

Advertisement

Wordpress Social Share Plugin powered by Ultimatelysocial