ಇಂದು ರಾಜ್ಯಾದ್ಯಂತ ‘ಜಿಲ್ಲಾಧಿಕಾರಿಗಳ ನಡೆ, ಹಳ್ಳಿ ಕಡೆ’ ಕಾರ್ಯಕ್ರಮ ಆರಂಭಗೊಂಡಿದೆ.

ಬೆಂಗಳೂರು: ಇಂದು ರಾಜ್ಯಾದ್ಯಂತ ‘ಜಿಲ್ಲಾಧಿಕಾರಿಗಳ ನಡೆ, ಹಳ್ಳಿ ಕಡೆ’ ಕಾರ್ಯಕ್ರಮ ಆರಂಭಗೊಂಡಿದೆ. ಬೆಂಗಳೂರು ನಗರ ಜಿಲ್ಲೆ ಸೇರಿದಂತೆ ಹಲವೆಡೆ ಏಕಕಾಲದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಅಧಿಕಾರಿಗಳ ಜತೆ ಆಯಾ ಉಸ್ತುವಾರಿ ಸಚಿವರು, ಶಾಸಕರೂ ಗ್ರಾಮ ವಾಸ್ತವ್ಯಕ್ಕೆ ಹೋಗಿದ್ದು, ಗ್ರಾಮಸ್ಥರು ಖುಷಿಯಾಗಿಯೇ ಬರಮಾಡಿಕೊಂಡು ತಮ್ಮೂರಿನ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮುಂದೆ ಬಿಚ್ಚಿಡುತ್ತಿದ್ದಾರೆ.

ಉಡುಪಿಯಲ್ಲಿ ಆರ್​.ಅಶೋಕ್​: ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆಗೆ ಶನಿವಾರ ಮಧ್ಯಾಹ್ನ ಆಗಮಿಸಿದ ಅಶೋಕ್​, ಮೊದಲಿಗೆ ಸುರಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ನಂತರ ಕೊಕ್ಕರ್ಣೆ ಪಬ್ಲಿಕ್ ಸ್ಕೂಲ್​ನಲ್ಲಿ ಗೋಪೂಜೆಯೊಂದಿಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. ವಿಕಲಚೇತನ ಫಲಾನುಭವಿಗಳಿಗೆ ಸಾಧನಾ ಸಲಕರಣೆ ಹಾಗೂ ರೈತರಿಗೆ ಮಿಶ್ರತಳಿ ರಾಸುಗಳನ್ನು ವಿತರಿಸಿದರು.

ಬೆಂಗಳೂರಲ್ಲಿ ಏಕಕಾಲಕ್ಕೆ ಚಾಲನೆ: ದಕ್ಷಿಣ ತಾಲೂಕಿನ ಚುಂಚನ ಕುಪ್ಪೆಯಲ್ಲಿ ಗ್ರಾಮ ವಾಸ್ತವ್ಯಕ್ಕೆ ಸಚಿವ ಎಸ್.ಟಿ. ಸೋಮಶೇಖರ್ ಚಾಲನೆ ನೀಡಿದರೆ, ಬಿಡಿಎ ಅಧ್ಯಕ್ಷರೂ ಆದ ಶಾಸಕ ವಿಶ್ವನಾಥ್ ಗೋಪಾಲಪುರ ಗ್ರಾಮದಲ್ಲಿ ಚಾಲನೆ ನೀಡಿದರು. ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಕಣ್ಣೂರನಲ್ಲಿ ಚಾಲನೆ ನೀಡಿದರು. ಆನೇಕಲ್ ತಾಲೂಕು ಕರ್ಪೂರ ಗ್ರಾಮದಲ್ಲಿ ತಹಸೀಲ್ದಾರ್ ಪಿ. ದಿನೇಶ್ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಜೆ. ಮಂಜುನಾಥ ಅವರು ಕಣ್ಣೂರು ಮತ್ತು ಚುಂಚನಕುಪ್ಪೆಯಲ್ಲೂ ಭಾಗವಹಿಸಿದ್ದರು.

ಹೀಗೆ ತುಮಕೂರು, ಕೋಲಾರ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ವಿಜಯಪುರ, ಚಿತ್ರದುರ್ಗ ಸೇರಿದಂತೆ ಹಲವೆಡೆ ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಹೂಡಿ ಜನರ ಸಮಸ್ಯೆ ಆಲಿಸುತ್ತಿದ್ದಾರೆ. ತಮ್ಮೂರಿಗೆ ಬಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.

ಉಡುಪಿಯಲ್ಲಿ ಆರ್​.ಅಶೋಕ್​: ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆಗೆ ಶನಿವಾರ ಮಧ್ಯಾಹ್ನ ಆಗಮಿಸಿದ ಅಶೋಕ್​, ಮೊದಲಿಗೆ ಸುರಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ನಂತರ ಕೊಕ್ಕರ್ಣೆ ಪಬ್ಲಿಕ್ ಸ್ಕೂಲ್​ನಲ್ಲಿ ಗೋಪೂಜೆಯೊಂದಿಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. ವಿಕಲಚೇತನ ಫಲಾನುಭವಿಗಳಿಗೆ ಸಾಧನಾ ಸಲಕರಣೆ ಹಾಗೂ ರೈತರಿಗೆ ಮಿಶ್ರತಳಿ ರಾಸುಗಳನ್ನು ವಿತರಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಆಧಾರ್ ಕಾರ್ಡ್ ನವೀಕರಣ: ಆಧಾರ್-ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಲು ಹಂತಗಳನ್ನು ಪರಿಶೀಲಿಸಿ

Sat Feb 19 , 2022
  ಹೊಸದಿಲ್ಲಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಹಲವಾರು ಸೇವೆಗಳನ್ನು ಪಡೆಯಲು ಭಾರತೀಯ ನಿವಾಸಿಗಳಿಗೆ ನಿರ್ಣಾಯಕವಾಗಿರುವ 12 ಅಂಕೆಗಳ ಗುರುತಿನ ದಾಖಲೆಯಾದ ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಕಾರ್ಯಾಚರಣೆಗಳನ್ನು ವಿತರಿಸುತ್ತದೆ ಮತ್ತು ನಿರ್ವಹಿಸುತ್ತದೆ. ಪ್ರಯೋಜನಗಳನ್ನು ಪಡೆಯಲು ಕಾರ್ಡ್‌ದಾರರು ತಮ್ಮ ವಿವರಗಳನ್ನು ಆಧಾರ್ ಕಾರ್ಡ್‌ನಲ್ಲಿ ನವೀಕರಿಸಬೇಕಾಗುತ್ತದೆ. UIDAI ಕಾರ್ಡ್‌ದಾರರಿಗೆ ಫೋನ್ ಸಂಖ್ಯೆ, ವಿಳಾಸ, ಫೋಟೋ, ಹೆಸರು, ಜನ್ಮ ದಿನಾಂಕ ಮತ್ತು ಇ-ಮೇಲ್ ಐಡಿ ಮುಂತಾದ ಆಧಾರ್ ಕಾರ್ಡ್‌ನಲ್ಲಿರುವ ವಿವರಗಳನ್ನು ಬದಲಾಯಿಸಲು ಅನುಮತಿಸುತ್ತದೆ. […]

Advertisement

Wordpress Social Share Plugin powered by Ultimatelysocial