ಮೈಸೂರು ದಸರಾ ಮಹೋತ್ಸವದ ಪೂರ್ವಭಾವಿ ಕಾಮಗಾರಿಗಳು ಪ್ರಗತಿಯಲ್ಲಿರುವುದರಿಂದ ಹಾಗೂ ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಹಿನ್ನೆಲೆಯಲ್ಲಿ ಅಕ್ಟೋಬರ್ 4 ರಿಂದ 21ರವರೆಗೆ ಮೈಸೂರು ಅರಮನೆ ಆವರಣದಲ್ಲಿ ನಡೆಯುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಮೈಸೂರು ಅರಮನೆಯಲ್ಲಿ 2021ನೇ ಸಾಲಿನ ದಸರಾ ಮಹೋತ್ಸವದ ಸಿದ್ಧತೆಗಳು ನಡೆಯುತ್ತಿವೆ. ಮಂಗಳವಾರ ಮೈಸೂರಿನಲ್ಲಿ ಫಿರಂಗಿ ಗಾಡಿಗಳಿಂದ ಕುಶಾಲತೋಪುಗಳನ್ನ ಸಿಡಿಸುವ 2ನೇ ಹಂತದ ತಾಲೀಮು ನಡೆಯಿತು. ಗಜಪಡೆ ಹಾಗೂ ಅಶ್ವಗಳು ಬೆದರದಂತೆ […]

ಮಹಾಲಯ ಅಮಾವಾಸ್ಯೆ ಅಂಗವಾಗಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳುವ ಭಕ್ತರಿಗೆ ನಿರಾಸೆ ಕಾದಿದೆ. ಅಕ್ಟೋಬರ್ 5 ರಿಂದ 7 ರ ತನಕ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಿ ಮೈಸೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಮಂಗಳವಾರ, ಬುಧವಾರ ಮತ್ತು ಗುರುವಾರ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ..ಕೋವಿಡ್ ಮಾರ್ಗಸೂಚಿಗಳ ಅನ್ವಯ ಹೆಚ್ಚು ಜನರು ಸೇರದಂತೆ ತಡೆಯಲು ಮೈಸೂರು ಜಿಲ್ಲಾಧಿಕಾರಿ ಗೌತಮ್ ಬುಗಾದಿ ಭಕ್ತರ ಪ್ರವೇಶವನ್ನ ನಿಷೇಧಿಸಿ ಆದೇಶವನ್ನ ಹೊರಡಿಸಿದ್ದಾರೆ. ಅಕ್ಟೋಬರ್ […]

ಮೈಸೂರು,ಅ.6- ದಸರಾ ಮಹೋತ್ಸವದ ಸಲುವಾಗಿ ಮೈಸೂರು ನಗರ ವ್ಯಾಪ್ತಿಯಲ್ಲಿ ನಾಳೆಯಿಂದ ಅ.15ರವರೆಗೆ ವಿದ್ಯುತ್ ದೀಪಾಲಂಕಾರಕ್ಕೆ ಚಾಲನೆ ದೊರೆಯಲಿದೆ. ನಗರದ ಹೊರ ವರ್ತುಲ ರಸ್ತೆಯ ಒಳ ಭಾಗಕ್ಕೆ ಸೇರಿದ ರಸ್ತೆಗಳು, ವೃತ್ತಗಳನ್ನು ದೀಪಾಲಂಕಾರಗೊಳಿಸಲಾಗಿದ್ದು, ಅತ್ಯಂತ ಆಕರ್ಷಣಿಯ ಹಾಗೂ ವಿನೂತನ ರೀತಿಯಲ್ಲಿ ವ್ಯವಸ್ಥೆಗೊಳಿಸಲಾಗಿದೆ. ಈ ದೀಪಾಲಂಕಾರವನ್ನು ಪ್ರತೀ ದಿನ ಸಂಜೆ 6.30 ರಿಂದ ರಾತ್ರಿ 9.30 ಗಂಟೆಯವರೆಗೆ ಬೆಳಗಿಸಲಾಗುತ್ತದೆ. ಮೈಸೂರು ನಗರದ ನಿವಾಸಿಗಳು, ಪ್ರವಾಸಿಗರು, ಯಾತ್ರಾರ್ಥಿಗಳು, ಗಣ್ಯ ವ್ಯಕ್ತಿಗಳು ದೀಪಾಲಂಕಾರವನ್ನು ವೀಕ್ಷಿಸಲು ಬರುತ್ತಿರುವುದರಿಂದ […]

Advertisement

Wordpress Social Share Plugin powered by Ultimatelysocial