ಪಿ.ಆರ್.ಸುಧಾಕರಲಾಲ್ ನಡಿಗೆ ಗ್ರಾಮ ವಾಸ್ತವ್ಯದ ಕಡೆಗೆ ಚಾಲನೆ

ಕಾಶಾಪುರ ಗ್ರಾಮದಲ್ಲಿ ಪಿ.ಆರ್.ಸುಧಾಕರಲಾಲ್ ಗ್ರಾಮವಾಸ್ತವ್ಯಕೊರಟಗೆರೆ ತಾಲೂಕಿನ ಗಡಿಭಾಗವಾದ ಕಾಶಾಪುರದಲ್ಲಿ ವಾಸ್ತವ್ಯಪಿ.ಆರ್.ಸುಧಾಕರಲಾಲ್ ನಡಿಗೆ ಗ್ರಾಮ ವಾಸ್ತವ್ಯದ ಕಡೆಗೆ ಚಾಲನೆಕಾಶಾಪುರದ ಮನೆಮನೆಗೆ ಪಂಚರತ್ನ ಯೋಜನೆಯ ಕರಪತ್ರ ವಿತರಣೆಅಧಿಕೃತ ಚಾಲನೆ ನೀಡಿದ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ಪ್ರತಿಮನೆಗೂ ತೆರಳಿ ಯೋಜನೆ ಅರಿವು ಮೂಡಿಸಿದ ಮಾಜಿ ಶಾಸಕಕಾಶಪುರದಲ್ಲಿ ಕಾರ್ಯಕರ್ತರ ಜೊತೆಗೂಡಿ ಜೆಡಿಎಸ್ ಪಕ್ಷದ ಸಂಘಟನೆ ರೈತನಾಯಕ ಕುಮಾರಣ್ಣನ ಕನಸಿನ ಯೋಜನೆಯಾದ ಪಂಚರತ್ನದ ಮಹತ್ವವನ್ನು ಕೊರಟಗೆರೆ ವಿಧಾನಸಭಾ ಕ್ಷೇತ್ರದ ಮನೆಮನೆಗೆ ತಲುಪಿಸುವುದೇ ಗ್ರಾಮವಾಸ್ತವ್ಯದ ಪ್ರಮುಖ ಉದ್ದೇಶವಾಗಿದೆ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ತಿಳಿಸಿದರು.ಕೊರಟಗೆರೆ ವಿಧಾನಸಭಾ ಕ್ಷೇತ್ರ ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಪಂ ವ್ಯಾಪ್ತಿಯ ಕಾಶಾಪುರ ಗ್ರಾಮದಲ್ಲಿ ಜಾತ್ಯಾತೀತಾ ಜನತಾದಳ ಪಕ್ಷದಿಂದ ಸೋಮವಾರ ಏರ್ಪಡಿಸಲಾಗಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಗ್ರಾಮೀಣ ಕುಟುಂಬಕ್ಕೆ ಶಿಕ್ಷಣವೇ ಶಕ್ತಿ, ಬಡಜನತೆಗೆ ವಸತಿಯ ಆಸರೆ, ಗ್ರಾಪಂ ಮಟ್ಟದಲ್ಲೇ ಆರೋಗ್ಯವೇ ಸಂಪತ್ತು, ರೈತರ ಆಸರೆಗಾಗಿ ರೈತ ಚೈತನ್ಯ, ಉದ್ಯೋಗ ಸೃಷ್ಟಿಗಾಗಿ ಯುವಜನ ಮತ್ತು ಮಹಿಳಾ ಸಬಲೀಕರಣದ ಪಂಚರತ್ನ ಯೋಜನೆಯು ಕರ್ನಾಟಕ ರಾಜ್ಯ ಮತ್ತು ಕೊರಟಗೆರೆ ಕ್ಷೇತ್ರದ ಅಭಿವೃದ್ದಿಗೆ ಪೂರಕವಾಗಲಿದೆ ಎಂದು ತಿಳಿಸಿದರು.ಕೋಡ್ಲಾಪುರ ಮತ್ತು ಅರಸಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಈಗಾಗಲೇ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮಾಡಿದ್ದೇನೆ. ಕೊರಟಗೆರೆ ಕ್ಷೇತ್ರದಲ್ಲಿ ಪ್ರತಿ ಹೋಬಳಿಯಲ್ಲೂ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಮೂಲಕವೆ ಪಂಚರತ್ನ ಯೋಜನೆಯ ಅರಿವು ಮೂಡಿಸುತ್ತೇನೆ. ಸ್ತಿçÃಶಕ್ತಿ ಸಂಘಗಳ ಸಾಲಮನ್ನ ಮತ್ತು ಹಿರಿಯ ನಾಗರೀಕರ ಮಾಶಾಸನ ಯೋಜನೆಯು ಅತಿಮುಖ್ಯ ಆಗಿವೆ ಎಂದು ತಿಳಿಸಿದರು.ಮನೆಮನೆಗೆ ಪಂಚರತ್ನ ಯೋಜನೆಯ ಕರಪತ್ರಕೊರಟಗೆರೆ ವಿಧಾನಸಭಾ ಕ್ಷೇತ್ರದ ಪುರವಾರ ಹೋಬಳಿಯ ಕೋಡ್ಲಾಪುರ ಗ್ರಾಪಂಯ ವೀರನಾಗೇನಹಳ್ಳಿ, ವಡ್ಡರಹಳ್ಳಿ ಮತ್ತು ಹೊಳವನಹಳ್ಳಿ ಹೋಬಳಿಯ ಹಕ್ಕಿಪಿಕ್ಕಿ ಕಾಲೋನಿ, ರಾಣೋಜಿಪಾಳ್ಯ, ಸಿದ್ದಲಿಂಗಯ್ಯನಪಾಳ್ಯ ಮತ್ತು ಕಾಶಾಪುರದಲ್ಲಿ ಸುಧಾಕರಲಾಲ್ ನಡಿಗೆ ಗ್ರಾಮ ವಾಸ್ತವ್ಯದ ಕಡೆಗೆ ಮೂಲಕ ಮನೆಮನೆಗೆ ಪಂಚರತ್ನ ಯೋಜನೆಯ ಕರಪತ್ರವನ್ನು ಸುಧಾಕರಲಾಲ್ ವಿತರಿಸಿ ಜನರಲ್ಲಿ ಅರಿವು ಮೂಡಿಸಿದರು.ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಮಾಜಿ ತಾಪಂ ಸದಸ್ಯ ಎಲ್.ವಿ.ಪ್ರಕಾಶ್, ಮುಖಂಡರಾದ ರಾಜಣ್ಣ, ಕಿಶೋರ್, ಹೊನ್ನಪ್ಪ, ಗಂಗಾಧರಪ್ಪ, ನಾಗೇಶ್, ಪಾಪಣ್ಣ, ಗೋವಿಂದರಾಜು, ರೆಡ್ಡಪ್ಪ, ವೇಣುಗೋಪಾಲ್, ವೆಂಕಟೇಶ್, ಲಿಂಗಪ್ಪ, ಹರೀಶ್, ರಂಗಯ್ಯ, ಹನುಮಂತರಾಯಪ್ಪ ಸೇರಿದಂತೆ ಇತರರು ಇದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಿಚ್ಚ ಸುದೀಪ್ ನಟನೆಯ 'ವಿಕ್ರಾಂತ್ ರೋಣ'

Tue Jan 10 , 2023
ಪ್ರತಿಷ್ಠಿತ 95ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿಯ ಅರ್ಹತೆ ವಿಭಾಗದಲ್ಲಿ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ ಸಿನೆಮಾ ನಾಮನಿರ್ದೇಶನಗೊಂಡಿದೆ. ಪ್ರತಿಷ್ಠಿತ 95ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿಯ ಅರ್ಹತೆ ವಿಭಾಗದಲ್ಲಿ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ ಸಿನೆಮಾ ನಾಮನಿರ್ದೇಶನಗೊಂಡಿದೆ. ದಕ್ಷಿಣ ಭಾರತೀಯ ಚಿತ್ರಗಳಲ್ಲಿ ನಟನಾ ವಿಭಾಗದಲ್ಲಿ ಈ ಸಿನಿಮಾ ಆಯ್ಕೆಯಾಗಿದ್ದು, ಕನ್ನಡದ ಎರಡು ಚಿತ್ರಗಳು ಈ ಬಾರಿ ಆಸ್ಕರ್ ಅಂಗಳದಲ್ಲಿವೆ. ಕಾಂತಾರ ಮತ್ತು ವಿಕ್ರಾಂತ್ ರೋಣ. ಅನೂಪ್ ಭಂಡಾರಿ ನಿರ್ದೇಶನದಲ್ಲಿ […]

Advertisement

Wordpress Social Share Plugin powered by Ultimatelysocial