ನಾಳೆಯಿಂದ ಜಗಮಗಿಸಲಿದೆ ಸಾಂಸ್ಕೃತಿಕ ನಗರಿ ಮೈಸೂರು

ಮೈಸೂರು,ಅ.6- ದಸರಾ ಮಹೋತ್ಸವದ ಸಲುವಾಗಿ ಮೈಸೂರು ನಗರ ವ್ಯಾಪ್ತಿಯಲ್ಲಿ ನಾಳೆಯಿಂದ ಅ.15ರವರೆಗೆ ವಿದ್ಯುತ್ ದೀಪಾಲಂಕಾರಕ್ಕೆ ಚಾಲನೆ ದೊರೆಯಲಿದೆ. ನಗರದ ಹೊರ ವರ್ತುಲ ರಸ್ತೆಯ ಒಳ ಭಾಗಕ್ಕೆ ಸೇರಿದ ರಸ್ತೆಗಳು, ವೃತ್ತಗಳನ್ನು ದೀಪಾಲಂಕಾರಗೊಳಿಸಲಾಗಿದ್ದು, ಅತ್ಯಂತ ಆಕರ್ಷಣಿಯ ಹಾಗೂ ವಿನೂತನ ರೀತಿಯಲ್ಲಿ ವ್ಯವಸ್ಥೆಗೊಳಿಸಲಾಗಿದೆ.

ಈ ದೀಪಾಲಂಕಾರವನ್ನು ಪ್ರತೀ ದಿನ ಸಂಜೆ 6.30 ರಿಂದ ರಾತ್ರಿ 9.30 ಗಂಟೆಯವರೆಗೆ ಬೆಳಗಿಸಲಾಗುತ್ತದೆ. ಮೈಸೂರು ನಗರದ ನಿವಾಸಿಗಳು, ಪ್ರವಾಸಿಗರು, ಯಾತ್ರಾರ್ಥಿಗಳು, ಗಣ್ಯ ವ್ಯಕ್ತಿಗಳು ದೀಪಾಲಂಕಾರವನ್ನು ವೀಕ್ಷಿಸಲು ಬರುತ್ತಿರುವುದರಿಂದ ರಸ್ತೆಗಳಲ್ಲಿ ಜನ ದಟ್ಟಣೆ, ವಾಹನ ದಟ್ಟಣೆ ಹೆಚ್ಚಾಗುತ್ತಿದೆ.

ದೀಪಾಲಂಕಾರವನ್ನು ವೀಕ್ಷಿಸುವ ಜನರು ವಿದ್ಯುತ್ ದೀಪಗಳನ್ನು ಸ್ಪರ್ಶಿಸುವುದು, ಸೆಲಿ ತೆಗೆದುಕೊಳ್ಳುವುದು, ಸ್ಪರ್ಶಿಸಲು ಪ್ರಯತ್ನಿಸುವುದು, ಮಾರ್ಗಗಳನ್ನು ಸ್ಪರ್ಶಿಸುವಂತೆ ಮಕ್ಕಳಿಗೆ ಪ್ರೇರೇಪಿಸುವುದು ಇತ್ಯಾದಿ ಅಸುರಕ್ಷಿತ ಚಟುವಟಿಕೆಗಳನ್ನು ಮಾಡಿದರೆ ವಿದ್ಯುತ್ ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದ ಸುರಕ್ಷತೆಯನ್ನು ಕಾಪಾಡಲು ಚಾ.ವಿ.ಸ.ನಿ.ನಿ. ವತಿಯಿಂದ ಈಗಾಗಲೇ ಅಗತ್ಯ ಸಿಬ್ಬಂದಿ ವರ್ಗದವರು, ಅಧಿಕಾರಿಗಳನ್ನು ಆಯ್ದ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸಲು ನಿಯೋಜಿಸಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ರೈತರಿಗೆ ಸರ್ಕಾರದಿಂದ ಸಂತಸದ ಸುದ್ದಿ-ಕರ್ನಾಟಕ ಸರ್ಕಾರ

Wed Oct 6 , 2021
‘ತೋಟಗಾರಿಕೆ ಬೆಳೆ’ಗಳಿಗೆ ತಗಲುವ ಸಹಾಯಧನ ಹೆಚ್ಚಳ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ತೋಟಗಾರಿಕೆ ಇಲಾಖೆಯವರೊಂದಿಗೆ ಚರ್ಚಿಸಿದಂತೆ ಪ್ರಸಕ್ತ ಸಾಲಿನಲ್ಲಿ ಅನುಷ್ಟಾನಗೊಳಿಸುತ್ತಿರುವ ತೋಟಗಾರಿಕೆ ಬೆಳೆಗಳಿಗೆ ತಗುಲುವ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆಯಡಿ ರೈತರಿಗೆ ಒದಗಿಸುತ್ತಿರುವ ಸಹಾಯಧನವನ್ನ ಹೆಚ್ಚಿಸಿದೆ. ಅದ್ರಂತೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆ ರೈತರಿಗೆ ಘಟಕ ವೆಚ್ಚದ ಶೇಕಡ 90ರಂತೆ ಹಾಗೂ ಸಾಮಾನ ವರ್ಗದ ರೈತರಿಗೆ ಘಟಕ ವೆಚ್ಚದ ಶೇ.75ರಂತೆ ನೀಡಬಹುದಾಗಿದೆ. ಅಂದ್ಹಾಗೆ, ಶಿವಮೊಗ್ಗ, ಚಿಕ್ಕಮಗಳೂರು […]

Advertisement

Wordpress Social Share Plugin powered by Ultimatelysocial