ನಂದಿನಿಗೆ ಸರ್ಪ್ರೈಸ್ ಕೊಟ್ಟ ‘ಬಿಗ್ ಬಾಸ್’ ವಿನ್ನರ್ ರೂಪೇಶ್ ಶೆಟ್ಟಿ

 

‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದಲ್ಲಿ ರೂಪೇಶ್ ಶೆಟ್ಟಿ ವಿಜೇತರಾಗಿದ್ದಾರೆ. ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮಕ್ಕೆ ಕಾಲಿಡುವ ಮುನ್ನ ‘ಬಿಗ್ ಬಾಸ್ ಕನ್ನಡ ಓಟಿಟಿ 1’ ಕಾರ್ಯಕ್ರಮದಲ್ಲಿ ರೂಪೇಶ್ ಶೆಟ್ಟಿ ಸ್ಪರ್ಧಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ‘ರೋಡೀಸ್’ ವಿನ್ನರ್ ಬೆಂಗಳೂರು ಮೂಲದ ನಂದಿನಿ ಕೂಡ ಸ್ಪರ್ಧಿಸಿದ್ದರು. ‘ಬಿಗ್ ಬಾಸ್’ ಮನೆಯಲ್ಲಿ ರೂಪೇಶ್ ಶೆಟ್ಟಿ ಹಾಗೂ ನಂದಿನಿ ಆತ್ಮೀಯವಾಗಿದ್ದರು. ಹಾಗ್ನೋಡಿದ್ರೆ, ನಂದಿನಿಯನ್ನ ತಂಗಿ ತರಹ ರೂಪೇಶ್ ಶೆಟ್ಟಿ ನೋಡಿಕೊಳ್ಳುತ್ತಿದ್ದರು. ನಂದಿನಿ ಔಟ್ ಆದಾಗ ರೂಪೇಶ್ ಶೆಟ್ಟಿ ಬೇಸರ ಪಟ್ಟುಕೊಂಡಿದ್ದರು. ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದಲ್ಲಿ ಸ್ಪರ್ಧಿಸುವ ಅವಕಾಶ ನಂದಿನಿಗೆ ಸಿಗಲಿಲ್ಲ. ಹೀಗಾಗಿ ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮ ಮುಗಿದ್ಮೇಲೆ ನಂದಿನಿಗೆ ರೂಪೇಶ್ ಶೆಟ್ಟಿ ಸರ್ಪ್ರೈಸ್ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ನಂದಿನಿ ತಮ್ಮ ಜನ್ಮದಿನವನ್ನು ಆಚರಿಸಿಕೊಂಡರು. ನಂದಿನಿ ಅವರ ಬರ್ತ್‌ಡೇ ಪಾರ್ಟಿಗೆ ರೂಪೇಶ್ ಶೆಟ್ಟಿ ಸರ್ಪ್ರೈಸ್ ಎಂಟ್ರಿಕೊಟ್ಟಿದ್ದಾರೆ. ನಂದಿನಿ ಜೊತೆ ರೂಪೇಶ್ ಶೆಟ್ಟಿ ಕಾಲಕಳೆದಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪುಟ್ಟ ಹುಡುಗಿಯ ಖುಷಿಯ ಡ್ಯಾನ್ಸ್‌

Mon Jan 9 , 2023
  ಮನಸ್ಸಿಗೆ ಆನಂದ ನೀಡುವ ದೃಶ್ಯವನ್ನು ಹುಡುಕುತ್ತಿದ್ದೀರಾ ? ಹಾಗಾದರೆ, ಇಲ್ಲಿರುವ ದೃಶ್ಯ ನಿಮಗೆ ಖುಷಿಯಾಗಲೂಬಹುದು. ಇದು ಪುಟ್ಟ ಬಾಲಕಿಯೊಬ್ಬಳು ಅದ್ಭುತವಾಗಿ ನೃತ್ಯ ಮಾಡುವ ದೃಶ್ಯ. ಸಹಜವಾಗಿಯೇ ಈ ವಿಡಿಯೋ ಈಗ ಎಲ್ಲರಲ್ಲೂ ಮುಗುಳ್ನಗೆ ಮೂಡಿಸಿದೆ. ಕೆಲವರು ಈ ದೃಶ್ಯವನ್ನು ಮತ್ತೆ ಮತ್ತೆ ನೋಡಿ ಎಂಜಾಯ್ ಮಾಡುತ್ತಿದ್ದಾರೆ.ಮಕ್ಕಳ ಖುಷಿಯ ಕ್ಷಣದ ದೃಶ್ಯಗಳನ್ನು ನೋಡುವ ಆನಂದವೇ ಬೇರೆ. ಇಂತಹ ದೃಶ್ಯಗಳು ಒಂದು ಕ್ಷಣ ನಮ್ಮ ಎಲ್ಲಾ ನೋವನ್ನು ಮರೆಸಿ ಖುಷಿ ಮೂಡಿಸುತ್ತದೆ. […]

Advertisement

Wordpress Social Share Plugin powered by Ultimatelysocial