ಟಿ. ಎಮ್. ಸೌಂದರರಾಜನ್

ಟಿ. ಎಮ್. ಸೌಂದರರಾಜನ್ ದಕ್ಷಿಣ ಭಾರತದ ಪ್ರಖ್ಯಾತ ಹಿನ್ನೆಲೆ ಗಾಯಕರು.
ಟಿ ಎಮ್ ಸೌಂದರರಾಜನ್ 1922ರ ಮಾರ್ಚ್ 24ರಂದು ಮಧುರೈನಲ್ಲಿ ಜನಿಸಿದರು. ಮುಂದೆ ಹೊಟ್ಟೆ ಪಾಡಿಗಾಗಿ ಮಧುರೈ ಬಿಟ್ಟು ಹೊರಟ ಟಿಎಮ್ಎಸ್, ಕೊಯಂಬತ್ತೂರಿನ ರಾಯಲ್ ಟಾಕೀಸಿಗೆ ತಿಂಗಳಿಗೆ 50ರೂಪಾಯಿ ಸಂಬಳಕ್ಕೆ ಸೇರಿದರು. 1950ರಲ್ಲಿ ಅವರು ‘ಕೃಷ್ಣ ವಿಜಯಂ’ ಚಿತ್ರಕ್ಕೆ ಪ್ರಥಮ ಬಾರಿಗೆ ಹಿನ್ನೆಲೆಗಾಯಕರಾಗಿ ಹಾಡಿದರು. ತಮಿಳು ನಾಡಿನ ಪ್ರಖ್ಯಾತ ಕಲಾವಿದರಾದ ಎಂ. ಜಿ. ರಾಮಚಂದ್ರನ್ ಮತ್ತು ಶಿವಾಜಿ ಗಣೇಶನ್ ಅವರ ಬಹುತೇಕ ಚಿತ್ರಗಳಲ್ಲಿ ಟಿ ಎಮ್. ಸೌಂದರರಾಜನ್ ಅವರ ಗೀತೆಗಳು ಪ್ರಖ್ಯಾತಿ ಪಡೆದಿದ್ದವು. ಪ್ರಾರಂಭದ ದಶಕಗಳಲ್ಲಿ ಅವರು ರಾಜ್ ಕುಮಾರ್, ಕಲ್ಯಾಣ್ ಕುಮಾರ್ ಮುಂತಾದವರಿಗೆ ಕನ್ನಡದಲ್ಲಿ ಸಹಾ ಹಿನ್ನೆಲೆ ಗಾಯನ ನೀಡಿದ್ದರು. ರತ್ನಗಿರಿ ರಹಸ್ಯ, ಪ್ರೇಮ ಮಯಿ ಮುಂತಾದ ಅನೇಕ ಪ್ರಸಿದ್ಧ ಚಿತ್ರಗಳಲ್ಲಿ ಟಿ. ಎಮ್. ಸೌಂದರರಾಜನ್ ಅವರ ಪ್ರಖ್ಯಾತ ಗೀತೆಗಳಿವೆ. ಇವುಗಳಲ್ಲಿ ಅನುರಾಗದ ಅಮರಾವತಿ, ಬಾರೆ ಬಾರೆ ನನ್ನ ಹಿಂದೆ ಹಿಂದೆ ಇಂದಿಗೂ ಜನಪ್ರಿಯ. ಹಿಂದಿ ಮತ್ತು ದಕ್ಷಿಣ ಭಾರತದ ಎಲ್ಲ ಭಾಷೆಗಳನ್ನೂ ಸೇರಿದಂತೆ 13 ಭಾಷೆಗಳ ಸುಮಾರು 10,000ಕ್ಕೂ ಹೆಚ್ಚು ಚಿತ್ರಗೀತೆಗಳು ಮತ್ತು 3000ಕ್ಕೂ ಹೆಚ್ಚು ಭಕ್ತಿಗೀತೆಗಳನ್ನೂ ಹಾಡಿದ್ದ ಟಿ. ಎಮ್. ಸೌಂದರರಾಜನ್ ಅವರ 6 ದಶಕಗಳಿಗೂ ಹೆಚ್ಚು ಕಾಲದ ಗಾಯನ ಸೇವೆ ಅನುಪಮವಾದದ್ದು.
ಟಿ. ಎಮ್. ಸೌಂದರರಾಜನ್ ಅವರು 2013ರ ಮೇ 25ರಂದು 91ನೇ ವಯಸ್ಸಿನಲ್ಲಿ ನಿಧನರಾದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಲಲಿತಾ ಶ್ರೀನಿವಾಸನ್

Thu Mar 24 , 2022
ಭೂಮಿಕೆಯ ಮೇಲೆ ಲಲಿತಾ ಮತ್ತು ಲಾಲಿತ್ಯ ಸೇರಿದರೆ ಮೂಡುತ್ತದೆ ಸುಲಲಿತ ನೃತ್ಯ. ಮತ್ತೆ ಮತ್ತೆ ನೋಡಬೇಕೆನಿಸುವ ಆ ನಿಚ್ಚಳ ನಡೆ. ಶಾಂತ ಚಿತ್ತದ ಆ ಮಧುರ ಮಾರ್ಗ. ಮೊಗದ ಮೇಲೆ ಮೂಡುವ ಆ ಸಾತ್ವಿಕ ಸಂಗತಿ. ಶಾಂತ ನದಿಯಂತೆ ಜುಳು ಜುಳು ಎನ್ನುವ ಘಲ್ ಘಲ್ ಗೆಜ್ಜೆನಾದ. ಆ ಮುದ್ರೆಗಳಲ್ಲಿ ಮೂಡುವ ಅಮೋಘ ಅಭಿನಯ, ಆ ಭಕ್ತಿ, ಪ್ರೇಮ, ಪ್ರಣಯ, ತುಂಟಾಟ, ಉಗ್ರ ಸ್ವರೂಪ, ರಸಾನುಭವ….ಇವೆಲ್ಲವು ಲಲಿತಾ ಮತ್ತು ಲಾಲಿತ್ಯ […]

Advertisement

Wordpress Social Share Plugin powered by Ultimatelysocial