ಸುಮಧುರವಾಗಿದೆ “ಕೌಟಿಲ್ಯ” ನ ಹಾಡುಗಳು.

 

 

ಸುಪ್ರಸಿದ್ಧ “ಶನಿ” ಧಾರಾವಾಹಿಯಲ್ಲಿ ಶಿವನ ಪಾತ್ರದ ಮೂಲಕ ಗಮನ ಸೆಳೆದಿದ್ದ, “ಜಂಟಲ್ ಮ್ಯಾನ್” ಚಿತ್ರದಲ್ಲಿ ಖಳನಾಯಕನಾಗಿ ಮನೆಮಾತಾಗಿರುವ ಅರ್ಜುನ್ ರಮೇಶ್ ಹಾಗೂ “ಮನಸಾರೆ” ಧಾರಾವಾಹಿ ಖ್ಯಾತಿಯ ಪ್ರಿಯಾಂಕ ಚಿಂಚೋಳಿ ನಾಯಕ- ನಾಯಕಿಯಾಗಿ ನಟಿಸಿರುವ “ಕೌಟಿಲ್ಯ” ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು.

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, “ಮುಂಗಾರು ಮಳೆ” ಚಿತ್ರದ ನಿರ್ಮಾಪಕ ಇ. ಕೃಷ್ಣಪ್ಪ, ಭಾ.ಮ.ಹರೀಶ್ ಹಾಗೂ “ಪ್ರೇಮಪೂಜ್ಯಂ” ಚಿತ್ರದ ಬೃಂದಾ ಆಚಾರ್ಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಹಾಡುಗಳನ್ನು ಬಿಡುಗಡೆ ಮಾಡಿ ಶುಭ ಕೋರಿದರು.

ಪ್ರಭಾಕರ್ ಶೇರ್ ಖಾನೆ ಈ ಚಿತ್ರ ನಿರ್ದೇಶನ ಮಾಡಿದ್ದು, ವಿಜೇಂದ್ರ.ಬಿ.ಎ ನಿರ್ಮಾಣ ಮಾಡಿದ್ದಾರೆ.

ನಾನು ಈವರೆಗೂ ಅಭಿನಯಿಸಿದ್ದ ಎಲ್ಲಾ ಪಾತ್ರಗಳು ಸೌಮ್ಯ ಸ್ವಭಾವದ ಹುಡುಗಿಯದಾಗಿರುತ್ತಿತ್ತು. ಮೊದಲ ಬಾರಿಗೆ ಸ್ವಲ್ಪ ಘಾಟಿ ಹುಡುಗಿ ಪಾತ್ರ ಮಾಡಿದ್ದೇನೆ ಎಂದರು ನಾಯಕಿ ಪ್ರಿಯಾಂಕ ಚಿಂಚೋಳಿ.

ನಾನು ಮೂಲತಃ ಸೇಲ್ಸ್ ರೆಪ್ರೆಸೆಂಟೇಟಿವ್. ಸಿನಿಮಾ ನಿರ್ಮಾಣ ನನ್ನ ಕನಸು. ಅಂದುಕೊಂಡದಕ್ಕಿಂತ ಸ್ವಲ್ಪ ಜಾಸ್ತಿ ಬಜೆಟ್ ನಲ್ಲಿ ಸಿನಿಮಾ ಸಿದ್ದವಾಗಿದೆ. ಸದ್ಯದಲ್ಲೇ ಬಿಡುಗಡೆಯಾಗಲಿದೆ. ನಾನು ಹನುಮಂತನ ಭಕ್ತ ಮುಂದೊಂದು ದಿನ ಹನುಮ ಚರಿತೆ ಸಿನಿಮಾ ಮಾಡುವ ಆಸೆಯಿದೆ ಎಂದರು ನಿರ್ಮಾಪಕ ವಿಜೇಂದ್ರ.

ಹಾಡುಗಳ ಹಾಗೂ ಹಾಡಿರುವವರ ಬಗ್ಗೆ ಸಂಗೀತ ನಿರ್ದೇಶಕ ಕಿರಣ್ ಕೃಷ್ಣಮೂರ್ತಿ ಮಾಹಿತಿ ನೀಡಿದರು. ಅನೇಕ ಚಿತ್ರತಂಡದ ಸದಸ್ಯರು ಚಿತ್ರದ ಬಗ್ಗೆ ಮಾತನಾಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಜಯಭಾಸ್ಕರ್

Thu Mar 3 , 2022
ಮಹಾನ್ ಸಂಗೀತ ನಿರ್ದೇಶಕ ವಿಜಯಭಾಸ್ಕರ್ ಅವರ ಸಂಸ್ಮರಣಾ ದಿನವಿದು. ಈ ಮಹಾನ್ ಸಂಗೀತ ಸಂಯೋಜಕರು 2002ರ ಮಾರ್ಚ್ 3ರಂದು ಈ ಲೋಕವನ್ನಗಲಿದರು. ವಿಜಯಭಾಸ್ಕರ್ ಅವರು ಜನಿಸಿದ್ದು 1931ರ ಸೆಪ್ಟೆಂಬರ್ 7ರಂದು ಅಂತ ಶ್ರಿಧರಮೂರ್ತಿ ಸಾರ್ ಅವರಿಂದ ತಿಳಿದುಬಂತು. ಕೆಲವು ಕಡೆ 1924, 1925 ಇತ್ಯಾದಿ ಬರೆದಿತ್ತು. ‘ಮೂಡಲ ಮನೆಯ ಮುತ್ತಿನ ನೀರಿನ’, ‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ’, ‘ಬೆಳ್ಳಿ ಮೋಡದ ಅಂಚಿನಿಂದ ಮೂಡಿಬಂದ ಮಿನುಗುತಾರೆ’, ‘ಹಾಡೊಂದ ಹಾಡುವೆ ನೀ ಕೇಳೋ […]

Advertisement

Wordpress Social Share Plugin powered by Ultimatelysocial