ದಿಢೀರ್‌ ʼಹೃದಯಾಘಾತʼ ಕ್ಕೆ ಕಾರಣವೇನು..? ಅಪಾಯದಿಂದ ಪಾರಾಗಲು ಇಲ್ಲಿದೆ ಟಿಪ್ಸ್‌

ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗ್ತಿದೆ. ಅದರಲ್ಲೂ 40 ರಿಂದ 50 ವರ್ಷದೊಳಗಿನವರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಸದಾ ಕುಳಿತೇ ಇರುವ ಜೀವನ ಶೈಲಿ, ಒತ್ತಡ, ಅತಿಯಾದ ಫಾಸ್ಟ್‌ ಫುಡ್‌ ಸೇವನೆ, ಅತಿಯಾದ ಧೂಮಪಾನ ಹೀಗೆ ಇದಕ್ಕೆ ನಾನಾ ಕಾರಣಗಳಿವೆ.ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಹೃದಯ ಅಥವಾ ಮೆದುಳಿಗೆ ರಕ್ತ ಸಂಚಾರ ಸ್ಥಗಿತಗೊಂಡರೆ ಹೃದಯಾಘಾತ ಅಥವಾ ಸ್ಟ್ರೋಕ್‌ ಸಂಭವಿಸುತ್ತದೆ. ಎದೆನೋವು, ಅಸ್ವಸ್ಥತೆ, ಕೈಗಳು, ಎಡ ಭುಜ, ಮೊಣಕೈ, ದವಡೆ ಮತ್ತು ಬೆನ್ನು ನೋವು ಇವೆಲ್ಲವೂ ಹೃದಯಾಘಾತದ ಮುನ್ಸೂಚನೆಗಳು. ಇದಲ್ಲದೆ ಉಸಿರಾಟದಲ್ಲಿ ತೊಂದರೆ, ತಲೆ ತಿರುಗುವಿಕೆ, ವಾಂತಿ, ತಲೆನೋವು, ತಣ್ಣಗಿನ ಬೆವರು ಕೂಡ ಕಾಣಿಸಿಕೊಳ್ಳಬಹುದು.ಹೃದಯಾಘಾತವಾದಾಗ, ಹೃದಯಕ್ಕೆ ರಕ್ತದ ಹರಿವು ಸ್ಥಗಿತಗೊಳ್ಳುತ್ತದೆ, ಇದು ಹೃದಯವನ್ನು ತೀವ್ರವಾಗಿ ಹಾನಿಗೊಳಿಸುತ್ತದೆ. ಜಡ ಜೀವನಶೈಲಿ ಮತ್ತು ಇತರ ಕಾರಣಗಳಿಂದ ಜಗತ್ತಿನಾದ್ಯಂತ ಹೃದಯ ರಕ್ತನಾಳದ ಕಾಯಿಲೆಗಳು ಹೆಚ್ಚಾಗುತ್ತಿವೆ. ಅಧಿಕ ರಕ್ತದೊತ್ತಡ, ಮಧುಮೇಹ ಇತ್ಯಾದಿ ಅಪಾಯಕಾರಿ ಅಂಶಗಳು ಕೂಡ ಇದಕ್ಕೆ ಕಾರಣ.ವ್ಯಾಯಾಮವು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ಆದರೆ ಅಭ್ಯಾಸವಿಲ್ಲದ ವ್ಯಾಯಾಮವು ಹೃದಯಕ್ಕೆ ಹಾನಿ ಮಾಡಬಹುದು. ಅಸ್ವಸ್ಥತೆಗಳಿಗೆ ಕಾರಣವಾಗಬಹುದು. ಮದ್ಯಪಾನ, ಧೂಮಪಾನ, ಮಾದಕ ವಸ್ತುಗಳ ಸೇವನೆಯು ಹೃದಯಾಘಾತಕ್ಕೆ ಕಾರಣವಾಗಬಹುದು.ಮ್ಯಾರಥಾನ್ ಓಟ, ಸಿಕ್ಸ್ ಪ್ಯಾಕ್ ಆಬ್ಸ್‌ ಪಡೆಯುವುದು ಇವೆಲ್ಲ ನಮ್ಮ ಆರೋಗ್ಯಕ್ಕೆ ಒಳ್ಳೆಯದೆಂದು ಎಲ್ಲರೂ ಭಾವಿಸಿದ್ದಾರೆ. ಆದರೆ ವ್ಯಾಯಾಮ ಕೂಡ ಮಿತವಾಗಿದ್ದರೆ ಮಾತ್ರ ಒಳ್ಳೆಯದು. ಶ್ರಮದಾಯಕ ವ್ಯಾಯಾಮವು ಹೃದಯ ಅಂಗಾಂಶದಲ್ಲಿ ಆಮ್ಲಜನಕ ಕೊರತೆಗೆ ಕಾರಣವಾಗಬಹುದು. ಹೃದಯದ ಲಯದಲ್ಲಿ ಅಡಚಣೆ ಉಂಟಾಗಿ ಸಾವು ಬರುವ ಸಾಧ್ಯತೆ ಇರುತ್ತದೆ. ಅತಿಯಾದ ವ್ಯಾಯಾಮದಿಂದ ಹೃದಯ ಬಡಿತ ಮತ್ತು ಬಿಪಿ ಹೆಚ್ಚಾಗಿ ನಮ್ಮ ಹೃದಯದ ಅಪಧಮನಿಗಳಲ್ಲಿ ಸಮಸ್ಯೆಯಾಗುತ್ತದೆ.ಕೋವಿಡ್‌ ಸೋಂಕು ಕೂಡ ಹೃದಯಾಘಾತಕ್ಕೆ ಒಂದು ಕಾರಣವಾಗುವ ಅಪಾಯವಿದೆ. ಕೋವಿಡ್‌ ನಿಂದಾಗಿ ರಕ್ತ ಹೆಪ್ಪುಗಟ್ಟುವ ಅಪಾಯವಿರುತ್ತದೆ. ಧೂಮಪಾನವು ರಕ್ತವನ್ನು ದಪ್ಪವಾಗಿಸುತ್ತದೆ, ಇದರಿಂದಾಗಿ ಸಹ ಹಾರ್ಟ್‌ ಅಟ್ಯಾಕ್‌ ಸಂಭವಿಸಬಹುದು. ಕೆಲವೊಮ್ಮೆ ಜೆನೆಟಿಕ್ಸ್‌ ಕೂಡ ಹೃದಯಾಘಾತಕ್ಕೆ ಪ್ರಮುಖ ಕಾರಣವಾಗಿರುತ್ತದೆ. ನಿಮ್ಮ ರಕ್ತವು ಆನುವಂಶಿಕವಾಗಿ ಹೈಪರ್ ಹೆಪ್ಪುಗಟ್ಟುವಿಕೆಯಿಂದ ಕೂಡಿದ್ದರೆ, ಅದು ನಿಮ್ಮನ್ನು ಹೃದಯಾಘಾತಕ್ಕೆ ಗುರಿಪಡಿಸುತ್ತದೆ.ಹಾಗಾಗಿ 30 ವರ್ಷದ ನಂತರ ಪ್ರತಿಯೊಬ್ಬರೂ ನಿಯಮಿತವಾಗಿ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕು. ಸಮತೋಲಿತ ಆಹಾರವನ್ನು ಸೇವಿಸಲು ಪ್ರಯತ್ನಿಸಿ. ಒತ್ತಡದಿಂದ ಮುಕ್ತರಾಗಿರಿ. ಪ್ರತಿದಿನ ವ್ಯಾಯಾಮ ಮಾಡಿ ಮತ್ತು ಸರಿಯಾದ ತೂಕವನ್ನು ಕಾಪಾಡಿಕೊಳ್ಳಿ ಎಂದು ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannad

Please follow and like us:

Leave a Reply

Your email address will not be published. Required fields are marked *

Next Post

ಇಲ್ಲಿದೆ ಮಸಾಲೆ ಪದಾರ್ಥ ʼಲವಂಗʼದ ಪ್ರಯೋಜನ

Sat Mar 5 , 2022
  ಅಡುಗೆಗೆ ಬಳಸುವ ಲವಂಗ ವಿವಿಧ ಔಷಧಿ ಗುಣಗಳನ್ನು ಹೊಂದಿದೆ. ಲವಂಗವನ್ನು ಅಡುಗೆಗೆ, ಹಲ್ಲುನೋವಿಗೆ ಬಳಸುವುದನ್ನು ಮಾತ್ರ ತಿಳಿದಿದ್ದೇವೆ.ಅತಿಯಾಗಿ ಸುಸ್ತಾದಾಗ ಸೋಮಾರಿತನ ಉಂಟಾಗುತ್ತದೆ, ಇದು ಆರೋಗ್ಯದ ಮೇಲೆ ಹಾನಿ ಮಾಡುತ್ತದೆ. ಈ ಸಮಯದಲ್ಲಿ ಲವಂಗದ ಎಣ್ಣೆಯನ್ನು ಇತರ ಆರೋಗ್ಯಕರ ಪಾನಿಯದೊಂದಿಗೆ ಒಂದು ಹನಿ ಸೇರಿಸಿ ಸೇವಿಸುವುದರಿಂದ ಸುಸ್ತು ದೂರವಾಗುತ್ತದೆ ಮತ್ತು ನಮ್ಮಲ್ಲಿ ಚೈತನ್ಯ ಮೂಡುತ್ತದೆ.ಲವಂಗದ ಎಣ್ಣೆಯನ್ನು ನೀರಿಗೆ ಬೆರೆಸಿ ಮನೆಯ ತುಂಬಾ ಚಿಮುಕಿಸುವುದರಿಂದ ಮನೆ ಸುಗಂಧ ಭರಿತವಾಗಿ ಇರುತ್ತದೆ.ಅಡುಗೆ ಮನೆಯಲ್ಲಿ […]

Advertisement

Wordpress Social Share Plugin powered by Ultimatelysocial