ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ನಟನೆಯ ಬಹು ನಿರೀಕ್ಷಿತ ಚಿತ್ರ ಲೈಗರ್ ಟ್ರೇಲರ್ ರಿಲೀಸ್ ಆಗಿದ್ದು, ಬಾಕ್ಸರ್ ಆಗಿ ಮಿಸ್ಟರ್ ವಿಜಯ್ ದೇವರಕೊಂಡ ಅಕ್ಷರಶಃ ಅಬ್ಬರಿ, ಬೊಬ್ಬಿರಿದಿದ್ದಾರೆ. ವಿಜಯ್ ದೇವರಕೊಂಡ, ಪುರಿ ಜಗನ್ನಾಥ್ ಹೈ ವೋಲ್ಟೇಜ್ ಕಾಂಬಿನೇಶನ್ ಲೈಗರ್ ಸೆಟ್ಟೇರಿದ ದಿನದಿಂದಲೂ ಸಾಕಷ್ಟು ಸುದ್ದಿ ಮಾಡಿತ್ತು. ಪೋಸ್ಟರ್ ಗಳಿಂದಲೇ ನಿರೀಕ್ಷೆ ಹೆಚ್ಚಿಸಿದ್ದ ಲೈಗರ್ ಟ್ರೇಲರ್ ಈಗ ಸಿನಿಮಾ ಮೇಲಿನ ಕ್ಯೂರಿಯಾಸಿಟಿಯನ್ನು ದುಪ್ಪಟ್ಟು ಮಾಡಿದೆ.ಮಾಸ್ ಲುಕ್ ನಲ್ಲಿ ವಿಜಯ್ ದೇವರಕೊಂಡ […]

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೋಮವಾರ ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮವು ಯಶಸ್ವಿಯಾಗಿ ಮುಂದುವರಿಯಬೇಕು ಆದರೆ ಅದೇ ಸಮಯದಲ್ಲಿ “ಜನಸಂಖ್ಯಾ ಅಸಮತೋಲನ” ಸಂಭವಿಸಲು ಅವಕಾಶ ನೀಡಬಾರದು ಎಂದು ಹೇಳಿದ್ದಾರೆ. ‘ಜನಸಂಖ್ಯೆ ನಿಯಂತ್ರಣ ಹದಿನೈದು ದಿನಗಳ’ ಆರಂಭದ ಸಮಾರಂಭದಲ್ಲಿ ಮಾತನಾಡಿದ ಅವರು, “ನಾವು ಕುಟುಂಬ ಯೋಜನೆ/ಜನಸಂಖ್ಯಾ ಸ್ಥಿರೀಕರಣದ ಬಗ್ಗೆ ಮಾತನಾಡುವಾಗ, ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮವು ಯಶಸ್ವಿಯಾಗಿ ಮುಂದುವರಿಯಬೇಕು ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು, ಆದರೆ ಅದೇ ಸಮಯದಲ್ಲಿ. ಸಮಯ, ಜನಸಂಖ್ಯೆಯ ಅಸಮತೋಲನದ […]

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ವೇಗವಾಗಿ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 19,968 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ ತಗ್ಗಿದೆ. ಆದರೆ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ. 24 ಗಂಟೆಯಲ್ಲಿ 673 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಈವರೆಗೆ ಕೋವಿಡ್ ಗೆ ಬಲಿಯಾದವರ ಸಂಖ್ಯೆ 511903ಕ್ಕೆ ಏರಿಕೆಯಾಗಿದೆ. ಇನ್ನು ದೇಶದಲ್ಲಿ 224187 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 24 […]

ಬೆಂಗಳೂರು: ಇಂದು ರಾಜ್ಯಾದ್ಯಂತ ‘ಜಿಲ್ಲಾಧಿಕಾರಿಗಳ ನಡೆ, ಹಳ್ಳಿ ಕಡೆ’ ಕಾರ್ಯಕ್ರಮ ಆರಂಭಗೊಂಡಿದೆ. ಬೆಂಗಳೂರು ನಗರ ಜಿಲ್ಲೆ ಸೇರಿದಂತೆ ಹಲವೆಡೆ ಏಕಕಾಲದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಅಧಿಕಾರಿಗಳ ಜತೆ ಆಯಾ ಉಸ್ತುವಾರಿ ಸಚಿವರು, ಶಾಸಕರೂ ಗ್ರಾಮ ವಾಸ್ತವ್ಯಕ್ಕೆ ಹೋಗಿದ್ದು, ಗ್ರಾಮಸ್ಥರು ಖುಷಿಯಾಗಿಯೇ ಬರಮಾಡಿಕೊಂಡು ತಮ್ಮೂರಿನ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮುಂದೆ ಬಿಚ್ಚಿಡುತ್ತಿದ್ದಾರೆ. ಉಡುಪಿಯಲ್ಲಿ ಆರ್​.ಅಶೋಕ್​: ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆಗೆ ಶನಿವಾರ ಮಧ್ಯಾಹ್ನ ಆಗಮಿಸಿದ ಅಶೋಕ್​, ಮೊದಲಿಗೆ ಸುರಾಲು ಶ್ರೀ ಮಹಾಲಿಂಗೇಶ್ವರ […]

  ಬೆಂಗಳೂರು: ‘ನಾನೇ ಕೆಂಪು ಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇನೆಂದು ಸಚಿವ ಕೆ.ಎಸ್‌. ಕುಮಾರಸ್ವಾಮಿ ಹೇಳಿದರು. ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ‘ಭಾರತವನ್ನು ಹಿಂದೂ ರಾಷ್ಟ್ರ ಮಾಡಬೇಕು ಎಂಬುದು ಬಿಜೆಪಿ, ಆರ್‌ಎಸ್‌ಎಸ್‌ ಮತ್ತು ಅದರ ಸಹ ಸಂಘಟನೆಗಳ ಕಾರ್ಯಸೂಚಿ. ಆ ಕಾರಣದಿಂದ ಮುಂದೊಂದು ದಿನ ಕೆಂಪುಕೋಟೆಯಲ್ಲಿ ಯಾರಾದರೂ ಕೇಸರಿ ಧ್ವಜ ಹಾರಿಸಬಹುದು ಎಂದು ಈಶ್ವರಪ್ಪ ಹೇಳಿದ್ದರು’ ಎಂದರು. ‘ಹಿಂದೂ ಸಂಸ್ಕೃತಿ, ಪರಂಪರೆಯಲ್ಲಿ ಕೇಸರಿ ಬಣ್ಣ ಹಾಗೂ ಕೇಸರಿ ವಸ್ತ್ರಕ್ಕೆ ಪೂಜ್ಯ […]

ಡಾ. ರಾಜಕುಮಾರ್ ಅವರ ಚಿತ್ರಜೀವನದಲ್ಲಷ್ಟೇ ಅಲ್ಲ, ಕನ್ನಡ ಚಿತ್ರರಂಗದ ಕ್ಲಾಸಿಕ್ ಚಿತ್ರಗಳಲ್ಲಿ ಒಂದು ಎಂದರೆ ಅದು ‘ಬಬ್ರುವಾಹನ’. 1977ರ ಫೆಬ್ರವರಿ 16ರಂದು ಬಿಡುಗಡೆಯಾದ ಈ ಚಿತ್ರಕ್ಕೆ ಈಗ 45 ವರ್ಷಗಳು. ಮಹಾಭಾರತದ ಕಥೆಯನ್ನು ಆಧರಿಸಿ, ಹುಣಸೂರು ಕೃಷ್ಣಮೂರ್ತಿ ಚಿತ್ರಕಥೆ ಬರೆದು ನಿರ್ದೇಶಿಸಿದ ಈ ಚಿತ್ರದಲ್ಲಿ ರಾಜಕುಮಾರ್ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅರ್ಜುನ ಮತ್ತು ಅವನ ಮಗ ಬಬ್ರುವಾಹನನ ಪಾತ್ರಗಳಲ್ಲಿ ಮಿಂಚಿದ್ದರು. ಕೆ.ಸಿ.ಎನ್. ಗೌಡ ನಿರ್ವಣದ ಈ ಚಿತ್ರದಲ್ಲಿ ಬಿ. ಸರೋಜಾದೇವಿ, ಕಾಂಚನಾ, […]

ಬೆಂಗಳೂರು: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಕಾಂಗ್ರೆಸ್ 2 ನೇ ಹಂತದ ಪಾದಯಾತ್ರೆ ಕೈಗೊಂಡಿದ್ದು, ಇದರಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ.ಫೆಬ್ರವರಿ 27 ರಿಂದ ಪಾದಯಾತ್ರೆ ಆರಂಭವಾಗಲಿದೆ. ಮಾರ್ಚ್ 3 ರಂದು ಮುಕ್ತಾಯವಾಗಲಿದೆ.ಈ ಮೊದಲು ಫೆಬ್ರವರಿ 27 ರಿಂದ ಆರಂಭವಾಗಿ ಮಾರ್ಚ್ 5 ರವರೆಗೆ ಪಾದಯಾತ್ರೆ ನಡೆಯಬೇಕಿತ್ತು. ಬದಲಾವಣೆ ಮಾಡಿದ್ದು, ಮಾರ್ಚ್ 3 ರಂದು ಸಂಜೆ ಬಸವನಗುಡಿಯಲ್ಲಿ ಪಾದಯಾತ್ರೆ ಸಮಾವೇಶದೊಂದಿಗೆ ಮುಕ್ತಾಯವಾಗಲಿದೆ.ಮೊದಲ ಹಂತದ ಪಾದಯಾತ್ರೆ ಆರಂಭವಾಗಿ ರಾಜ್ಯದಲ್ಲಿ ಕೋವಿಡ್ ಸೋಂಕು ತೀವ್ರ […]

ಬೆಂಗಳೂರು, ಫೆ.17- ಮದರಸ ಧಾರ್ಮಿಕ ಶಿಕ್ಷಣಕ್ಕೆ ರಾಜ್ಯ ಸರ್ಕಾರದ ಯಾವ ಇಲಾಖೆಯಿಂದಲೂ ಅನುಮತಿ ನೀಡುವ ಮಾರ್ಗಸೂಚಿಗಳು ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.ವಿಧಾನ ಪರಿಷತ್‍ನಲ್ಲಿ ಬಿಜೆಪಿ ಸದಸ್ಯ ಮುನಿರಾಜುಗೌಡ ಪಿ.ಎಂ. ಅವರ ಪ್ರಶ್ನೆಗೆ ಉತ್ತರ ನೀಡಿರುವ ಮುಖ್ಯಮಂತ್ರಿ, ಇಸ್ಲಾಂ ಧರ್ಮದ ಸಿದ್ಧಾಂತ ಮತ್ತು ಇಸ್ಲಾಂ ಧರ್ಮದ ಅನುಯಾಯಿಗಳು ದಿನನಿತ್ಯದ ಜೀವನದಲ್ಲಿ ಪಾಲಿಸಬೇಕಾದ ರೀತಿ ನೀತಿಗಳನ್ನು ಬೋಧಿಸುವ ಶಿಕ್ಷಣ ವ್ಯವಸ್ಥೆ ಮದರಸಾಲ್ಲಿದೆ.ಪವಿತ್ರ ಖುರಾನ್‍ನಲ್ಲಿ ಸಾರಲಾಗಿರುವ ಸಿದ್ಧಾಂತಗಳ ಅನ್ವಯ ಪ್ರವಾದಿರವರ ಉಪದೇಶಗಳನ್ನು […]

ನವದೆಹಲಿ: ಕರ್ನಾಟಕದ ಕಾಲೇಜೊಂದರಿಂದ ಹಿಜಾಬ್ ಬಗ್ಗೆ ಆರಂಭವಾದ ವಿವಾದವನ್ನು ತಡೆಯಲು ಆಗುತ್ತಿಲ್ಲ. ಹಿಜಾಬ್ ಗಲಾಟೆ ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಈ ಕುರಿತು ಮತ್ತೊಮ್ಮೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಟ್ವೀಟ್ ಮಾಡಿದ್ದಾರೆ.ಈ ಬಗ್ಗೆ ಟ್ವೀಟ್ ನಲ್ಲಿ ಓವೈಸಿ, ‘ಇನ್ಶಾ ಅಲ್ಲಾ ಒಂದು ದಿನ ಹಿಜಾಬಿ ಪ್ರಧಾನಿಯಾಗುತ್ತಾರೆ’ ಎಂದು ಬರೆದಿದ್ದಾರೆ.ಟ್ವೀಟ್ ವಿಡಿಯೋದಲ್ಲಿ ಮಾತನಾಡಿರುವ ಓವೈಸಿ, ‘ನಮ್ಮ ಹೆಣ್ಣುಮಕ್ಕಳು ಹಿಜಾಬ್ ಧರಿಸಲು ಬಯಸಿದರೆ ಅಮ್ಮ-ಅಬ್ಬಾ ಹೇಳುವರು – ಮಗು ಧರಿಸು. ಯಾರು ನಿಮ್ಮನ್ನು […]

    ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ಕೊಟ್ಟಿರುವ ಆರ್ ಎಸ್ ಪ್ರೊಡಕ್ಷನ್ಸ್ ಸಂಸ್ಥೆ ಮೂಲಕ ಆರ್ ಶ್ರೀನಿವಾಸ್ ನಿರ್ಮಿಸುತ್ತಿರುವ ಇಪ್ಪತ್ತನೆಯ ಚಿತ್ರ “ಕಾಟನ್ ಪೇಟೆ ಗೇಟ್” ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ಬೆಂಗಳೂರು, ಹೈದರಾಬಾದ್ ನಲ್ಲಿ ಚಿತ್ರೀಕರಣ ನಡೆದಿದೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ವೈ ರಾಜಕುಮಾರ್ ನಿರ್ದೇಶಿಸುತ್ತಿದ್ದಾರೆ. […]

Advertisement

Wordpress Social Share Plugin powered by Ultimatelysocial