ಈ ಬಾರಿ ನಡೆಯುತ್ತಿರುವ ಐಪಿಎಲ್​ಹರಾಜು ಪ್ರಕ್ರಿಯೆಯಲ್ಲಿಆರ್ಯನ್​​ ಖಾನ್​ ಹಾಗೂ ಸುಹಾನಾ ಖಾನ್​ ಭಾಗವಹಿಸಿದ್ದಾರೆ.

ಬಹುನಿರೀಕ್ಷಿತ ಐಪಿಎಲ್​​ ಸೀಸನ್​ ಮತ್ತೆ ಶುರುವಾಗಿದೆ​, ಈ ಬಾರಿ ನಡೆಯುತ್ತಿರುವ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ಶಾರೂಕ್​ ಖಾನ್​ ಮಕ್ಕಳಾದ ಆರ್ಯನ್​​ ಖಾನ್​ ಹಾಗೂ ಸುಹಾನಾ ಖಾನ್​ ಭಾಗವಹಿಸಿದ್ದಾರೆ. ಕಳೆದ ವರ್ಷ ಅಕ್ಟೋಬರ್​ ತಿಂಗಳಲ್ಲಿ ಮದ್ಯ ಸೇವನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನು ಪಡೆದ ಬಳಿಕ ಇದೇ ಮೊದಲ ಬಾರಿಗೆ ಆರ್ಯನ್​ ಖಾನ್​ ಸಾರ್ವಜನಿಕ ಸಭೆಯೊಂದರಲ್ಲಿ ಕಾಣಿಸಿಕೊಂಡಿದ್ದಾರೆ.ಶಾರೂಕ್​ ಖಾನ್​ ಈ ಕಾರ್ಯಕ್ರಮಕ್ಕೆ ಗೈರಾಗಿದ್ದು ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಪರವಾಗಿ ಆರ್ಯನ್​ ಖಾನ್​ ಹಾಗೂ ಸುಹಾನಾ ಖಾನ್​ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾದರು. ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ಆರ್ಯನ್​ ಖಾನ್​ ಮತ್ತು ಸುಹಾನಾ ಖಾನ್ ಇರುವುದು ಗಮನಕ್ಕೆ ಬಂದ ತಕ್ಷಣ ಅವರ ಫೋಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.ನಟಿ ಜೂಹಿ ಚಾವ್ಲಾ ಕೂಡ ಇಬ್ಬರ ಫೋಟೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿದ್ದು ಇಬ್ಬರು ಮಕ್ಕಳನ್ನು ನೋಡುವುದಕ್ಕೆ ತುಂಬಾನೇ ಸಂತಸವಾಗಿದೆ ಎಂದು ಬರೆದುಕೊಂಡಿದ್ದಾರೆ.ಆರ್ಯನ್​ ಖಾನ್​ ಬಗ್ಗೆ ಹೇಳುವುದಾದರೆ, ಮುಂಬೈನ ಅರ್ಥೂರ್​ ರೋಡ್​ ಜೈಲಿನಲ್ಲಿ 28 ದಿನಗಳು ಬಂಧನಕ್ಕೊಳಗಾದ ಬಳಿಕ ಜಾಮೀನಿನ ಮೂಲಕ ಹೊರಬಂದಿದ್ದಾರೆ. ಬಾಂಬೆ ಹೈಕೋರ್ಟ್​ ಇತ್ತೀಚೆಗಷ್ಟೇ ಆರ್ಯನ್​ ಖಾನ್​​ಗೆ ಪ್ರತಿವಾರ ಎನ್​ಸಿಬಿ ಕಚೇರಿಗೆ ಹಾಜರಾಗುವುದರಿಂದ ಮುಕ್ತಿ ನೀಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಟರ್ ಚಿಕನ್ನಿಂದ ಪಹಾಡಿ ಚಿಕನ್;

Sat Feb 12 , 2022
ವಾರಾಂತ್ಯವು ಅಂತಿಮವಾಗಿ ಇಲ್ಲಿದೆ! ಮತ್ತು ನಮ್ಮಲ್ಲಿ ಕೆಲವರಿಗೆ ಇದರ ಅರ್ಥವೇನೆಂದು ನಿಮಗೆ ತಿಳಿದಿದೆ. ಇದು ನಮ್ಮ ಕಟ್ಟುನಿಟ್ಟಿನ ಆಹಾರಗಳನ್ನು ತ್ಯಜಿಸಲು ಮತ್ತು ಅಂತಿಮವಾಗಿ ನಮ್ಮ ನೆಚ್ಚಿನ ಭಕ್ಷ್ಯಗಳಲ್ಲಿ ತೊಡಗಿಸಿಕೊಳ್ಳಲು ಸಮಯವಾಗಿದೆ. ಅದು ಯಾವುದೇ ರೀತಿಯ ಸಿಹಿತಿಂಡಿಯಾಗಿರಲಿ, ಬೆಣ್ಣೆಯಂತಹ ಸಬ್ಜಿ ಅಥವಾ ಮಾಂಸಭರಿತ ಗ್ರೇವಿಯಾಗಿರಲಿ- ನಾವು ಇಷ್ಟಪಡುವ ಭಕ್ಷ್ಯಗಳನ್ನು ನಾವು ಅಂತಿಮವಾಗಿ ತಿನ್ನಬಹುದು. ಆದರೆ ಕೆಲವೊಮ್ಮೆ, ಏನು ಬೇಯಿಸುವುದು ಎಂದು ನಿರ್ಧರಿಸಲು ಪ್ರಯತ್ನಿಸುವಾಗ, ನಾವು ಗೊಂದಲಕ್ಕೊಳಗಾಗಬಹುದು. ಆದ್ದರಿಂದ, ಇದು ನಿಮಗೂ ಸಂಭವಿಸಿದರೆ, […]

Advertisement

Wordpress Social Share Plugin powered by Ultimatelysocial