ಸೂಪರ್‌ಸ್ಟಾರ್ ಸಿನಿಮಾ ಮೊದಲ ವಾರ ಚಿಂತೆ ಮಾಡೋ ಹಾಗೇ ಇಲ್ಲ.

 

ಸೂಪರ್‌ಸ್ಟಾರ್ ಸಿನಿಮಾ ಮೊದಲ ವಾರ ಚಿಂತೆ ಮಾಡೋ ಹಾಗೇ ಇಲ್ಲ. ಸಿನಿಮಾ ಭರ್ಜರಿಯಾಗಿ ಕಲೆಕ್ಷನ್ ಮಾಡುವುದರಲ್ಲಿ ಅನುಮಾನವೇ ಇಲ್ಲ. ಆದರೆ, ಎರಡನೇ ವಾರದಿಂದ ಸಿನಿಮಾ ಕಲೆಕ್ಷನ್ ಹಾಗೆ ಉಳಿದುಕೊಂಡ್ರೆ ಬಾಕ್ಸಾಫೀಸ್‌ ಸಕ್ಸಸ್ ಅಂತ ಸಾಬೀತಾಗುತ್ತೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕ್ರಾಂತಿ’ ಸಿನಿಮಾ ಕೂಡ ಮೊದಲ ಬಾರಿ ಡಿಸೆಂಟ್ ಕಲೆಕ್ಷನ್ ಮಾಡಿದೆ.

ಶುಕ್ರವಾರ (ಜನವರಿ 27) ಒಂದು ದಿನ ಬಿಟ್ಟು ಉಳಿದು ಮೂರು ದಿನಗಳಲ್ಲಿ ಕಲೆಕ್ಷನ್ ಅದ್ಭುತ ಅಂತ ವಿತರಕರು ಹೇಳುತ್ತಿದ್ದಾರೆ.

ಈಗಾಗಲೇ ‘ಕ್ರಾಂತಿ’ ಸಿನಿಮಾದ ನಾಲ್ಕು ದಿನಗಳ ಕಲೆಕ್ಷನ್ ಹೊರಬಿದ್ದಿದೆ. ನಾಲ್ಕೇ ದಿನಕ್ಕೆ 100 ಕೋಟಿ ರೂ.ಗೂ ಅಧಿಕ ಸಂಪಾದನೆ ಮಾಡಿದೆ ಎಂದು ವರದಿಯಾಗಿದೆ. ಸೋಶಿಯಲ್ ಮೀಡಿಯಾಗಳಲ್ಲೂ ಕೂಡ ‘ಕ್ರಾಂತಿ’ 100 ಕೋಟಿ ರೂ. ಕ್ಲಬ್ ಸೇರಿದ್ದು ಟ್ರೆಂಡಿಂಗ್ ಆಗುತ್ತಿದೆ.

‘ಕ್ರಾಂತಿ’ ₹100 ಕೋಟಿ ಸಂಪಾದನೆಗಣರಾಜ್ಯೋತ್ಸವದಂದು (ಜನವರಿ 26) ತೆರೆಕಂಡಿದ್ದ ‘ಕ್ರಾಂತಿ’ ಸಿನಿಮಾ ನಾಲ್ಕು ದಿನ ಕಲೆಕ್ಷನ್ ಚೆನ್ನಾಗಿದೆ. ವೀಕೆಂಡ್‌ನಲ್ಲಿ ಬಹುತೇಕ ಚಿತ್ರಮಂದಿರಗಳು ತುಂಬಿವೆ. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ, ದರ್ಶನ್ ಸಿನಿಮಾ ‘ಕ್ರಾಂತಿ’ ₹100 ಕೋಟಿ ಕ್ಲಬ್ ಸೇರಿದೆ. ಇದರಲ್ಲಿ ಥಿಯೇಟರ್‌ನಿಂದ ಬಂದ ಹಣ, ಸ್ಯಾಟಲೈಟ್ ಹಾಗೂ ಓಟಿಟಿಯಿಂದ ಸೇಲ್ ಆದ ಮೊತ್ತ ಸೇರಿದೆ. ಹೀಗಾಗಿ ‘ಕ್ರಾಂತಿ’ ನಾಲ್ಕು ದಿನಗಳ ಅಂತರದಲ್ಲಿ ₹103.7 ಕೋಟಿ ಸಂಪಾದನೆ ಮಾಡಿದೆ ಎಂದು ಹೇಳಲಾಗುತ್ತಿದೆ.

ಸ್ಯಾಟಲೈಟ್‌ಗೆ ಸೇಲ್ ಆದ ಮೊತ್ತವೆಷ್ಟು?

‘ಕ್ರಾಂತಿ’ ಸ್ಯಾಟಲೈಟ್ ಹಕ್ಕುಗಳು ಭಾರಿ ಮೊತ್ತಕ್ಕೆ ಸೇಲ್ ಆಗಿದೆ. ‘ಕ್ರಾಂತಿ’ ಪ್ರಸಾರದ ಹಕ್ಕು ಉದಯ ಟಿವಿಗೆ ಸೇಲ್ ಆಗಿದೆ. ಮೂಲಗಳ ಪ್ರಕಾರ, ಉದಯ ಟಿವಿಗೆ 13 ಕೋಟಿ ರೂ. ಸೇಲ್ ಆಗಿದೆ ಎನ್ನಲಾಗಿದೆ. ಇನ್ನೊಂದು ಕಡೆ ಒಟಿಟಿ ಹಕ್ಕುಗಳು ಕೂಡ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ. ಇವೆಲ್ಲವನ್ನೂ ಸೇರಿ 100 ಕೋಟಿ ರೂ. ಸಂಪಾದನೆ ಮಾಡಿದೆ ಎಂದು ಹೇಳಲಾಗುತ್ತಿದೆ.

ಥಿಯೇಟರ್‌ನಿಂದ ‘ಕ್ರಾಂತಿ’ ಸಿನಿಮಾ ಗಳಿಸಿದ್ದೆಷ್ಟು?

ಕನ್ನಡ ಸಿನಿಮಾದ ಮತ್ತೊಂದು ಸಿನಿಮಾ 100 ಕೋಟಿ ರೂ. ಕ್ಲಬ್ ಸೇರಿದೆ. ನಾಲ್ಕು ದಿನಗಳಲ್ಲಿ ‘ಕ್ರಾಂತಿ’ ಸಿನಿಮಾ ಚಿತ್ರಮಂದಿರದಿಂದಲೇ ದೊಡ್ಡ ಮೊತ್ತ ಕಲೆಹಾಕಿದೆ. ಮೂಲಗಳ ಪ್ರಕಾರ, ನಾಲ್ಕು ದಿನಗಳಲ್ಲಿ ಕ್ರಾಂತಿ ಸಿನಿಮಾ ಸುಮಾರು 83 ಕೋಟಿ ರೂ.ಗೂ ಅಧಿಕ ಮೊತ್ತ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಈ ಸಿನಿಮಾ ಕಲೆಕ್ಷನ್ ಹೇಗಿರುತ್ತೆ? ಅನ್ನೋದು ಹೊಸ ದಾಖಲೆ ಬರೆಯುತ್ತಾ? ಅನ್ನೋದನ್ನು ನಿರ್ಧರಿಸಲಿದೆ.

ದರ್ಶನ್ 3ನೇ ಸಿನಿಮಾ ₹100 ಕೋಟಿಗೆ ಎಂಟ್ರಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಕ್ರಾಂತಿ’ ಸಿನಿಮಾ ₹100 ಕೋಟಿ ದುಡಿದಿದೆ. ಇದು ₹100 ಕೋಟಿ ಕ್ಲಬ್ ಸೇರಿದ ದರ್ಶನ್ 4ನೇ ಸಿನಿಮಾ. 2019ರಲ್ಲಿ ತೆರೆಕಂಡಿದ್ದ ಪೌರಾಣಿಕ ಸಿನಿಮಾ ‘ಕುರುಕ್ಷೇತ್ರ’ 100 ಕೋಟಿ ರೂ. ಕ್ಲಬ್ ಸೇರಿತ್ತು. ಹಾಗೇ 2021ರಲ್ಲಿ ತೆರೆಕಂಡಿದ್ದ ‘ರಾಬರ್ಟ್’ 100 ಕೋಟಿ ಕ್ಲಬ್‌ಗೆ ಎಂಟ್ರಿ ಕೊಟ್ಟಿತ್ತು. ಈಗ ‘ಕ್ರಾಂತಿ’ ಕೂಡ ಅದೇ ದಾರಿ ಹಿಡಿದಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಂಬಲ್​ ವಾಲೇ ಬಾಬಾ ಎಂದೇ ಪ್ರಸಿದ್ಧರಾಗಿರುವ ಗಣೇಶ್ ಭಾಯಿ ಗುರ್ಜರ್ ಗುಜರಾತ್ ನಿವಾಸಿ.

Mon Jan 30 , 2023
        ಅಹಮದಾಬಾದ್​: ಕಂಬಲ್​ ವಾಲೇ ಬಾಬಾ ಎಂದೇ ಪ್ರಸಿದ್ಧರಾಗಿರುವ ಗಣೇಶ್ ಭಾಯಿ ಗುರ್ಜರ್ ಗುಜರಾತ್ ನಿವಾಸಿ. ಇವರು ಜನರಿಗೆ ಕಾಯಿಲೆಗಳನ್ನು ಗುಣಪಡಿಸಲು ವೈದ್ಯಕೀಯ ವಿಜ್ಞಾನದ ಅಗತ್ಯವಿಲ್ಲ ಎನ್ನುವ ಮೂಲಕ “ವಿಶೇಷ” ಚಿಕಿತ್ಸೆ ನೀಡುತ್ತಾರೆ. ಬಾಬಾ ವಿವಿಧ ನಗರಗಳಲ್ಲಿ 15 ದಿನಗಳ ಶಿಬಿರಗಳನ್ನು ನಡೆಸುತ್ತಿದ್ದಾರೆ. ಶಿಬಿರಗಳಲ್ಲಿ ಭಾಗವಹಿಸಿದ ಅನೇಕರು ಬಾಬಾರ ಕೈ ಅಥವಾ ಕಂಬಳಿಯನ್ನು ಮುಟ್ಟಿದ ನಂತರ ಗುಣಮುಖರಾಗಿದ್ದಾರೆ ಎಂದು ಹೇಳಿಕೊಳ್ಳುತ್ತಾರೆ! ರಾಜಸ್ಥಾನ, ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ಉತ್ತರ […]

Advertisement

Wordpress Social Share Plugin powered by Ultimatelysocial