ನಾವು‌ ಎಳೆಯರು, ನಾವು ಗೆಳೆಯರು ವಿದ್ಯಾವಂತರ ಜಿಲ್ಲೆಯಲ್ಲಿ ಸೌಹಾರ್ದ ಸಂದೇಶ ಸಾರಿದ‌‌ ವಿದ್ಯಾರ್ಥಿನಿಯರು!

 

ದೇಶ ವಿದೇಶಗಳಲ್ಲಿ ಹಿಜಬ್ ಗಲಾಟೆ ದಿನದಿಂದ ದಿನಕ್ಕೆ ತಾರಕಕ್ಕೆ ಏರುತ್ತಿರುವ ಸಮಯದಲ್ಲಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಗೆ ನಾಲ್ವರು ಹಿಂದೂ ವಿದ್ಯಾರ್ಥಿನಿಯರು ಬೆಂಗಾವಲಾಗಿ ನಿಂತು ಕಾಲೇಜಿಗೆ ಕರೆದುಕೊಂಡು ಬಂದಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಉಡುಪಿಯ ಮಹಿಳಾ ಸರಕಾರಿ ಬಾಲಕಿಯರ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಮುಸ್ಲಿಂ ವಿದ್ಯಾರ್ಥಿನಿಯರ ಭಯ, ಕಿರಿಕಿರಿಗೆ ಹಿಂದೂ ಸಹಪಾಠಿಗಳು ಮಾನಸಿಕ ಶಕ್ತಿ ತುಂಬಿ, ಮುಸ್ಲಿಂ ವಿದ್ಯಾರ್ಥಿನಿಗೆ ಬೆಂಗಾವಲಾಗಿ ಹಿಂದೂ ವಿದ್ಯಾರ್ಥಿನಿಯರು ನಿಂತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಬೇರೆ ಜಿಲ್ಲೆಗಳಿಗಿಂತ ಉಡುಪಿ ಜಿಲ್ಲೆ ಭಿನ್ನವಾಗಿತ್ತು. ಇಲ್ಲಿಯವರೆಗೂ ಯಾವುದೇ ಕೋಮು ಸಂಘರ್ಷಗಳು, ಹಿಂದೂ – ಮುಸ್ಲಿಂ ಸಮುದಾಯದ ನಡುವೆ ಬಿರುಕುಗಳಿರಲಿಲ್ಲ. ಹಿಜಬ್ ಮತ್ತು ಕೇಸರಿ ಕಾಳಗದ ನಂತರ ಜಿಲ್ಲೆಯಾದ್ಯಂತ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಒಂದೇ ಬೆಂಚ್‍ನಲ್ಲಿ ಕುಳಿತುಕೊಳ್ಳುವ ಗೆಳತಿಯಾಗಿದ್ದರೂ ಮನೆ ಪಕ್ಕದಲ್ಲಿ ಹತ್ತಾರು ವರ್ಷಗಳಿಂದ ಜೊತೆಗೆ ಜೀವನ ನಡೆಸುತ್ತಿದ್ದರೂ, ಎಲ್ಲರನ್ನೂ ಸಂಶಯದ ದೃಷ್ಟಿಯಿಂದ ನೋಡುವಂತಾಗಿದೆ. ಬುರ್ಖಾ ಹಿಜಬ್ ತೊಟ್ಟು ಕಾಲೇಜಿನ ಕ್ಯಾಂಪಸ್ಸಿಗೆ ಮುಸಲ್ಮಾನ ಸಮುದಾಯದ ವಿದ್ಯಾರ್ಥಿನಿಯರು ಬರುತ್ತಾರೆ. ತರಗತಿಗೆ ಹೋಗುವ ಮುನ್ನ ಬುರ್ಖಾ ಹಿಜಬ್ ಕಳಚಿ ಇಡುತ್ತಾರೆ. ಆದರೆ ಈ ಎಲ್ಲಾ ವಿದ್ಯಾರ್ಥಿಗಳು ಬಹಳ ಇರುಸುಮುರುಸು ಅನುಭವಿಸುತ್ತಿದ್ದಾರೆ. ತನ್ನ ಹಿಂದೂ ಗೆಳತಿಯರ ಜೊತೆ ಬರುತ್ತಾ ಕ್ಯಾಮರಾಗಳನ್ನು ಕಂಡು ಬುರ್ಖಾ ಹಿಜಬ್ ಮತ್ತು ಮಾಸ್ಕ್ ಹಾಕಿದ್ದರೂ ಕೈಯಿಂದ ಮುಖಮುಚ್ಚಿಕೊಂಡು ಕಾಲೇಜಿನ ಕ್ಯಾಂಪಸ್‍ಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

2019 ರಿಂದ ಕಾಣೆಯಾದ 6 ವರ್ಷದ ಯುಎಸ್ ಹುಡುಗಿ, ಮೆಟ್ಟಿಲುಗಳ ಕೆಳಗೆ ರಹಸ್ಯ ಕೋಣೆಯಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾಳೆ!

Fri Feb 18 , 2022
2019 ರಲ್ಲಿ ಕಾಣೆಯಾಗಿದೆ ಎಂದು ವರದಿಯಾದ ನಂತರ ಆರು ವರ್ಷದ ಯುಎಸ್ ಹುಡುಗಿ ನ್ಯೂಯಾರ್ಕ್‌ನ ಮರದ ಮೆಟ್ಟಿಲುಗಳ ಕೆಳಗೆ ಕೋಣೆಯಲ್ಲಿ ಪತ್ತೆಯಾಗಿದ್ದಾಳೆ ಎಂದು ಎಎಫ್‌ಪಿ ವರದಿ ಮಾಡಿದೆ. ಪೈಸ್ಲೀ ಜೋನ್ ಶುಲ್ಟಿಸ್ ಎಂಬ ಹುಡುಗಿ 13 ಜುಲೈ 2019 ರಂದು ಕಾಣೆಯಾಗಿದ್ದಾಳೆ ಎಂದು ವರದಿಯಾಗಿದೆ. ಅವಳು ಕಣ್ಮರೆಯಾದ ಸ್ಥಳದಿಂದ ಸುಮಾರು 240 ಕಿಮೀ ದೂರದ ಸ್ಥಳದಲ್ಲಿ ಅವಳು ಇದ್ದಾಳೆ ಎಂಬ ಸುಳಿವು ಪೊಲೀಸರಿಗೆ ಬಂದ ನಂತರ ಅವಳು ಪತ್ತೆಯಾಗಿದ್ದಳು. ಆಕೆಯ […]

Advertisement

Wordpress Social Share Plugin powered by Ultimatelysocial